ನಾಳೆಯಿಂದ ಆರಂಭವಾಗಲಿರುವ ದಕ್ಷಿಣ ವಲಯದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರ ಸಭೆ

ಪ್ರವಾಸೋದ್ಯಮ ಸಚಿವಾಲಯ

ಕೇಂದ್ರ ಸಚಿವ ಶ್ರೀ ಜಿ. ಕಿಶನ್‌ ರೆಡ್ಡಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಳೆಯಿಂದ ಆರಂಭವಾಗಲಿರುವ ದಕ್ಷಿಣ ವಲಯದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರ ಸಭೆಯ ಸಮಾರಂಭದಲ್ಲಿ ಮಾತನಾಡಲಿದ್ದಾರೆ

ದಕ್ಷಿಣ ಭಾಗದಲ್ಲಿ ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಉತ್ತೇಜನ, ರೈಲು ಪ್ರವಾಸೋದ್ಯಮ, ಕೌಶಲ ಅಭಿವೃದ್ಧಿ, ಹಡಗು ಪ್ರವಾಸೋದ್ಯಮಗಳ ಸಾಧ್ಯತೆ

Posted On: 27 OCT 2021 2:10PM by PIB Bengaluru

ಮುಖ್ಯಾಂಶಗಳು

  • ಪ್ರವಾಸೋದ್ಯಮ ಸಚಿವಾಲಯವು 28–29ನೇ ಅಕ್ಟೋಬರ್‌ 2021ರಂದು ಬೆಂಗಳೂರಿನಲ್ಲಿ ಎರಡು ದಿನಗಳ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ
  •  ಎರಡು ದಿನಗಳ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಸಚಿವಹಡುಗು ಸಚಿವರುರೈಲ್ವೇ ಸಚಿವರು ಪರಿಸರ ಹಾಗೂ ಅರಣ್ಯ ಸಚಿವರುಪುರಾತನ ವಿಭಾಗನೀತಿ ಆಯೋಗ ಮುಂತಾದ ಸಚಿವರು ಪಾಲ್ಗೊಂಡು ತಮ್ಮ ವಿಚಾರಗಳನ್ನ ಪ್ರತಿಪಾದಿಸಲಿದ್ದಾರೆ

ಪ್ರವಾಸೋದ್ಯಮ ಸಚಿವಾಲಯವು ಭಾರತದ ದಕ್ಷಿಣ ಭಾಗದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರ ಎರಡು ದಿನಗಳ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ. 28–29ನೇ ಅಕ್ಟೋಬರ್‌ 2021ರಂದು ಈ ಸಮ್ಮೇಳನದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಕಿಶನ್‌ ರೆಡ್ಡಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪಾಲ್ಗೊಳ್ಳಲಿದ್ದಾರೆ. 28ರಂದು ಇವರಿಬ್ಬರೂ ಮಹನೀಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮ್ಮೇಳನದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ವಿಭಾಗದ ರಾಜ್ಯ ಸಚಿವರು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶದ ಅಧಿಕಾರಿವರ್ಗ, ಮಾಧ್ಯಮ ಹಾಗೂ ಪ್ರವಾಸೋದ್ಯಮದಲ್ಲಿಯ ಭಾಗೀದಾರರು ಪಾಲ್ಗೊಳ್ಳಲಿದ್ದಾರೆ. 

ದೇಶದ ದಕ್ಷಿಣದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವೈವಿಧ್ಯಮಯ ಪ್ರವಾಸೀ ತಾಣಗಳನ್ನು ಹೊಂದಿವೆ. ಪ್ರತಿ ರಾಜ್ಯ ಹಾಗೂ ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶಗಳೂ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರವಾಸೋದ್ಯಮ ಇಲಾಖೆಯು ನಿರಂತರವಾಗಿ ಪ್ರವಾಸೋದ್ಯಮದ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಮೂಲಸೌಕರ್ಯಗಳು, ಮಾಹಿತಿ, ಪ್ರಚಾರ, ಪ್ರಸಾರ, ಕೌಶಲಾಭಿವೃದ್ಧಿ, ಮುಂತಾದವುಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಉತ್ತೇಜನಕ್ಕಾಗಿ ಶ್ರಮಿಸಲಾಗುತ್ತಿದೆ.

ಈ ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಸಚಿವಾಲಯಗಳು ತಮ್ಮ ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪ್ರವಾಸೋದ್ಯಮ, ಹಡಗು, ರೈಲ್ವೆ, ಪರಿಸರ, ಅರಣ್ಯ ಮತ್ತು ಪರಿಸರ ಬದಲಾವಣೆ ಪುರಾತತ್ವ ಸಮೀಕ್ಷೆ ಇಲಾಖೆ, ರಾಷ್ಟ್ರೀಯ ಇ ಆಡಳಿತ ವಿಭಾಗ, ನೀತಿ ಆಯೋಗ ಮುಂತಾದ ಇಲಾಖೆಗಳು ಪ್ರವಾಸೋದ್ಯಮದ ಉತ್ತೇಜನಕ್ಕೆ ಕೈಗೊಂಡ ಯೋಜನೆಗಳು, ವಿವಿಧ ತಯಾರಿಗಳು ಮುಂತಾದವುಗಳ ಬಗೆಗೆ ಚರ್ಚಿಸಲಾಗುವುದು. ಮಾಹಿತಿ ಹಂಚಲಾಗುವುದು.

