ಕೇರಳದಲ್ಲಿ ರಾಜ್ಯದ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ30 ಸಾವು ವರದಿ ,ತಮಿಳುನಾಡು – ಕೇರಳ ನಡುವಿನ ರೈಲು ಸಂಚಾರ ರದ್ದು?

ಒಂದು ವರದಿ
ಕೊಟ್ಟಾಯಂ ಜಿಲ್ಲೆಯ ಕೂಟಿಕಲ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಇಂದು 7 ಮೃತ ದೇಹಗಳನ್ನು ಪತ್ತೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಸಾವಿನ ಸಂಖ್ಯೆ 10 ಕ್ಕೇರಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರ 4 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಾಯಾರ್‌ನಲ್ಲಿ ಸಂಭವಿಸಿದ ಅನೇಕ ಭೂಕುಸಿತಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ, ಅಲ್ಲಿ ಅನೇಕ ಜನರು ಕಾಣೆಯಾಗಿದ್ದಾರೆ. ಇಡುಕ್ಕಿಯಲ್ಲಿ, ಮಳೆ ಸಂಬಂಧಿತ ವಿವಿಧ ಘಟನೆಗಳಲ್ಲಿ ಮೂರು ಸಾವುಗಳನ್ನು ಅಧಿಕೃತ ಪಡಿಸಲಾಗಿದೆ. ಅಪಾಯ ಪೀಡಿತ ಪ್ರದೇಶಗಳ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಅನೇಕ ಪ್ರದೇಶಗಳಲ್ಲಿ ಮಳೆಯ ತೀವ್ರತೆಯು ಕಡಿಮೆಯಾಗಿದೆ ಮತ್ತು ಇಂದು ರಾತ್ರಿಯ ವೇಳೆಗೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ, ಆದರೆ ಅಧಿಕಾರಿಗಳು ಜಾಗರೂಕರಾಗಿರಲು ಸಾರ್ವಜನಿಕರನ್ನು ಕೋರಿದ್ದರು. ಏತನ್ಮಧ್ಯೆ ಭಾರೀ ಮಳೆಯಿಂದಾಗಿ, ನಾಳೆಯ ಪ್ಲಸ್-ಒನ್ ಮತ್ತು ಎಂಜಿ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಕ್ಟೋಬರ್ 17 ಮತ್ತು 18 ರಂದು ತಮಿಳುನಾಡಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಕನಿಷ್ಠ ನಾಲ್ಕು ರೈಲುಗಳು ಭಾಗಶಃ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ‘17.10.2021 ರಂದು ಚೆನ್ನೈ ಎಗ್ಮೋರ್ ನಿಂದ ಹೊರಡುವ ವಿಶೇಷ ರೈಲು ಸಂಖ್ಯೆ 06101 ಚೆನ್ನೈ ಎಗ್ಮೋರ್ – ಕೊಲ್ಲಂ ರೈಲನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ರದ್ದುಗೊಳಿಸಲಾಗಿದೆ. 17.10.2021 ರಂದು ಹೊರಡುವ ರೈಲು ಸಂಖ್ಯೆ 06792 ಪಾಲಕ್ಕಾಡ್ – ತಿರುನೆಲ್ವೇಲಿ ವಿಶೇಷ ರೈಲು ಪ್ರಯಾಣಯನ್ನು ಪುನಲೂರು ಮತ್ತು ತಿರುನೆಲ್ವೇಲಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. 17.10.2021 ರಂದು ಹೊರಡುವ ರೈಲು ಸಂಖ್ಯೆ 06791 ತಿರುನೆಲ್ವೇಲಿ – ಪಾಲಕ್ಕಾಡ್ ವಿಶೇಷ ರೈಲನ್ನು ತಿರುನೆಲ್ವೇಲಿ ಮತ್ತು ಪುನಲೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. 18.10.2021 ರಂದು ಹೊರಡುವ ರೈಲು ಸಂಖ್ಯೆ 06102 ಕೊಲ್ಲಂ – ಚೆನ್ನೈ ಎಗ್ಮೋರ್ ವಿಶೇಷ ರೈಲು ಪ್ರಯಾಣವನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಹಲವು ಭೂಕುಸಿತಗಳ ಸಂಭವಿಸಿವೆ. ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿದೆ.

Post a Comment

Previous Post Next Post