Krishna Janmashtami 2021 : ಇಲ್ಲಿದೆ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ಆಚರಣೆ ಮಾಡುವ ವಿಧಾನ

 

SHREE KRISHNA

Janmashtami: ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಸಹ ವಿಶೇಷವಾಗಿ ಜನರು ಆಚರಿಸುತ್ತಾರೆ. ಈ ದಿನ, ಶ್ರೀಕೃಷ್ಣನ ಭಕ್ತರು 'ಜಂಕೀಸ್' ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ

Festival: ಇದು ಶ್ರಾವಣ ಮಾಸ. ಈ ಮಾಸ ಬಂತೆಂದರೆ  ಒಂದರ ಮೇಲೊಂದು ಹಬ್ಬಗಳು ಬರುತ್ತಲೇ ಇರುತ್ತದೆ. ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನದ ನಂತರ ಬರುವ ಮುಖ್ಯವಾದ ಹಬ್ಬ ಎಂದರೆ ಅದು ಕೃಷ್ಣ ಜನ್ಮಾಷ್ಟಮಿ.  ಇನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ವಿಷ್ಣುವಿನ  ಅವತಾರವಾದ ಶ್ರೀ ಕೃಷ್ಣನಿಗೆ ಪವಿತ್ರವಾದ ಸ್ಥಾನವಿದೆ,  ಆತನನ್ನ ಜನರು ಪರಮಾತ್ಮನೆಂದು ಆರಾಧಿಸುತ್ತಾರೆ.  ಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಜನ್ಮಾಷ್ಟಮಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಸಹ ವಿಶೇಷವಾಗಿ ಜನರು ಆಚರಿಸುತ್ತಾರೆ. ಈ ದಿನ, ಶ್ರೀಕೃಷ್ಣನ ಭಕ್ತರು 'ಜಂಕೀಸ್' ಹಾಕಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಶ್ರೀಕೃಷ್ಣನ ಜನ್ಮದಿನವನ್ನು ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ, ಇದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಬರುತ್ತದೆ. ಈ ವರ್ಷ, ಹಬ್ಬವನ್ನು ಸೋಮವಾರ, ಆಗಸ್ಟ್ 30 ರಂದು ಆಚರಣೆ ಮಾಡಲಾಗುತ್ತಿದೆ. 


ದೇಶದಾದ್ಯಂತ ಈ ಹಬ್ಬವನ್ನು   ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಭಕ್ತರು ಭಗವಂತನ ಜನ್ಮ ವಾರ್ಷಿಕೋತ್ಸವವನ್ನು ಸಂತೋಷದಿಂದ ಆಚರಣೆ ಮಾಡಿ, ಆನಂದಪಡುತ್ತಾರೆ.


Post a Comment

Previous Post Next Post