29 ನಿಮಿಷದೊಳಗೆ ಮುಗಿದ ಜಂಬೂಸವಾರಿ,

29 ನಿಮಿಷದೊಳಗೆ ಮುಗಿದ ಜಂಬೂಸವಾರಿ, 2ನೇ ಬಾರಿ ಜವಾಬ್ದಾರಿ ಪೂರ್ಣಗೊಳಿಸಿದ ಅಭಿಮನ್ಯು 
ಮೈಸೂರು: ಗಜಪಡೆಯ ನಾಯಕ ಅಭಿಮನ್ಯ ಎರಡನೇ ಬಾರಿ ಜಂಬೂಸವಾರಿಯಲ್ಲಿ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು, ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದಾನೆ. 

ಜಂಬೂಸವಾರಿ ಮೆರವಣಿಗೆ ಕೇವಲ 29 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.
 ಶ್ರೀರಂಗಪಟ್ಟಣದ ದಸರಾದಲ್ಲಿ ಪಟಾಕಿ ಸಿಡಿಸುವ ವೇಳೆ ಆನೆಗಳು ಗಾಬರಿಯಾಗಿ ಹಿಮ್ಮುಖವಾಗಿ ಚಲಿಸಿದ್ದ ಘಟನೆಯಿಂದ ಎಚ್ಚೆತ್ತುಕೊಂಡಿದ್ದ ಪೊಲೀಸರು, ಮೈಸೂರಿನ ಅರಮನೆಯ ಆವರಣದಲ್ಲಿ ನಡೆದ ಜಂಬೂಸವಾರಿಯ ಮೆರವಣಿಗೆ ವೇಳೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯು ಮುಂದೆ, ಹಿಂದೆ ಜನರು ಸುಳಿಯದಂತೆ ಹಗ್ಗಗಳನ್ನು ಹಿಡಿದುಕೊಂಡು ಸುತ್ತಲೂ  ಸುತ್ತುವರಿದು ಕಾವಾಲು ಹಾಕಿಕೊಂಡು ಸಾಗಿದರು. ಆನೆಯ ಹಿಂಭಾಗದಲ್ಲಿ ಕಾವಾಡಿಗಳು ಪರಸ್ಪರ ಕೈಗಳನ್ನು ಹಗ್ಗದಂತೆ ಹಿಡಿದುಕೊಂಡು ಜನರು ಹತ್ತಿರ ಸುಳಿಯದಂತೆ ನೋಡಿಕೊಂಡರು. 
ನಿಗದಿಕ್ಕಿಂತ ಹೆಚ್ಚಿದ ಜನರು: ಜಂಬೂಸವಾರಿಯಲ್ಲಿ ಭಾಗವಹಿಸಲು ಕೇವಲ 500 ಮಂದಿಗೆ ಮಾತ್ರ ಅವಕಾಶ ನೀಡಿದ್ದರೂ, ಅದನ್ನು ಮೀರಿದ ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಇವರಲ್ಲಿ ವಿವಿಧ ಇಲಾಖೆಯಗಳ ಹಿರಿಯ ಅಧಿಕಾರಿಗಳು, ಅವರ ಕುಟುಂಬದವರು, ರಾಜಕೀಯ ನಾಯಕರುಗಳು, ಚುನಾಯಿತ ಜನಪ್ರತಿನಿಧಿಗಳು, ಅವರ ಕುಟುಂಬದವರು, ಗಣ್ಯಾತಿ ಗಣ್ಯರು ಹೀಗೆ ಹಲವು ವರ್ಗದ ಜನರು ಅರಮನೆಯ ಆವರಣದಲ್ಲಿ ತುಂಬಿ ತುಳುಕುತ್ತಿದ್ದರು. ಅವರೆಲ್ಲಾ ಜಂಬೂಸವಾರಿಯನ್ನು ಕಣ್ತುಂಬಾ ನೋಡಿ ಆನಂದಿಸಿದರೆ, ಅರಮನೆಯ ಹೊರಗಡೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿAದ ಚಾಮರಾಜೇಂದ್ರ ವೃತ್ತದ ತನಕ, ಅಲ್ಲಿಂದ ಕೆ.ಆರ್.ವೃತ್ತದ ತನಕ ಜಮಾಯಿಸಿದ್ದ ಸಾವಿರಾರು ಮಂದಿ ಜಂಬೂಸವಾರಿಯನ್ನು ಖುದ್ದಾಗಿ ನೋಡಲು ಸಾಧ್ಯವಾಗದೆ ನಿರಾಶೆಯಿಂದ ಹಿಂತಿರುಗಿದರು. 
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ನ್ನು ಅರಮನೆಯ ಸುತ್ತ ಮಾಡಲಾಗಿತ್ತು. ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. 
ಜಂಬೂಸವಾರಿ ಮುಗಿದ ತಕ್ಷಣ ಜಡಿ ಮಳೆ: 
ಜಂಬೂಸವಾರಿ ಮೆರವಣಿಗೆಗೆ ವರುಣನ ಸಿಂಚನವಾಯಿತು. ಭಾರೀ ಮಳೆಯಾಗುವ ಆತಂಕ ಕೂಡ ಮನೆ ಮಾಡಿತ್ತು. ಆದರೆ ವರುಣದೇವ ಕೂಡ ನಾಡ ಶಕ್ತಿ ದೇವತೆಯ ವೈಭವದ ಮೆರವಣಿಗೆ ನೋಡಿ ಕಣ್ತುಂಬಿಕೊAಡು ಖುಷಿಯಾದನು. ಆದರೆ ಮೆರವಣಿಗೆ ಮುಗಿಯುತ್ತಿದ್ದಂತೆ ಆರ್ಭಟಿಸಲು ಶುರು ಮಾಡಿದನು. ಎಡಬಿಡದೆ ಧಾರಾಕಾರವಾಗಿ ಮಳೆ ಸುರಿದ ಕಾರಣ, ಜಂಬೂಸವಾರಿ ಮೆರವಣಿಗೆ ನೋಡಲೆಂದು ಬಂದವರು ಮಳೆಯಲ್ಲಿ ಸಿಲುಕಿ ಪರದಾಡಿದರು. ವಾಹನಗಳು ಮಳೆ ನೀರಿನಲ್ಲಿ ಸಿಲುಕಿದ್ದರಿಂದ ಚಾಲಕರು, ಪ್ರಯಾಣಿಕರು ಕೆಲ ಹೊತ್ತು ಪರದಾಡಿದರು. ವಿದ್ಯುತ್ ದೀಪಾಲಂಕಾರವನ್ನು ನೋಡಲು ಬಂದಿದ್ದವರು, ಮಳೆ ನಿಲ್ಲುವ ತನಕ ಕಾಯುವಂತಾಯಿತು.

Post a Comment

Previous Post Next Post