ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ : . ಸ್ವಚ್ಚತಾ ಕಾರ್ಯಕ್ರಮ ಆಂದೋಲನ

ಪ್ಲಾಸ್ಟಿಕ್ ತ್ಯಾಜ್ಯ  ಸಂಗ್ರಹ ಮಾಡುವ ಸ್ವಚ್ಚತಾ ಕಾರ್ಯಕ್ರಮ

ಬೆಂಗಳೂರು, ಅಕ್ಟೋಬರ್ 09 (ಕರ್ನಾಟಕ ಸರ್ಕಾರ):
ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷ ತುಂಬಿದ ಸಂದರ್ಭದಲ್ಲಿ “ಆಜಾದಿಕಾ ಅಮೃತ ಮಹೋತ್ಸವ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ವರ್ಷದ ಅಕ್ಟೋಬರ್ 1 ರಿಂದ 31ರ ವರೆವಿಗೆ “ಕ್ಲೀನ್ ಇಂಡಿಯಾ” ಎಂಬ ಶೀರ್ಷಿಕೆಯ ಅಡಿ “ ಪ್ಲಾಸ್ಟಿಕ್ ತ್ಯಾಜ್ಯ” (ssingle use plasticಸಂಗ್ರಹ ಮಾಡುವ ಸ್ವಚ್ಚತಾ ಕಾರ್ಯಕ್ರಮವನ್ನು ನಗರ, ಪಟ್ಟಣ, ಹಳ್ಳಿಗಳಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಎಲ್ಲಾ 744 ಜಿಲ್ಲೆಗಳಲ್ಲಿ ನಡೆಯಲಿದ್ದು 2,50,000 ಸಾವಿರ ಹಳ್ಳಿಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಚಗೊಳಿಸುವ ಗುರಿಯನ್ನು ಹೊಂದಿದೆ.

ಈ ಎಲ್ಲಾ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ, ಎನ್ ಎಸ್ ಎಸ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಗ್ರಾಮ ಪಂಚಾಯತಿ, ಎಲ್ಲಾ ಇಲಾಖೆಗಳು ಸೇರಿ ಸ್ವಯಂ ಸೇವಾ ಸಂಸ್ಥೆಗಳ, ರೋಟರಿ, ಲಯನ್ಸ್, ಯುವಕ ಸಂಘಗಳ, ಯುವತಿ ಮಂಡಳಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಅವಕಾಶ ನೀಡಿ ಜನಾಂದೋಲನವಾಗಿ ರೂಪಿಸಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ತೂಕ ಹಾಗೂ ವಿಲೇವಾರಿ, ಹಳ್ಳಿಗಳ ಸೌಂದರೀಕರಣ ಕೆರೆ, ಬಾವಿ, ಧಾರ್ಮಿಕಸ್ಥಳಗಳ, ಯುವಕ ಸಂಘಗಳ ಕಟ್ಟಡ, ಶಾಲೆ, ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಕಟ್ಟಡಗಳ ಸ್ವಚ್ಚತೆ. ಸಾಂಪ್ರದಾಯಕ ನೀರಿನ ಮೂಲಗಳ ಸ್ವಚ್ಚತೆ, ಕೆರೆ ಬಾವಿಗಳ ಸ್ವಚ್ಚತೆ ಶ್ರಮಾದಾನದ ಮೂಲಕ ರೈಲ್ವೆ ಸಿಬ್ಬಂದಿ ಹಾಗೂ ಉದ್ಯೋಗಿಗಳೊಂದಿಗೆ 9-10-2021, ಪೋಲಿಸ್ ಸಿಬ್ಬಂದಿ, ಮಾದ್ಯಮ ಪ್ರತಿನಿಧಿಗಳು ಹಾಗೂ ಸಿ.ಆರ್.ಪಿ.ಎಫ್. 10-10-2021 ರಾಜಕೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ 11-10-2021 ರಿಂದ 12-10-2021 ಸರ್ಕಾರೇತರ ಸಂಘಗಳೊಂದಿಗೆ, 13-10-2021 ರಿಂದ 14-10-2021 ವ್ಯಾಪಾರಿಗಳೊಂದಿಗೆ, 18-10-2021 ರಿಂದ 19-10-2021 ಮಹಿಳಾ ಗುಂಪುಗಳೊಂದಿಗೆ, 20-10-2021 ರಿಂದ 21-10-2021 ಶಿಕ್ಷಕರೊಂದಿಗೆ, 22-10-2021 ರಿಂದ 23-10-2021 ಸಿನಿಮಾ ಹಾಗೂ ಟಿ.ವಿ. ಉದ್ಯಮದವರೊಂದಿಗೆ, 24-10-2021 ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಶಿಕ್ಷಕರೊಂದಿಗೆ, 25-10-2021 ರಿಂದ 26-10-2021, ಟೆಲಿಕಾಂ ಹಾಗೂ ಪೋಸ್ಟಲ್ ಸಿಬ್ಬಂದಿಯೊಂದಿಗೆ 27-10-2021 ರಿಂದ 28-10-2021, ಅಧಿಕಾರಿಗಳೊಂದಿಗೆ 29-10-2021 ರಿಂದ 30-10-2021, ಎನ್ ಎಸ್ ಎಸ್. ಎನ್ ವೈ ಕೆ ಎಸ್ ಯುವಕರೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

