ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಏಕತಾ ದಿವಸದ ಸಂದರ್ಭದಲ್ಲಿ ಎಲ್‍ಬಿಎಸ್‍ಎನ್‍ಎಎ ಮಸ್ಸೂರಿಯಲ್ಲಿ ‘ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಹೊಸ ಪೀಳಿಗೆಯ ನಾಗರಿಕ ಸೇವಾ ಅಧಿಕಾರಿಗಳಿಗೆ ಹೊಸ ಪೀಳಿಗೆಯ ಸುಧಾರಣೆಗಳ ಬಗ್ಗೆ ಒತ್ತಿಹೇಳಿದರು

ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ರಾಷ್ಟ್ರೀಯ ಏಕತಾ ದಿವಸದ ಸಂದರ್ಭದಲ್ಲಿ ಎಲ್‍ಬಿಎಸ್‍ಎನ್‍ಎಎ ಮಸ್ಸೂರಿಯಲ್ಲಿ ‘ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಹೊಸ ಪೀಳಿಗೆಯ ನಾಗರಿಕ ಸೇವಾ ಅಧಿಕಾರಿಗಳಿಗೆ ಹೊಸ ಪೀಳಿಗೆಯ ಸುಧಾರಣೆಗಳ ಬಗ್ಗೆ ಒತ್ತಿಹೇಳಿದರು

2000 ಬ್ಯಾಚ್‌ ನ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತವು ಆಡಳಿತದಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಬೇಕು ಏಕೆಂದರೆ ಅದು ರಾಷ್ಟ್ರಗಳ ಸಂಘದಲ್ಲಿ ಜಾಗತಿಕ ನಾಯಕತ್ವದ ಪಾತ್ರವನ್ನು ವಹಿಸಲು ಸಿದ್ಧವಾಗಿದೆ.

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಕೇಂದ್ರಿತ ವಿತರಣಾ ಕಾರ್ಯವಿಧಾನವು ಹೊಸ ತಲೆಮಾರಿನ ನಾಗರಿಕ ಸೇವಾ ಅಧಿಕಾರಿಗಳಿಗೆ ಮೂಲಾಧಾರವಾಗಿದೆ: ಡಾ ಜಿತೇಂದ್ರ ಸಿಂಗ್

Posted On: 31 OCT 2021 5:11PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು  ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಆಯೋಜಿಸಲಾದ ರಾಷ್ಟ್ರೀಯ ಏಕತಾ   ದಿನದ ಸಂದರ್ಭದಲ್ಲಿ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್‍ಬಿಎಸ್ಎನ್ಎಎ)ನಲ್ಲಿ "ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್" ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ನಂತರ, 2000 ನೇ ಬ್ಯಾಚ್‌ನ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ ಜಿತೇಂದ್ರ ಸಿಂಗ್, ಹೊಸ ತಲೆಮಾರಿನ ನಾಗರಿಕ ಸೇವಾ ಅಧಿಕಾರಿಗಳಗೆ ಹೊಸ ತಲೆಮಾರಿನ ಸುಧಾರಣೆಗಳ ಬಗ್ಗೆ ಒತ್ತಿಹೇಳಿದರು ಮತ್ತು ಭಾರತವು ಆಡಳಿತದಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಬೇಕು ಎಂದು ಹೇಳಿದರು. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನ-ಕೇಂದ್ರಿತ ವಿತರಣಾ ಕಾರ್ಯವಿಧಾನಗಳನ್ನು ಹೆಚ್ಚಿಸುವುದು ಹೊಸ ತಲೆಮಾರಿನ ನಾಗರಿಕ ಸೇವಕರಿಗೆ ಹೊಸ ಪೀಳಿಗೆಯ ಸುಧಾರಣೆಗಳು ಮೂಲಾಧಾರಗಳಾಗಬೇಕು ಎಂದು ಅವರು ಹೇಳಿದರು.

