ಸ್ವಚ್ಛ ಭಾರತ ರಾಷ್ಟ್ರವ್ಯಾಪಿ ಅಭಿಯಾನವು ಫಿಟ್ ಇಂಡಿಯಾ ಕಸಹೆಕ್ಕುವ ಓಟ(ಪ್ಲಾಗ್ ರನ್)ದೊಂದಿಗೆ ಮುಕ್ತಾಯ; 500 ಮಂದಿ ಭಾಗವಹಿಸಿ 150 ಕೆಜಿ ಕಸ ಸಂಗ್ರಹಿಸಿದರು

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸ್ವಚ್ಛ ಭಾರತ ರಾಷ್ಟ್ರವ್ಯಾಪಿ ಅಭಿಯಾನವು ಫಿಟ್ ಇಂಡಿಯಾ ಕಸಹೆಕ್ಕುವ ಓಟ(ಪ್ಲಾಗ್ ರನ್)ದೊಂದಿಗೆ ಮುಕ್ತಾಯ; 500 ಮಂದಿ ಭಾಗವಹಿಸಿ 150 ಕೆಜಿ ಕಸ ಸಂಗ್ರಹಿಸಿದರು

Posted On: 31 OCT 2021 5:27PM by PIB Bengaluru

ಪ್ರಮುಖ ವೈಶಿಷ್ಟತೆಗಳು:

*ರಿಪುದಮನ್ ಬೆವ್ಲಿ, ಕಸ ಮುಕ್ತ ಭಾರತಕ್ಕಾಗಿ ನಿರಂತರ ಪ್ರಚಾರಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಫಿಟ್ ಇಂಡಿಯಾ ಕಸಹೆಕ್ಕುವ ಓಟ(ಪ್ಲಾಗ್ ರನ್)ವನ್ನು ಮುನ್ನಡೆಸಿದರು
 

ಫಿಟ್ ಇಂಡಿಯಾ ಆಂದೋಲನದ ಅಂಗವಾಗಿ ಆಯೋಜಿಸಲಾದ ವಾರ್ಷಿಕ ರಾಷ್ಟ್ರವ್ಯಾಪಿ ಕಾರ್ಯಕ್ರಮವಾದ ಫಿಟ್ ಇಂಡಿಯಾ ಕಸಹೆಕ್ಕುವ ಓಟ(ಪ್ಲಾಗ್ ರನ್) ಇಂದು ಭಾನುವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಪ್ಲಾಗಿಂಗ್ ಎನ್ನುವುದು ಫಿಟ್ನೆಸ್ ಮತ್ತು ಶುಚಿತ್ವವನ್ನು ಸಂಯೋಜಿಸುವ - ಸ್ವಚ್ಛತಾ ಮತ್ತು ಸ್ವಾಸ್ಥ್ಯ - ಒಂದು ಅನನ್ಯ ಚಟುವಟಿಕೆಯಾಗಿದೆ. ಇದರಲ್ಲಿ ಭಾಗವಹಿಸುವವರು ಜಾಗಿಂಗ್ ಮಾಡುವಾಗ ಕಸವನ್ನು ಸಂಗ್ರಹಿಸುತ್ತಾರೆ.
 


 

500 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ತರಬೇತುದಾರರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ಮನೋಜ್ ಸೇಥಿ, ಜಂಟಿ ಕಾರ್ಯದರ್ಶಿ ಮತ್ತು ಕೇಂದ್ರ ಕ್ರೀಡಾ ಸಚಿವಾಲಯದ ಹಣಕಾಸು ಸಲಹೆಗಾರ, ಕೇಂದ್ರ ಕ್ರೀಡಾ ವಿಭಾಗದ ಜಂಟಿ ಕಾರ್ಯದರ್ಶಿ ಶ್ರೀ ಎಲ್.ಎಸ್. ಸಿಂಗ್, ಫಿಟ್ ಇಂಡಿಯಾ ಮಿಷನ್ ನಿರ್ದೇಶಕಿ ಶ್ರೀಮತಿ ಏಕ್ತಾ ವಿಷ್ಣೋಯ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಸ ಮುಕ್ತ ಭಾರತಕ್ಕಾಗಿ ನಿರಂತರ ಪ್ರಚಾರಕ್ಕಾಗಿ ಹೆಸರುವಾಸಿಯಾದ ಶ್ರೀ ರಿಪು ದಮನ್ ಬೆವ್ಲಿ, ಜಾಗಿಂಗ್ ಮಾಡುತ್ತಾ ಕಸವನ್ನು ಸಂಗ್ರಹಿಸುವ ಮೂಲಕ ಭಾಗವಹಿಸಿ ಫಿಟ್ ಇಂಡಿಯಾ ಪ್ಲಗ್ ರನ್ ಕಾರ್ಯಕ್ರಮವನ್ನು ಮುನ್ನಡೆಸಿದರು. ಅಕ್ಟೋಬರ್ 1 ರಂದು ಪ್ರಾರಂಭವಾದ ಈ ವರ್ಷದ 'ಸ್ವಚ್ಛ ಭಾರತ' ಅಭಿಯಾನವನ್ನು ಈ ದಿನ ಅಂತ್ಯಗೊಳಿಸಲಾಗಿದೆ.
 

