ಇದುವರೆಗೆ 97.65 ಕೋಟಿ ಡೋಸ್ ಕೋವಿಡ್ ಲಸಿಕೆ

ದೇಶದಲ್ಲಿ ಇದುವರೆಗೆ 97.65 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಇದುವರೆಗೆ 97 ಕೋಟಿ 65 ಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 41 ಲಕ್ಷ 20 ಸಾವಿರ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 14 ಸಾವಿರದ 146 ಹೊಸ ಪ್ರಕರಣಗಳು ವರದಿಯಾಗಿದ್ದು ಇದು 229 ದಿನಗಳಲ್ಲಿ ಅತ್ಯಂತ ಕಡಿಮೆ. ಭಾರತದ ಆಕ್ಟಿವ್ ಕೇಸ್ ಲೋಡ್ ಒಂದು ಲಕ್ಷ 95 ಸಾವಿರದ 846 ರಷ್ಟಿದ್ದು, ಇದು 220 ದಿನಗಳಲ್ಲಿ ಕಡಿಮೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಮತ್ತು ಪ್ರಸ್ತುತ ಮಾರ್ಚ್ 2020 ರ ನಂತರ ಶೇ. 0.57 ರಷ್ಟಿವೆ. sudharane ದರವು ಪ್ರಸ್ತುತ ಶೇಕಡಾ 98.10 ದಲ್ಲಿದೆ, ಇದು ಕಳೆದ ವರ್ಷದ ಮಾರ್ಚ್‌ನಿಂದ ಅತ್ಯಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 19 ಸಾವಿರದ 700 ಕ್ಕೂ ಹೆಚ್ಚು sudharane ಪ್ರಕರಣಗಳು ಒಟ್ಟು ಚೇತರಿಕೆಯನ್ನು 3 ಕೋಟಿ 34 ಲಕ್ಷಕ್ಕೆ ತಲುಪಿದೆ. ಸಾಪ್ತಾಹಿಕ ಕೋವಿಡ್ ದರವು ಪ್ರಸ್ತುತ ಶೇ .1.42 ರಷ್ಟಿದೆ, ಇದು ಕಳೆದ 114 ದಿನಗಳಲ್ಲಿ ಮೂರು ಶೇಕಡಾಕ್ಕಿಂತ ಕಡಿಮೆಯಾಗಿದೆ. ದೈನಂದಿನ ಧನಾತ್ಮಕ ದರವು 1.29 ಪ್ರತಿಶತದಷ್ಟಿದ್ದು ಇದು ಕಳೆದ 48 ದಿನಗಳಲ್ಲಿ ಮೂರು ಶೇಕಡಾಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಇದುವರೆಗೆ 59 ಕೋಟಿಗೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

Post a Comment

Previous Post Next Post