ವಜ್ರಮುನಿ ವಿರುದ್ಧದ ಹೇಳಿಕೆ : ರಾಕ್‍ಲೈನ್ ವೆಂಕಟೇಶ್ ಕ್ಷಮೆಯಾಚಿಸಲು ಆಗ್ರಹ

 



ಬೆಂಗಳೂರು,ಜು.12- ಖಳನಟ ದಿವಂಗತ ವಜ್ರಮುನಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ವಿರುದ್ಧ ನಟ ಭಯಂಕರ ಹಾಗೂ ಖಳನಟರ ಅಭಿಮಾನಿಗಳ ಕನ್ನಡ ಸಾಂಸ್ಕøತಿಕ ವೇದಿಕೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಕನ್ನಡ ಚಿತ್ರರಂಗದ ಅತ್ಯುತ್ತಮ ಖಳನಟರೆಂದೇ ಹೆಸರು ಮಾಡಿದ್ದ ವಜ್ರಮುನಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಕನ್ನಡ ಸಾಂಸ್ಕøತಿಕ ಲೋಕಕ್ಕೆ ಅವಮಾನ ಮಾಡಿದಂತೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ವಸಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post