ನವದೆಹಲಿ, ಆ.30-ಒಂದೇ ದಿನ 42,909 ಸೋಂಕು ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,27,37,939 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸತತ ಐದು ದಿನಗಳಿಂದ ಸಕ್ರೀಯ ಸೋಂಕು ಪ್ರಕರಣದಲ್ಲೂ ಏರಿಕೆ ಕಂಡು ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆಯಿಂದ 380 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಕೊರೊನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,38 ಲಕ್ಷದ ಗಡಿ ದಾಟಿದೆ. ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.51ಕ್ಕೆ ಏರಿಕೆಯಾಗಿದ್ದರೂ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸೋಂಕಿನಲ್ಲಿ 7766 ಏರಿಕೆ ಕಂಡು ಬಂದಿರುವುದು ಆತಂಕಕಾರಿಯಾಗಿದೆ.
ನಿನ್ನೆ ಒಂದೇ ದಿನ ದೇಶಾದ್ಯಂತ ಅಂದಾಜು 15 ಲಕ್ಷ ಮಂದಿಯ ಸ್ವಾಬ್ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ದೇಶದಲ್ಲಿ ಇದುವರೆಗೂ 52 ಕೋಟಿಗೂ ಹೆಚ್ಚು ಮಂದಿಯ ತಪಾಸಣೆ ನಡೆಸಿದಂತಾಗಿದೆ. ಕಳೆದ 35 ದಿನಗಳ ನಂತರ ದಿನದ ಕೊರೊನಾ ಪಾಸಿಟಿವಿಟಿ ದರವೂ ಶೇ.3ರ ಗಡಿ ದಾಟಿರುವುದು ವಿಶೇಷ.
ಆದರೆ, ವಾರದ ಪಾಸಿಟಿವಿಟಿ ರೇಟ್ ಕಳೆದ 66 ದಿನಗಳಿಂದ ಶೇ.3ರೊಳಗಿದ್ದು, ಇಂದು ಶೇ.2.41 ರಷ್ಟಿದೆ ಎಂದು ಸಚಿವಾಲಯ ವಿವರಣೆ ನೀಡಿದೆ.
Post a Comment