ಈ ವಿನೂತನ ಕಾರ್ಯಕ್ರಮಕ್ಕೆ ಜನರಿಂದ ಸಿಕ್ಕಿರುವ ಸ್ವಾಗತದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶ್ರೀ ಎಲ್.ಎಸ್.ಸಿಂಗ್, "ಸ್ವಾತಂತ್ರ್ಯದ  ಅಮೃತ ಮಹೋತ್ಸವದ ಭಾಗವಾಗಿರುವ ಪ್ಲಾಗ್ ರನ್ ನಲ್ಲಿ ಇಂದು ಅನೇಕ ಯುವ ಹುಡುಗರು ಮತ್ತು ಹುಡುಗಿಯರು ಭಾಗವಹಿಸುತ್ತಿರುವುದು ಬಹಳ ಅದ್ಭುತಕಾರ್ಯವಾಗಿದೆ. ಒಂದೇ ಸಮಯದಲ್ಲಿ , ದೇಶವನ್ನು ಸ್ವಚ್ಛವಾಗಿಸಲು ಮತ್ತು ನಾಗರಿಕರು ಸ್ವಾಸ್ಥ್ಯವಾಗಿರಲು ಯೋಗ್ಯವಾಗಿರುವಂತೆ ಮಾಡುವಲ್ಲಿ ಬಹಳ ದೂರ ತನಕ ಸಾಗಬಹುದು."  


ಭಾರತದ ಪ್ಲಾಗ್ ಮ್ಯಾನ್ ಎಂದು ಕರೆಯಲ್ಪಡುವ ಶ್ರೀ ರಿಪು ದಮನ್ ಅವರು, ದಿನದ ಪ್ರಕ್ರಿಯೆಯ ಪ್ರಾರಂಭದಲ್ಲಿ ಅಭ್ಯಾಸ ವ್ಯಾಯಾಮಗಳೊಂದಿಗೆ 500 ಸದಸ್ಯರ ಗುಂಪಿಗೆ ಮಾರ್ಗದರ್ಶನ ನೀಡಿದರು ಮತ್ತು ಭಾಗವಹಿಸಿದವರಿಗೆಲ್ಲಾ ಕಾರ್ಯಕ್ರಮದ ಕೊನೆಯಲ್ಲಿ ಪ್ಲಾಸ್ಟಿಕ್ ಮುಕ್ತತೆಯ ಕುರಿತು ಪ್ರತಿಜ್ಞೆಯನ್ನು ನೀಡಿದರು. 

 


"ಪ್ಲಾಗ್ ರನ್ ಅನ್ನು ಅಂತಹ ಭವ್ಯವಾದ ಕಾರ್ಯಯೋಜನೆಯನ್ನಾಗಿ ಮಾಡಿದ್ದಕ್ಕಾಗಿ ನಾವು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಇಷ್ಟು  ವರ್ಷಗಳಲ್ಲಿ ಈಗಾಗಲೇ, ಲಕ್ಷಾಂತರ ಜನರು ದೇಶಾದ್ಯಂತ ಸ್ವಯಂಸೇವಕರಾಗಿದ್ದಾರೆ. ಇಂದು ನಾವೆಲ್ಲರೂ ಸುಮಾರು 150 ಕೆಜಿ ಕಸವನ್ನು ಹೆಕ್ಕಿತೆಗೆದು ಸ್ವಚ್ಛಗೊಳಿಸಿದ್ದೇವೆ. ಎರಡು ವರ್ಷಗಳಲ್ಲಿ, ಈ ಆಂದೋಲನವನ್ನು ದೇಶದ ಎಲ್ಲಾ 720 ಜಿಲ್ಲೆಗಳಿಗೆ ಕೊಂಡೊಯ್ಯಲು ಮತ್ತು ಎಲ್ಲೆಡೆ ಇಕೋ ಫಿಟ್ ನೆಸ್ ಕ್ಲಬ್ಗಳು ಮತ್ತು ಫಿಟ್ ಇಂಡಿಯಾ ಕ್ಲಬ್ಗಳನ್ನು ಪ್ರಾರಂಭ ಮಾಡಲು ನಾನು ಯೋಜಿಸುತ್ತೇನೆ."  


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲಾ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ ಏಕತಾ ಪ್ರತಿಜ್ಞೆ ಮಾಡಿದರು.

 ***



(Release ID: 1768233) Visitor Counter : 11


Read this release in: English Hindi Marathi

    Post a Comment

    Previous Post Next Post