ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಅ.29 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ರಿಂದ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಅಂತರ ಜಿಲ್ಲಾ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಅ.29 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8 ರಿಂದ ಆರಂಭವಾಗಲಿದೆ ಎಂದು ಅಥ್ಲೆಟಿಕ್ ತರಬೇತುದಾರ ಕೆ.ಹೇಮಂತ್ ಕುಮಾರ್ ಹೇಳಿದರು

ಅವರು ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, 12, 14  ಮತ್ತು 16 ವರ್ಷದ ಬಾಲಕ, ಬಾಲಕಿಯರಿಗಾಗಿ ಮೂರು ಹಂತದಲ್ಲಿ ಆಯ್ಕೆ ನಡೆಯಲಿದೆ.

60 ರಿಂದ 200 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಚೆಂಡು,ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ.

ಈಗಾಗಲೆ ತಾಲ್ಲೂಕಿನ ಎಲ್ಲಾ ಶಾಲರಗಳಿಗೂ ಶಿಕ್ಷಣ ಇಲಾಖೆಯ ಮೂಲಕ ಮಾಹಿತಿ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಆಯ್ಕೆಯಾದವರಿಗೆ ಡಿಸೆಂಬರ್ ಮೊದಲ ವಾರದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದರು. 

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾಮಹಾದೇವ್, ಪತ್ರಕರ್ತ ಶಿರವಾರ ಗಂಗರಾಜ್, ಮುಖಂಡರಾದ ಪ್ರವೀಣ್ ಇದ್ದರು.

Post a Comment

Previous Post Next Post