ಮಾಜಿ ಯೋಧರ ಆರೋಗ್ಯ ಯೋಜನೆಗೆ 3321 ಕೋಟಿ ಹಣ ಬಿಡುಗಡೆ: ಕೇಂದ್ರ ಸಚಿವ ರಾಜನಾಥ್ ಸಿಂಗ್

 ಮಾಜಿ ಯೋಧರ ಆರೋಗ್ಯ ಯೋಜನೆಗೆ 3321 ಕೋಟಿ ಹಣ ಬಿಡುಗಡೆ: ಕೇಂದ್ರ ಸಚಿವ ರಾಜನಾಥ್ ಸಿಂಗ್


ಬೆಂಗಳೂರು, ಅಕ್ಟೋಬರ್ 22, 





 
ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಯೋಧರ ಆರೋಗ್ಯ ಯೋಜನೆಯಡಿ 2020-21ನೇ ಸಾಲಿನಲ್ಲಿ 3321 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ತಿಳಿಸಿದರು.

ಅವರು ಇಂದು ಹೋಟೆಲ್ ತಾಜ್ ವೆಸ್ಟೆಂಡ್‍ನಲ್ಲಿ ಹೋಟೆಲ್‍ನಲ್ಲಿ ರಕ್ಷಣಾ ಇಲಾಖೆಯ ಮಾಜಿ ಸೈನಿಕರು ಹಾಗೂ ರಕ್ಷಣಾ ಇಲಾಖೆಯ ಉನ್ನತ  ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತಾ, ಮಾಜಿ ಯೋಧರು ಹಾಗೂ ಅವರ ಅವಲಿಂಭಿತರಿಗೆ ಮೀಸಲಿಡಲಾದ ಆರೋಗ್ಯ ಯೋಜನೆಯು ಸದ್ಯ ದೇಶದ 353 ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ 3050 ಆಸ್ಪತ್ರೆಗಳು ಸೇರಿದಂತೆ 421 ಪಾಲಿಕ್ಲಿನಿಕ್‍ಗಳು ಸಹ ಸೇರಿದೆ. ಈ ಯೋಜನೆಯಡಿ  ಕೇಂದ್ರ ಸರ್ಕಾರವು ಚಿಕಿತ್ಸಾ ವೆಚ್ಚದ ಶೇ 54ರಷ್ಟು ಹಣವನ್ನು ನೀಡಲಿದ್ದು, ಉಳಿದ ಶೇ 46ರಷ್ಟು ಹಣವನ್ನು ಯೋಧರೇ ಭರಿಸಬೇಕಾಗುತ್ತದೆ ಎಂದರು

      ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮಾಡನಾಡಿ, ಸರ್ಕಾರವು ಮಾಜಿ ಯೋಧರ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಅನದಾನ ಒದಗಿಸಬೇಕು. ಇಎಸ್‍ಐ ಆಸ್ಪತ್ರೆ ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗಳಲ್ಲೂ ಇವರಿಗೆ ಆರೋಗ್ಯ ಯೋಜನೆ ವಿಸ್ತರಿಸಬೇಕು. ಫಲಾನುಭವಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಹಾಗೂ ಪಾವತಿ ನೀಡಬೇಕೆಂದರು
     ಸಭೆಯಲ್ಲಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಮಿಲಿಟರಿ ವ್ಯವಹಾರಗಳ ಕಾರ್ಯದರ್ಶಿ ಜನರಲ್ ಬಿಪಿನ್ ರಾವತ್, ಇಎಸ್‍ಡಬ್ಲೂ ಕಾರ್ಯದರ್ಶಿ ಬಿ. ಆನಂದ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಛಾಯಾಚಿತ್ರ ಶೀರ್ಷಿಕೆ :

1. ಗೌರವಾನ್ವಿತ ಕೇಂದ್ರ ರಕ್ಷಣಾ ಮಂತ್ರಿಗಳಾದ  ರಾಜನಾಥ್ ಸಿಂಗ್ ಅವರು  ಎರಡು ದಿನಗಳ ಬೆಂಗಳೂರು ಭೇಟಿಗಾಗಿ ಆಗಮಿಸಿದ್ದು, ಇಂದು ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿರುವ Aeronautical Development Establishment  ಗೆ ಭೇಟಿ ನೀಡಿ DRDO    ಅಭಿವೃದ್ಧಿ ಪಡಿಸಿರುವ ನೂತನ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿರುವ ಉಪಕರಣಗಳ ವಸ್ತುಪ್ರದರ್ಶನವನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಡಿ. ಆರ್.ಡಿ.ಓ ಹಿರಿಯ ಅಧಿಕಾರಿಗಳು, ರಕ್ಷಣಾ ಕ್ಷೇತ್ರದ ಅಧಿಕಾರಿಗಳು ಹಾಗೂ ಎ.ಡಿ.ಇ ಅಧಿಕಾರಿಗಳು ಉಪಸ್ಥಿತರಿದ್ದರು

2. ಬ್ಲಾಕ್ ಕ್ಯಾಟ್ ಕಮಾಂಡೋಗಳ ಕಾರ್ ರಾಲಿ ! ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕ, ಇಂದಿರಾ ಗಾಂಧಿ ಸಂಗೀತ ಕಾರಂಜಿ ಸಮೀಪ, ಜವಹರಲಾಲ್ ನೆಹರೂ ತಾರಾಲಯದ ಎದುರು, ಇಲ್ಲಿ ಸುದರ್ಶನ ಭಾರತ್ ಪರಿಕ್ರಮ, ಬ್ಲಾಕ್ ಕ್ಯಾಟ್ ಕಾರ್ ರಾಲಿಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಚಾಲನೆ ನೀಡಿದರು. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ನ ಮಹಾ ನಿರ್ದೇಶಕ ಶ್ರೀ ಎಂ. ಎ. ಗಣಪತಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು




Post a Comment

Previous Post Next Post