*ಕೋಲಾರ ಜಿಲ್ಲೆಯಲ್ಲಿ ಉದ್ಯೋಗವಿಲ್ಲ ,ಆರ್ಥಿಕ ಸಂಕಷ್ಟದಲ್ಲಿ ಇರುವ 2ಲಕ್ಷ 40ಸಾವಿರ ಕುಟುಂಬಕ್ಕೆ ಮತ್ತು 20ಸಾವಿರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು-ಕೆ.ಜಿ.ಎಫ್.ಬಾಬು*
*ಉಮ್ರಾ ಚಾರಿಟಬಲ್ ಫೌಂಡೇಷನ್ ನಿಂದ ಉದ್ಯಮಿ, ಸಮಾಜ ಸೇವಕ ಕೆ.ಜಿ.ಎಫ್ ಬಾಬು* ರವರು ಕೋವಿಡ್‌ನಿಂದ ಕೋಲಾರ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಆರ್ಥಿಕವಾಗಿ ಹಿಂದುಳಿದ *ಸುಮಾರು 2.40 ಲಕ್ಷ ಜನರಿಗೆ ಆರ್ಥಿಕ* ನೆರವು ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿರುವುದರ ಕುರಿತು ಪ್ರಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಿದ್ದರು.
*ಉಮ್ರಾ ಚಾರಿಟಬಲ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ಕೆ.ಜಿ.ಎಫ್ ಬಾಬು ರವರು* ಮಾತನಾಡಿ 4ಸಾವಿರ ಕೋಟಿ ರೂಪಾಯಿ ಸಂಪತ್ತು ಒಡೆಯ ನಾನು ,130ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುತ್ತೇನೆ ಮತ್ತು ವಾರ್ಷಿಕ 20 ಕೋಟಿ ರೂಪಾಯಿ ಶಿಕ್ಷಣಕ್ಕೆ ಸಹಾಯಧನ ನೀಡುತ್ತಿದ್ದೇನೆ .ಕೊವಿಡ್ ಸಾಂಕ್ರಮಿಕ ರೋಗದಿಂದ ಕಳೆದ ಎರಡು ವರ್ಷಗಳಿಂದ ಶಾಲೆ ,ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ .ಇದೀಗ ಶಾಲಾ ,ಕಾಲೇಜು ಆರಂಭವಾದರು ಶುಲ್ಕ (ಫೀಸು)ಕಟ್ಟಲು ಅವರ ಬಳಿ ಹಣವಿಲ್ಲ ಅದ್ದರಿಂದ ಕೋಲಾರ ಜಿಲ್ಲೆ 30ಶಾಲಾ ,ಕಾಲೇಜಿನ 20ಸಾವಿರ ಮಕ್ಕಳಿಗೆ 8ಕೋಟಿ ಅನುದಾನ ನೀಡಲಾಗುತ್ತಿದೆ .
ಮತ್ತು ಕೊವಿಡ್ ಕಾರಣದಿಂದ ಕೋಲಾರ ಜಿಲ್ಲೆಯಲ್ಲಿ ಜನರಿಗೆ ಉದ್ಯೋಗವವಿಲ್ಲ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ ಅಂತಕ ಕುಟುಂಬಗಳಿಗೆ ಸಹಕಾರ ,ಸಹಾಯ ಮಾಡಬೇಕೆಂದು ಸರಿ ಸುಮಾರು ಎರಡು ಲಕ್ಷ ನಾಲವತ್ತು (2.40)ಕುಟುಂಬಗಳಿಗೆ 4ಮಂದಿ ಇರುವ ಕುಟುಂಬಕ್ಕೆ 2ಸಾವಿರ ಮತ್ತು 6ಸದಸ್ಯರು ಇರುವ ಕುಟುಂಬಕ್ಕೆ 3ಸಾವಿರ ,8ಜನರು ಇರುವ ಕುಟುಂಬಕ್ಕೆ 4ಸಾವಿರ ಮತ್ತು 10ಜನ ಸದಸ್ಯರು ಇರುವ ಕುಟುಂಬಕ್ಕೆ 5ಸಾವಿರ ನೀಡಲಾಗುವುದು ಎಂದು ಹೇಳಿದರು .
ನನ್ನ ಜೀವನದ ಮಹಾದಾಸೆ ಕೋಲಾರ ಜಿಲ್ಲೆಯಿಂದ ವಿದ್ಯಾರ್ಥಿ ಐ.ಎ.ಎಸ್.ಮತ್ತು ಐ.ಪಿ.ಎಸ್. ಹಾಗೂ ಸರ್ಕಾರದಲ್ಲಿ ಉನ್ನತ ಸ್ಥಾನಮಾನದಲ್ಲಿ ಇರಬೇಕು ಎಂಬ ಬಯಕೆ ನನ್ನದು ಎಂದು ಕೆ.ಜಿ.ಎಫ್.ಬಾಬುರವರು ಹೇಳಿದರು.
Post a Comment