ಪ್ರಧಾನ ಮಂತ್ರಿಯವರ ಕಛೇರಿ
ತೇವರ್ ಜಯಂತಿಯಂದು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ.
Posted On: 30 OCT 2021 2:03PM by PIB Bengaluru
ತೇವರ್ ಜಯಂತಿಯಂದು ಸುಪ್ರಸಿದ್ಧ ಪಸುಂಪೋನ್ ಮುತ್ತುರಾಮಲಿಂಗ ತೇವರ್ ಅವರ ಕೊಡುಗೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
"ತೇವರ್ ಜಯಂತಿಯ ವಿಶೇಷ ಸಂದರ್ಭದಲ್ಲಿ, ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರ ಶ್ರೀಮಂತ ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ. ಅತ್ಯಂತ ಧೈರ್ಯಶಾಲಿ ಮತ್ತು ಸಹೃದಯಿ ವ್ಯಕ್ತಿಯಾಗಿದ್ದ ಅವರು ತಮ್ಮ ಜೀವನವನ್ನು ಸಾರ್ವಜನಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು. ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಯೋಜನೆಗಳನ್ನು ಅವರು ಮಾಡಿದ್ದರು."
https://twitter.com/narendramodi/status/1454332498792620033?ref_src=twsrc%5Etfw%7Ctwcamp%5Etweetembed%7Ctwterm%5E1454332498792620033%7Ctwgr%5E%7Ctwcon%5Es1_c10&ref_url=https%3A%2F%2Fwww.pib.gov.in%2FPressReleasePage.aspx%3FPRID%3D1767849
Post a Comment