ಕೆಂಪು ಕೋಟೆಯ ಆವರಣದಿಂದ ಪ್ರಧಾನ ಮಂತ್ರಿಯವರ 75 ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿದ ಡಾ.ಜಿತೇಂದ್ರ ಸಿಂಗ್, ಭಾರತವು ಇಲ್ಲಿ ಆಡಳಿತದ ಹೊಸ ಅಧ್ಯಾಯವನ್ನು ಹೇಗೆ ಬರೆಯುತ್ತಿದೆ ಎಂಬುದಕ್ಕೆ ಇಂದು ಜಗತ್ತು ಸಾಕ್ಷಿಯಾಗಿದೆ ಮತ್ತು ಈ 'ಅಮೃತ ಕಾಲದ' ದಶಕದಲ್ಲಿ ನಾವು ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಆದ್ಯತೆ ನೀಡಲಿದ್ದೇವೆ. ಸೇವಾ ವಿತರಣೆಯಂತಹ ಎಲ್ಲಾ ಸೌಲಭ್ಯಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪಬೇಕು ಮತ್ತು ಈ ಸೇವೆಗಳು ಎಲ್ಲಾ ವ್ಯಕ್ತಿಗಳಿಗೆ ತಡೆರಹಿತ ರೀತಿಯಲ್ಲಿ, ಹಿಂಜರಿಕೆಯಿಲ್ಲದೆ ಅಥವಾ ಯಾವುದೇ ರೀತಿಯ ತೊಂದರೆಗಳಿಲ್ಲದೆ ತಲುಪಬೇಕು ಎಂದು ಖಚಿತಪಡಿಸಿಕೊಳ್ಳುವ ಶ್ರೀ ಮೋದಿಯವರ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.


2014 ರಿಂದ, ಮೋದಿಯವರು ಪ್ರಧಾನಿಯಾದ ನಂತರ, ಪ್ರತಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಆಡಳಿತಕ್ಕೆ ಸಂಬಂಧಿಸಿದ ಕೆಲವು ಅವಲೋಕನಗಳು ಮತ್ತು ಪ್ರಕಟಣೆಗಳು ಇರುತ್ತವೆ ಎನ್ನುವುದನ್ನು ಡಾ ಜಿತೇಂದ್ರ ಸಿಂಗ್ ಗಮನಸೆಳೆದರು. ಮೇ 26, 2014 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಪ್ರಧಾನ ಮಂತ್ರಿಗಳು ನೀಡಿದ ಆರಂಭಿಕ ಸುಧಾರಣಾ ಮಂತ್ರವೆಂದರೆ "ಕನಿಷ್ಠ ಸರ್ಕಾರ - ಗರಿಷ್ಠ ಆಡಳಿತ".  ಕಳೆದ 7-8 ವರ್ಷಗಳಲ್ಲಿ ಹೆಚ್ಚಿನ ದಕ್ಷತೆ, ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಹೊಣೆಗಾರಿಕೆಯನ್ನು ಉತ್ತೇಜಿಸಲು ಮತ್ತು ವಿಶೇಷ ಅಧಿಕಾರಗಳ ವ್ಯಾಪ್ತಿಯನ್ನು ಕಡಿಮೆ ಮಾಡಲು ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
 

