ರಾಜ್ಯೋತ್ಸವ ಪ್ರಶಸ್ತಿಗೆ ೪೫೦೦ ಅರ್ಜಿ

ರಾಜ್ಯೋತ್ಸವ ಪ್ರಶಸ್ತಿಗೆ ೪೫೦೦ ಅರ್ಜಿ ಬೆಂಗಳೂರು :
 ಕನ್ನಡ ರಾಜ್ಯೋತಸವ ಪ್ರಶಸ್ತಿಗೆ ೪೫೦೦ಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದು, ಪ್ರಶಸ್ತಿ ಪುರಸ್ಕೃತರ ಪಟ್ಟಿಯಯನ್ನು ಈ ತಿಂಗಳ ೨೮ ಅಥವಾ ೨೯ರಂದು ಬಿಉಗಡೆ ಮಾಡಲಾಗುತ್ತದೆ. ಈ ಸಂಬಂಧ ಮಾಹಿತಿ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದರು. ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮವನ್ನು ಅ.೨೪ ರಿಂದ ೩೦ರವರೆಗೆ ನಡೆಸಬೇಕು ಎಂದು ಹೇಳಿದರು. ಆಡಳಿತದಲ್ಲಿ ಕನ್ನಡ ಮತ್ತ? ಪರಿಣಾಮಕಾರಿ ಮಾಡಬೇಕು. ರಂಗಾಯಣ ಹಾಗೂ ಅಕಾಡೆಮಿ ಬಳಸಿ ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಅ.೨೮ ರಂದು ಕನಿ? ಮೂರು ಕನ್ನಡ ಗೀತೆಯನ್ನು, ಲಕ್ಷ ಕಂಠಗಳಲ್ಲಿ, ಒಂದು ಸಾವಿರದ ಕಡೆಗಳಲ್ಲಿ ಸಾಮೂಹಿಕ ಗಾಯನ ನಡೆಸಲಾಗುತ್ತದೆ. ವಿಧಾನಸೌಧ ಮೆಟ್ಟಿಲ ಮೇಲೆಯೂ ನಡೆಯಲಿದೆ ಎಂದರು. ಲಂಡನ್ ಬಸವ ಪ್ರತಿಮೆ ಸೇರಿ ೧೬ ರಾ?ಗಳಲ್ಲಿ ಗಾಯನ ನಡೆಯಲಿದೆ. ಉದ್ಯೋಗ ಶಿಕ್ಷಣಕ್ಕೆ ಬಂದಿರುವ ಹೊರ ರಾಜ್ಯದವರು ೧೦೦ ಪದ ಕನ್ನಡ ಬಳಸುವಂತೆ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

Post a Comment

Previous Post Next Post