ಈ ಎರಡು ದಿನಗಳ ಸಮಾವೇಶದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಅಲ್ಲಿಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆ, ಸುಧಾರಣೆ, ಸಾಧ್ಯತೆ, ಸ್ಥಿತಿಗತಿಯ ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ. ಜೊತೆಗೆ ತಮ್ಮ ರಾಜ್ಯಗಳಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕೆ ತಾವು ಕೈಗೊಂಡಿರುವ ಕ್ರಮಗಳ ಕುರಿತೂ ಚರ್ಚಿಸಲಿದ್ದಾರೆ. ಇಲ್ಲಿಯ ಗೋಷ್ಠಿಗಳಲ್ಲಿ ಪರಂಪರೆ ಮತ್ತು ಸಂಸ್ಕೃತಿ ಪ್ರವಾಸೋದ್ಯಮ, ರೈಲು ಹಾಗೂ ಕೌಶಲಾಭಿವೃದ್ಧಿ ಪ್ರವಾಸೋದ್ಯಮದ ಸಾಧ್ಯತೆಗಳ ಕುರಿತು ಚರ್ಚಿಸಲಾಗುವುದು.  ದಕ್ಷಿಣ ಭಾರತದ ಕರಾವಳಿ ಪ್ರದೇಶವನ್ನು ಗಮನದಲ್ಲಿರಿಸಿಕೊಂಡು ನೌಕಾ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತನ್ನು ನೀಡಲಾಗುವುದು.

ಪ್ರವಾಸೋದ್ಯಮ ಸಚಿವಾಲಯವು ದಕ್ಷಿಣ ಭಾರತೀಯ ತೀರ್ಥಕ್ಷೇತ್ರ ಮತ್ತು ಪವಿತ್ರ ಸ್ಥಳಗಳನ್ನು ಡಿಜಿಟಲ್‌, ಪ್ರಿಂಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಪ್ರಚಾರ ನೀಡಲಾಗಿದೆ ಎಂಬದುನ್ನು ಗಮನಿಸಲಾಗುವುದು. ಏಪ್ರಿಲ್‌ 2020ರಿಂದ ದೇಖೊ ಅಪ್ನಾ ದೇಶ್‌ ದೇಖೊ ಅಭಿಯಾನದ ಅಡಿ ಪ್ರವಾಸೋದ್ಯಮ ಸಚಿವಾಲಯವು ಹಲವಾರು ಗೋಷ್ಠಿಗಳನ್ನು, ಸಭೆಗಳನ್ನು ದೇಶದಾದ್ಯಂತ ಏರ್ಪಡಿಸುತ್ತ ಬಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರವಾಸಿ ತಾಣಗಳಿಗೆ ವಾಯು, ನೌಕೆ ಹಾಗೂ ರಸ್ತೆ ಮಾರ್ಗಗಳೆಲ್ಲವೂ ಅತ್ಯುತ್ತಮ ಸಂಪರ್ಕ ಸೇತುಗಳಾಗಿವೆ. ಈ ದಿಸೆಯಲ್ಲಿ ಸಾಕಷ್ಟು ಪ್ರವಾಸಿತಾಣಗಳು ಬೆಳಕಿಗೆ ಬಂದಿವೆ.

ಪ್ರವಾಸೋದ್ಯಮ ಇಲಾಖೆಯು ಸದ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಕೌಶಲಾಭಿವೃದ್ಧಿಯತ್ತ ಗಮನ ಹರಿಸುತ್ತಿದೆ.  ತರಬೇತಿ ಪಡೆದ, ಕೌಶಲಗಳುಳ್ಳ, ವೃತ್ತಿಪರ ಮಾನವ ಸಂಪನ್ಮೂಲವನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಜಾಗತಿಕ ಮಟ್ಟದ ಸೇವೆಗಳನ್ನು ನೀಡಲು ಪ್ರವಾಸೋದ್ಯಮವನ್ನು ಉತ್ತೇಜಿಸುವ, ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ವಿಸ್ತರಿಸುವತ್ತ ಗಮನ ಹರಿಸುತ್ತಿದೆ. 

