ಬೆಂಗಳೂರಿನಲ್ಲಿ 1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತದ ವಿಜಯದ ಐವತ್ತು ವರ್ಷಗಳ ಸ್ಮರಣಾರ್ಥವಾಗಿ ಸ್ವರ್ಣಿಮ್ ವಿಜಯ್ ವರ್ಷ

1971ರ ಭಾರತ-ಪಾಕ್ ಯುದ್ಧವು ಇತಿಹಾಸದಲ್ಲಿ ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ರಕ್ಷಿಸಲು ಹೋರಾಡಿದ ಕೆಲವೇ ಯುದ್ಧಗಳಲ್ಲಿ ಒಂದಾಗಿದ್ದು, ಇದು ಯಾವುದೋ‌ ಒಂದು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲೋ ಅಥವಾ ಅಧಿಕಾರವನ್ನು ಪಡೆದುಕೊಳ್ಳುವುದಕ್ಕಲ್ಲ‌ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತದ ವಿಜಯದ ಐವತ್ತು ವರ್ಷಗಳ ಸ್ಮರಣಾರ್ಥವಾಗಿ ಸ್ವರ್ಣಿಮ್ ವಿಜಯ್ ವರ್ಷವನ್ನು ರಕ್ಷಣಾ ಸಚಿವಾಲಯವು ಅಕ್ಟೋಬರ್ 22-24ರವರೆಗೆ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದೆ. 22 ಅಕ್ಟೋಬರ್ ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ, ರಕ್ಷಣಾ ಸಚಿವ  ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆ ಮಾತನಾಡಿದರು. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.‌ಚೌಧರಿ, ರಾಜ್ಯದ ಕಂದಾಯ ಸಚಿವ ಆರ್ ಅಶೋಕ, ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಹಾಗೂ ವಾಯುಪಡೆಯ ಇತರ ಗಣ್ಯರ ಉಪಸ್ಥಿತಿಯಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದರು.
ಇತಿಹಾಸ ಕೇವಲ ವಿಶ್ವಾಸವಲ್ಲ, ವಿಶ್ಲೇಷಣೆಗೂ ಅವಕಾಶ ನೀಡುತ್ತದೆ. 1971ರ ಯುದ್ಧದ ಕುರಿತು ಭವಿಷ್ಯದ ಆಲೋಚನೆಗಳನ್ನು ಈ ಸಮ್ಮೇಳನ ಮಾಡಲಿದೆ. ಈ ಯುದ್ಧದಲ್ಲಿ ಭಾಗವಹಿಸಿದ ಎಲ್ಲ ಸೈನಿಕರು, ಅವರ ಕುಟುಂಬಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಬಂಗ್ಲಾದೇಶದ ಬಂಧುಗಳಿಗೆ ಅಧಿಕಾರ ನೀಡದೆ ಚಿತ್ರಹಿಂಸೆ ನೀಡುತ್ತಿದ್ದ ನೆರೆ ರಾಷ್ಟ್ರದ ಕಪಿಮುಷ್ಠಿಯಿಂದ ಜನರಿಗೆ ಮುಕ್ತಿ ನೀಡುವುದು ರಾಷ್ಟ್ರ ಧರ್ಮ, ರಾಜ ಧರ್ಮ ಹಾಗೂ ಸೇನಾ ಧರ್ಮವೂ ಆಗಿತ್ತು. ಸೇನೆ ಹಾಗೂ ರಾಜನೀತಿಯ ನಡುವಿನ ಸಮನ್ವಯತೆಯೂ ಇಲ್ಲಿನ ವಿಶೇಷವಾಗಿತ್ತು. ಸೇನೆ ಮೇಲೆ ರಾಜಕೀಯವು ಭರವಸೆ ನೀಡಿ ಮುಕ್ತ ಅವಕಾಶ ಒದಗಿಸಿತು, ಅದನ್ನು ಸೇನೆ ಸದುಪಯೋಗ ಪಡಿಸಿಕೊಂಡಿತು ಎಂದರು.

