ಜ್ಯ ರಾಜಕಾರಣದಲ್ಲಿ ಚಿತ್ತಾಕರ್ಷಕ ವ್ಯಕ್ತಿತ್ವ ಹೊಂದಿದ್ದ ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರು ರಾಷ್ಟ್ರ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭೆ ಸ್ಪೀಕರ್ ಸ್ಥಾನಗಳನ್ನು ಹೊರತುಪಡಿಸಿ ರಾಜಕೀಯ ನಾಯಕರೊಬ್ಬರು ಅಲಂಕರಿಸಬಹುದಾದ ಎಲ್ಲ ಹುದ್ದೆಗಳನ್ನು ನಿರ್ವಹಿಸಿ, ಸೈ ಎನಿಸಿಕೊಂಡಿದ್ದರು.
ಅಂಥ ಮಹಾನ್ ನಾಯಕರೊಬ್ಬರನ್ನು ಕಳೆದುಕೊಂಡ ಕರ್ನಾಟಕ ಈಗ ಅಕ್ಷರಶಃ ಬಡವಾಗಿದೆ. ಸಂಸದೀಯ ರಾಜಕಾರಣದಲ್ಲಿ ಶಾಸಕರಿಂದ ಹಿಡಿ…