1-10-2021 ರಿಂದ 31-10-2021 ರವರೆಗೆ ಒಂದು ತಿಂಗಳ ಅವಧಿಯಲ್ಲಿ ದೇಶದ 744 ಜಿಲ್ಲೆಗಳಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ದೇಶದ 744 ಜಿಲ್ಲೆಗಳಿಂದ ತಲಾ 10,080 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿಯನ್ನು ಹೊಂದಿದೆ. ಅಂದರೆ ಪ್ರತಿ ಹಳ್ಳಿಯಿಂದ 30 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಗುರಿಯನ್ನು ಹೊಂದಿದೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ರಾಜ್ಯಮಟ್ಟದಲ್ಲಿ ಅಪರ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಇಲಾಖೆ ಹಾಗೂ ಎನ್ ವೈ ಕೆ ಎಸ್.ನ ಕರ್ನಾಟಕ ರಾಜ್ಯ ನಿರ್ದೇಶಕರು ಸೇರಿದಂತೆ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯ ಸಮಿತಿ ರಚಿಸಲಾಗಿದ್ದು ಈ ಸಮಿತಿ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಕೆ.ಸಿ. ನಾರಾಯಣ ಗೌಡರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ.
ಈ ಎಲ್ಲಾ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ, ಎನ್.ಎಸ್.ಎಸ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಗ್ರಾಮ ಪಂಚಾಯತಿ, ಎಲ್ಲಾ ಇಲಾಖೆಗಳು ಸೇರಿ ಸ್ವಯಂ ಸೇವಾ ಸಂಸ್ಥೆಗಳ, ರೋಟರಿ, ಲಯನ್ಸ್, ಯುವಕ ಸಂಘಗಳು, ಯವತಿ ಮಂಡಳಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಅವಕಾಶ ನೀಡಿ ಜನಾಂದೋಲನವಾಗಿ ರೂಪಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಆಯಾಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿ ಇತರೆ ಇಲಾಖಾ ಅಧಿಕಾರಿಗಳು ಸಮಿತಿಯಲ್ಲಿ ಇರುತ್ತಾರೆ.
“ಕ್ಲೀನ್ ಇಂಡಿಯಾ” ಕಾರ್ಯಕ್ರಮದಲ್ಲಿ ಎಲ್ಲಾ ವರ್ಗದ ಜನರು ಯಾವುದೇ ಜಾತಿ, ಮತ, ಆಸ್ತಿ, ಅಂತಸ್ತು, ಧರ್ಮ, ಪಕ್ಷ ಪಂತಗಳ ಭೇದವಿಲ್ಲದೆ  ಪಾಲ್ಗೊಳ್ಳಬೇಕೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

Previous Post Next Post