ಬಾಕ್ಸ್
ಸೇನಾ ಸಿಬ್ಬಂದಿ ಮುಖಸ್ಥ ಜನರಲ್ ಬಿಪಿನ್ ರಾವತ್ ಮಾತನಾಡಿ, 1971ರ ಇಂಡೋ-ಪಾಕ್ ಯುದ್ಧದಿಂದ ಇಂದಿನ ಪೀಳಿಗೆ ಕಲಿಯುವುದು ಸಾಕಷ್ಟಿದೆ. ಕೇವಲ 14ದಿನದಲ್ಲಿ ಯುದ್ಧ ಮುಗಿದು ಬಾಂಗ್ಲಾದೇಶ ಎನ್ನುವ ಸ್ವತಂತ್ರ ದೇಶ ಉದಯವಾಯಿತು‌. ಸೇನೆಯ ಮೂರೂ ವಿಭಾಗವಳ ನಡುವೆ ಪರಸ್ಪರ ಸಮನ್ವಯತೆಯಿಂದ ಈ‌ ವಿಜಯ ಸಾಧ್ಯವಾಯಿತು. ಪಾಕಿಸ್ತಾನ ಈಗಲೂ‌ ಭಯೋತ್ಪಾದನೆಗೆ ಬೆಂಬಲ ನೀಡುವುದು ಹಾಗೂ ಭಾರತ ವಿರೋಧಿ ರಾಜತಂತ್ರವನ್ನು ಮುಂದುವರಿಸಿರುವುದು ಎರಡೂ ದೇಶಗಳ ನಡುವೆ ಕಂದಕ ಕಡಿಮೆ ಮಾಡಲು ತೊಡಕಾಗಿದೆ. ಈ‌ ನಡುವೆ ಭಾರತೀಯ ಸೇನೆ ನಿರಂತರ ಅಭಿವೃದ್ಧಿ ಕಾಣುತ್ತಿದೆ. ಸಮಗ್ರ ಕಮಾಂಡ್ ಸಿಸ್ಟಂ ಸ್ಥಾಪನೆಯೂ ಇದರಲ್ಲಿ ಒಂದು. ಬಜೆಟ್, ಉಪಕರಣ ಖರೀದಿ, ತಂತ್ರಗಳು ಹಾಗೂ ಆಧುನಿಕ ಯುದ್ಧಸನ್ನದ್ಧತೆಯಲ್ಲಿ ಈ ವ್ಯವಸ್ಥೆ ಸಹಕಾರಿಯಾಗಿದೆ. ರಾಷ್ಟ್ರೀಯ ಯುದ್ಧ ನೀತಿಯ ಸಿದ್ಧತೆ ನಡೆಯುತ್ತಿದ್ದು, ರಕ್ಷಣಾ ಸಚಿವರು ಪರಿಶೀಲಿಸುತ್ತಿದ್ದಾರೆ. 
ಸೈಬರ್ ಭದ್ರತೆಯನ್ನು ಸದೃಢಗೊಳಿಸಿ ದೇಶವನ್ನು ರಕ್ಷಿಸುವ ಅವಶ್ಯಕತೆ ಇಂದಿನದ್ದು. ಕೃತಕ‌ಬುದ್ಧಿಮತ್ತೆ, ನ್ಯಾನೊ‌ ಟೆಕ್ನಾಲಜಿ, ಸಾಮಾಜಿಕ ಜಾಲತಾಣ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ಮುಂದಿನ ನೇಮಕಗಳನ್ನು ಮಾಡುವ ಅಗತ್ಯವಿದೆ ಎಂದರು.