ಮೇ 2014 ರಿಂದ ಹೊಸ ರೀತಿಯ ನಿರ್ಧಾರಗಳ ಸರಣಿಯನ್ನು ಉಲ್ಲೇಖಿಸಿದ ಡಾ ಜಿತೇಂದ್ರ ಸಿಂಗ್, ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ದಾಖಲೆಗಳನ್ನು ಪಡೆಯುವ ಹಳೆಯ ಅಭ್ಯಾಸವನ್ನು ತೆಗೆದುಹಾಕುವ ನಿರ್ಧಾರ ಮತ್ತು ಸ್ವಯಂ-ದೃಢೀಕರಣ, ರದ್ದುಗೊಳಿಸುವಿಕೆಯೊಂದಿಗೆ ಜನವರಿ 1, 2016 ರಿಂದಲೇ ಕೇಂದ್ರ ಸರ್ಕಾರದಲ್ಲಿ ಎಲ್ಲಾ ಗ್ರೂಪ್-ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ಸಂದರ್ಶನ, ಭ್ರಷ್ಟಾಚಾರ ತಡೆ ಕಾಯ್ದೆ, 1988 ರಲ್ಲಿ ತಿದ್ದುಪಡಿ ಮತ್ತು ಐಎಎಸ್ ಅಧಿಕಾರಿಗಳಿಗೆ ಅವರ ವೃತ್ತಿಜೀವನದ ಆರಂಭದಲ್ಲಿ  ಮೂರು ತಿಂಗಳು ಕೇಂದ್ರ ಸರ್ಕಾರವು ಸಹಾಯಕ ಕಾರ್ಯದರ್ಶಿಯಂತೆ ಇರುವುದು ಮಹತ್ವದ ಪ್ರಭಾವ ಬೀರುತ್ತದೆ.
ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್‌ನ ಪ್ರಸ್ತುತತೆಯ ಕುರಿತು ಮಾತನಾಡಿದ ಡಾ ಜಿತೇಂದ್ರ ಸಿಂಗ್, ಮುಂದಿನ ಪೀಳಿಗೆಯ ನಾಗರಿಕ ಸೇವಾ ಅಧಿಕಾರಿಗಳಿಗೆ ಭದ್ರವಾದ ಬುನಾದಿಯನ್ನು ಹಾಕುವ ಗುರಿಯನ್ನು ಕೇಂದ್ರವು ಹೊಂದಿದೆ, ಇದರಿಂದಾಗಿ ಅವರು ಪ್ರಪಂಚದಾದ್ಯಂತ ನಾಯಕತ್ವದ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯುತ್ತಾರೆ ಮತ್ತು ಅದೇ ಸಮಯದಲ್ಲಿ ಅವರು ತಮ್ಮ ಸಾಂಸ್ಕೃತಿಕ ನೀತಿ, ಮೌಲ್ಯಗಳು ಮತ್ತು ಬೇರುಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಉತ್ತಮ ಆಡಳಿತ, ‘ಜನ ಭಾಗೀದಾರಿ’ ಮತ್ತು ‘ಜನ ಚೇತನಕ್ಕೆ’ ಕ್ಷೇತ್ರಾಧಿಕಾರಿಗಳು ಹಾಗೂ ನೀತಿ ನಿರೂಪಣಾ ಮಟ್ಟದ ಅಧಿಕಾರಿಗಳಲ್ಲಿ ಉತ್ತಮ ನಾಯಕತ್ವ ಕೌಶಲ್ಯದ ಅಗತ್ಯವಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್ ಅಖಿಲ ಭಾರತ ಸೇವೆಗಳ ಪಿತಾಮಹರು ಅಂದುಕೊಂಡಂತೆ ಭಾರತ ಮತ್ತು ವಿದೇಶದಲ್ಲಿರುವ ನಾಗರಿಕ ಸೇವಾ ಅಧಿಕಾರಿಗಳಿಗೆ ನಿರಂತರ ಅಧ್ಯಯನ ಮತ್ತು ಕಲಿಕೆಯ ಅವಕಾಶಗಳನ್ನು ಒದಗಿಸಲು ಬೃಹತ್ ಸಂಪನ್ಮೂಲ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನ ನಿರ್ದೇಶಕರಾದ ಶ್ರೀ ಕೆ ಶ್ರೀನಿವಾಸ್ ಅವರು ತಮ್ಮ ಭಾಷಣದಲ್ಲಿ, ನಾಗರಿಕ ಸೇವಕರು ನಿರಂತರವಾಗಿ ಸರ್ದಾರ್ ಪಟೇಲ್ ಲೀಡರ್‌ಶಿಪ್ ಸೆಂಟರ್‌ನೊಂದಿಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುವುದು ಈ ಕೇಂದ್ರದ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದರು. ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ನವೀಕರಿಸಿದ ಕೌಶಲ್ಯಗಳು ಮತ್ತು ಮಾರ್ಗದರ್ಶನದೊಂದಿಗೆ ಪ್ರತಿಯೊಬ್ಬ ಅಧಿಕಾರಿಯು ಮಿಷನ್ ಕರ್ಮಯೋಗಿಯ ಉತ್ಸಾಹದಲ್ಲಿ ಸ್ವಯಂ-ಮಾರ್ಗದರ್ಶನದ ಕಲಿಕೆಯ ತಮ್ಮದೇ ಆದ ಮಾರ್ಗವನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.

***



(Release ID: 1768263) Visitor Counter : 3


Read this release in: English Hindi

    Post a Comment

    Previous Post Next Post