ಕಳೆದ ಕೆಲವು ತಿಂಗಳುಗಳಲ್ಲಿ ದೇಶಿ ಪ್ರವಾಸೋದ್ಯಮ ಚೇತರಿಕೆಯ ಹಾದಿಯಲ್ಲಿದೆ. ಸದ್ಯದಲ್ಲಿಯೇ ಅಂತರರಾಷ್ಟ್ರೀಯ ಗಡಿಗಳನ್ನೂ ಪ್ರವಾಸೋದ್ಯಮಕ್ಕಾಗಿ ಮುಕ್ತಗೊಳಿಸಲಾಗುವುದು.  ಪ್ರವಾಸಿಗರ ವಿಶ್ವಾಸ ಗೆಲ್ಲುವುದು, ನಂಬಿಕೆ ಮೂಡಿಸುವುದು ಈ ಪರ್ವಕಾಲದಲ್ಲಿ ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಆರೋಗ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯಗಳೆರಡೂ ಕೋವಿಡ್‌ 19 ಸುರಕ್ಷೆಯ ಹಾಗೂ ನೈರ್ಮಲ್ಯದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿವೆ.   ಪ್ರವಾಸ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಮೌಲ್ಯೀಕರಣ, ಜಾಗೃತಿ ಹಾಗೂ ತರಬೇತಿ (SAATHI) ನೀಡುವಲ್ಲಿ ಹೆಚ್ಚು ಗಮನವಹಿಸಲಾಗುತ್ತಿದೆ. ಜತೆಗೆ ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲ ಉದ್ಯೋಗಿಗಳ ಸುರಕ್ಷೆಯನ್ನೂ ಗಮನದಲ್ಲಿರಿಸಲಾಗುತ್ತಿದೆ. ಗ್ರಾಹಕರು ಹಾಗೂ ಸೇವಾದಾರರು ಇಬ್ಬರ ಹಿತಾಸಕ್ತಿಯನ್ನು ಕಾಪಾಡುವಂಥ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಹೋಟೆಲ್‌ ಉದ್ಯಮಗಳಲ್ಲಿ ಸುರಕ್ಷೆಯನ್ನು ಹಾಗೂ ನೈರ್ಮಲ್ಯವನ್ನು ಕಾಪಾಡುವುದರಲ್ಲಿ ಮುಂಚೂಣಿಯಲ್ಲಿರಬೇಕು, ಕೋವಿಡ್‌ 19 ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು. ಪ್ರವಾಸಿಗರ ವಿಶ್ವಾಸಗಳಿಸುವಲ್ಲಿ ಸಂಪೂರ್ಣ ಸಜ್ಜಾಗಿರಬೇಕು.  ’ಸಾಥಿ’ ಆರಂಭವಾದೊಡನೆ 10,000 ಕ್ಕೂ ಹೆಚ್ಚಿನ ವಸತಿ ಸೌಲಭ್ಯಕ್ಕಾಗಿ ನೋಂದಣಿಯಾಗಿವೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಅಗತ್ಯದ ಮಾರ್ಗಸೂಚಿಗಳನ್ನು ಅನ್ವಯಿಸಲು, ಒಪ್ಪಿಕೊಂಡಿದ್ದು, ಪ್ರವಾಸಿಗರು ಉತ್ತಮ ರೀತಿಯಲ್ಲಿ ಪ್ರತಿಸ್ಪಂದಿಸಿದ್ದಾರೆ. 

ಪ್ರವಾಸೋದ್ಯಮ ತಾಣಗಳಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಲು ಪ್ರವಾಸೋದ್ಯಮ ಸಚಿವಾಲಯವು ದೇಶದಾದ್ಯಂತ ಕ್ರಮಗಳನ್ನು ಕೈಗೊಂಡಿದೆ. ಮೂಲಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳ ಅಡಿಯಲ್ಲಿ ಸ್ವದೇಶ ದರ್ಶನ್‌, ಪ್ರಶಾದ್‌ (National Mission on Pilgrimage Rejuvenation and Spiritual, Heritage Augmentation Drive). ಮುಂತಾದ ಯೋಜನೆಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.    ಸ್ವದೇಶ್‌ ದರ್ಶನ್ 

 76  ಯೋಜನೆಗಳನ್ನು ದೇಶದಾದ್ಯಂತ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಲ್ಲಿ  ದಕ್ಷಿಣ ಭಾರತದ ಹಲವಾರು ಸ್ಥಳಗಳೂ ಸೇರಿಕೊಂಡಿವೆ. ಈ ಯೋಜನೆಯಲ್ಲಿ ಕರಾವಳಿ ವಲಯ, ಬೌದ್ಧ ವಲಯ, ಪರಿಸರ ವಲಯ, ಅಧ್ಯಾತ್ಮ ವಲಯ ಎಂದು ವಿಂಗಡಿಸಲಾಗಿದೆ. ಪ್ರಶಾದ್‌ ಅಡಿಯಲ್ಲಿ 37 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿಯೂ ದಕ್ಷಿಣ ಭಾರತಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಇವೆಲ್ಲವೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೃಹತ್‌ ಪ್ರಮಾಣದ ಬದಲಾವಣೆ ಮತ್ತು ಸುಧಾರಣೆ ಅಷ್ಟೇ ಅಲ್ಲ, ಮನ್ವಂತರವನ್ನೇ ತರಲಿವೆ.

***



(

    Post a Comment

    Previous Post Next Post