ಬಾಕ್ಸ್
ಏರ್ ಚೀಫ್ ಮಾರ್ಷಲ್ ವಿ.ಆರ್.‌ಚೌಧರಿ ಮಾತನಾಡಿ, ಯಾವುದೇ ಸ್ಥಿತಿಯಲ್ಲಿ ಬಂಗಾಳಿ ಜನರನ್ನು ಆಳಬೇಕು ಎಂಬ ಪಶ್ಚಿಮ ಪಾಕಿಸ್ತಾನದ ಉದ್ದೇಶದ ವಿರುದ್ಧವಾಗಿ 1971ರಲ್ಲಿ ಭಾರತೀಯ ಸೇನೆಯು ಕಾರ್ಯ ನಿರ್ವಹಿಸಿತು.‌ ಭೂಮಿ, ಆಕಾಶ ಹಾಗೂ ಸಾಗರದಲ್ಲಿ ಪಾಕಿಸ್ತಾನಿ ಸೇನೆಯನ್ನು ಮಣಿಸಿ ವಿಜಯ ಸಾಧಿಸಿತು. ಇದು ಅತ್ಯಂತ ತ್ವರಿತ ವಿಜಯವಾಗಿದ್ದು, ಡಿ.16ರನ್ನು ವಿಜಯ ದಿವಸವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಸೇನಾ ವಿಭಾಗಗಳ‌ ನಡುವೆ ಸಮನ್ವಯತೆ,  ವೃತ್ತಿಪರತೆಯನ್ನು ಈ ಯುದ್ಧ ತೋರಿಸಿಕೊಟ್ಟಿತು. ಎಲ್ಲ 93 ಸಾವಿರ ಸೇನಾ ಬಂಧಿಗಳನ್ಬೂ ಗೌರವಯುತವಾಗಿ ಬಿಡುಗಡೆ ಮಾಡುವ ಮೂಲಕ ಭಾರತೀಯ ನೈತಿಕತೆಯನ್ನು ಮೆರೆಯಲಾಯಿತು ಎಂದರು.

Important 
ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಮಾತನಾಡಿ, ನಮ್ಮ ಸುತ್ತಲೂ ಅನೇಕ ಸೂಕ್ಷ್ಮ ಪ್ರದೇಶಗಳಿದ್ದು, ಯಾವಾಗ ಬೇಕಾದರೂ ನಮ್ಮ ವಿರುದ್ಧ ವಾತಾವರಣ ನಿರ್ಮಾಣವಾಗುವ ಅಪಾಯವಿದೆ. ದಕ್ಷಿಣ ಚೀನಾದಲ್ಲಿ ಏಕಪಕ್ಷೀಯವಾಗಿ ಚೀನಾ ತನ್ನ ಅಧಿಕಾರ ಸ್ಥಾಪಿಸುವುದು, ಜಮ್ಮು ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ, ಇಂದಿನ ಅಫ್ಘಾನಿಸ್ತಾನದ ಪರಿಸ್ಥಿತಿಗಳನ್ನು ನಾವು ಮರೆಯುವಂತಿಲ್ಲ. ಚೀನಾ ಈಗಾಗಲೆ ಸೇನಾ ಏಕೀಕರಣದತ್ತ ಮುಂದುವರಿದಿದೆ. 2035ರ ವೇಳೆಗೆ ಸೇನೆಯನ್ನು ಸಂಪೂರ್ಣ ಬದಲಾಯಿಸಿ, ನಂತರ ವಿಶ್ವದಲ್ಲೆ ಉತ್ಕೃಷ್ಟ ಸೇನೆಯಾಗಿಸುವತ್ತ ಚೀನಾ ಮುನ್ನಡೆದಿದೆ. ಪ್ರಾದೇಶಿಕ ಶಕ್ತಿಯನ್ನು ಮೀರಿ ಜಾಗತಿಕ ಮಟ್ಟದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳುತ್ತಿದೆ. ಇವೆತಲ್ಲದರಿಂದಾಗಿ ಇಂದು ಯುದ್ಧದ ಮಾದರಿ ಬದಲಾಗಿದೆ. ಸೈಬರ್ ಸ್ಪೇಸ್, ಕೃತಕಬುದ್ಧಿಮತ್ತೆಯ ಮಾದರಿಯ ತಂತ್ರಜ್ಞಾನಗಳಿಗೆ ನಾವು ಸಿದ್ಧವಾಗಬೇಕಿದೆ‌‌ ಎಂದರು.
ಕಳೆದ ಎರಡು ವರ್ಷದಲ್ಲಿ ಸೈಬರ್ ಕ್ಷೇತ್ರದಲ್ಲಿ ವಿಪರೀತ ಸವಾಲುಗಳು ಎದುರಾಗಿವೆ.‌ ಇವುಗಳಿಂದ ಆರ್ಥಿಕ ಹಾಗೂ ಭೌತಿಕ ನಷ್ಟವೂ ಉಂಟಾಗುತ್ತಿದೆ.
ಸಾಮಾಜಿಕ ಜಾಲತಾಣ, ದತ್ತಾಂಶ ಕಳ್ಳತನದ ಮೂಲಕ ಯುದ್ಧಗಳು ಹೊಸ‌ ಮಾದರಿಯಲ್ಲಿ ನಮ್ಮ ಮುಂದೆ ಬಂದು ನಿಂತಿದೆ. ಆರ್ಥಿಕವಾಗಿ ದೇಶಗಳಿಗೆ ಸಹಾಯ ಒದಗಿಸಿ, ಆರ್ಥಿಕ ನಿರ್ಬಂಧದ ಬೆದರಿಕೆಯೊಡ್ಡಿ ನಿಯಂತ್ರಿಸುವುದು ಅನೇಕರಿಗೆ ಮತ್ತೊಂದು ರೀತಿಯ ಯುದ್ಧನೀತಿಯಾಗಿದೆ.

