ಸರಳವಾಗಿ ಸಂಪನ್ನಗೊಂಡ ಚಾಮುಂಡೇಶ್ವರಿ ರಥೋತ್ಸವ

ಸರಳವಾಗಿ ಸಂಪನ್ನಗೊಂಡ ಚಾಮುಂಡೇಶ್ವರಿ ರಥೋತ್ಸವ ಮೈಸೂರು, ಆ.೧೯: ಕೊರೋನಾ ಕಾರಣದಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡ ಶಕ್ತಿದೇವತೆ ಚಾಮುಂಡೇಶ್ವರಿ ರಥೋತ್ಸವವನ್ನು ಈಮದು ಸರಳವಾಗಿ ಆಚರಿಸಲಾಗಿದ್ದು, ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃ?ದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಇಂದು ಮುಂಜಾನೆಯಿಂದಲೇ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇ? ಪೂಜೆ, ರುದ್ರಾಭಿ?ಕ, ಮಹಾ ಮಂಗಳಾರತಿ ನಡೆಸಿದ ನಂತರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಆ ನಂತರ ೭:೧೮ ರಿಂದ ೭:೪೦ರ ಶುಭಲಗ್ನದಲ್ಲಿ ಯದುವೀರ್ ಸಾಂಪ್ರದಾಯಿಕ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಈ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಯದುವೀರ್, ’ಕೋವಿಡ್ ಕಾರಣಕ್ಕೆ ಈ ಬಾರಿ ಕಳೆದ ಬಾರಿಯಂತೆ ಸರಳ ಸಾಂಪ್ರದಾಯಿಕ ರಥೋತ್ಸವ ನಡೆಸಲಾಯಿತು. ಮುಂದಿನ ವ? ಕೋವಿಡ್ ಮುಕ್ತವಾಗಿ ದೇವಿ ಅದ್ಧೂರಿಯಾಗಿ ರಥೋತ್ಸವ ಆಚರಿಸುವ ಶಕ್ತಿ ನೀಡಲಿ. ನಾಡಿಗೆ ಉತ್ತಮ ಮಳೆ, ಬೆಳೆ ಆಗಲಿ ಎಂದು ದೇವಿಯನ್ನು ಪ್ರಾರ್ಥಿಸುತ್ತೇವೆ’ ಎಂದು ಹೇಳಿದರು. ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾತನಾಡಿ, ’ಬೆಳಿಗ್ಗೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ರುದ್ರಾಭಿ?ಕ, ವಿಶೇ? ಅಲಂಕಾರವನ್ನು ಮಾಡಲಾಯಿತು. ಈ ಬಾರಿ ಸಂಪ್ರದಾಯದಂತೆ ದೇವಿಯನ್ನು ಶೃಂಗಾರಗೊಳಿಸಿ ಚಿಕ್ಕ ರಥದಲ್ಲಿಟ್ಟು ರಥೋತ್ಸವ ನಡೆಸಲಾಗಿದೆ ಎಂದರು. ದಸರಾ ಜಂಬೂಸವಾರಿಯ ಸಂದರ್ಭದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಇರುವ ಚಿನ್ನದ ಅಂಬಾರಿ ಹೊರಡುವ ಮುನ್ನ ೨೧ ಕುಶಾಲತೋಪುಗಳನ್ನು ಹಾರಿಸಲಾಗುತ್ತದೆ. ಅದೇ ರೀತಿ ದಸರಾ ಮುಗಿದ ನಾಲ್ಕನೇ ದಿನ ಚಾಮುಂಡೇಶ್ವರಿ ರಥೋತ್ಸವ ಸಾಗುವ ದೇವಸ್ಥಾನದ ಸುತ್ತ ಕುಶಾಲತೋಪುಗಳನ್ನು ಹಾರಿಸುವ ಸಂಪ್ರದಾಯ ಇರುವುದು ಚಾಮುಂಡಿ ಬೆಟ್ಟದಲ್ಲಿ ಮಾತ್ರ. ಆ ಸಂಪ್ರದಾಯದಂತೆ ರಥೋತ್ಸವ ನೆರವೇರಿಸಲಾಗಿದೆ. ******೮೮೮೮

Post a Comment

Previous Post Next Post