ತಂತ್ರಜ್ಞಾನ ಅಳವಡಿಕೆಯಿಂದ ದೂರ ಸಾಗುವ ಪ್ರಮೇಯವೇ ಇಲ್ಲ. ಈ ಕಾರಣಕ್ಕೆ ಸೇನೆಯನ್ನು ತ್ವರಿತವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ಕಳೆದ ಐದು ವರ್ಷದಲ್ಲಿ ಈ ಕಾರ್ಯಕ್ಕೆ 2.5 ಲಕ್ಷ ರೂ. ವ್ಯಯಿಸಲಾಗಿದೆ. ಇದು ಅದರ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಒಂದು ಉಪಕರಣ ಖರೀದಿಗೆ ಈ ಹಿಂದೆ ಐದೂವರೆ ವರ್ಷ ತಗಲುತ್ತಿತ್ತು. ಅಷ್ಟರ ವೇಳೆಗೆ ಆ ತಂತ್ರಜ್ಞಾನ ಹಳತಾಗುತ್ತಿತ್ತು. ಈಗ ಅತ್ಯಂತ ತ್ವರಿತವಾಗಿ ಖರೀದಿ ನಡೆಯುತ್ತಿದೆ. ಸರ್ಕಾರವು ಬಜೆಟ್‌ನಲ್ಲಿ ಹೆಚ್ವಿನ ಅವಕಾಶವನ್ನು ನೀಡುತ್ತಿರುವುದೂ, ಸೇನೆ ಆಧುನೀಕರಣದಲ್ಲಿ ಸಹಾಯಕವಾಗಿದೆ. ಆದಷ್ಟೂ ಶೀಘ್ರವಾಗಿ ಸೈಬರ್ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ಕೃಷ್ಟತೆ ಸಾಧಿಸಲೇಬೇಕಿದೆ. ಸೇನಾ ವಿಭಾಗಗಳ ನಡುವೆ ಸಮನ್ವಯತೆ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಜಯ್ ಕುಮಾರ್ ಒತ್ತು ನೀಡಿ ದರು... 

Post a Comment

Previous Post Next Post