*ಇಂದು ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿಯ ಮಂಗಳೂರು ದಸರಾ ಸುಸಂಪನ್ನ.* 🌹🙏🏻

*ಇಂದು ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿಯ ಮಂಗಳೂರು ದಸರಾ ಸುಸಂಪನ್ನ.* 🌹🙏🏻

_ಅಮ್ಮನ ಶರನ್ನವರಾತ್ರಿಯು ದುರ್ಗ ಆರ್ಯಾದಿ ವೈಭವೋಪೂರ್ಣ ನವ ಅಲಂಕಾರಾದಿಗಳ ಉತ್ಸವಾದಿ ಮಹೋತ್ಸವಗಳಿಂದ ಬಹು ವಿಶೇಷತೆ ಹಾಗು ಜನಾಕರ್ಷಣೆಗೆ ಕಾರಣವಾಗಿರುವ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವವು ಯಶಸ್ವೀಯುತವಾಗಿ ಇಂದು ಸುಸಂಪನ್ನವಾಯಿತು._ 

_*ಶ್ರೀ ಮಂಗಳಾದೇವಿಯ ಮಂಗಳೂರು ದಸರಾ*_ ಎಂಬ ಪ್ರಖ್ಯಾತಿಯೊಂದಿಗೆ ಲೋಕವಿಖ್ಯಾತಿ ಪಡೆದಿರುವ ಶ್ರೀ ಮಂಗಳಾದೇವಿಯ ನವರಾತ್ರಿ ಮಹೋತ್ಸವವು ಇಂದಿನ ಆಶ್ವಯುಜ ಶುಕ್ಲ ದ್ವಾದಶಿಯ ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಸಂಪ್ರೋಕ್ಷಣೆಯೊಂದಿಗೆ ಮಂಗಳವಾಯಿತು.❤️

_ಯಾವ ಜನ್ಮದ ಋಣವೋ, ಯಾವ ಪುಣ್ಯ ಕಾರ್ಯದ ಸುಕೃತ ಭಾಗ್ಯವೋ, ಮಂಗಳಾದೇವಿಯ ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡ ನಾವೇ ಪುಣ್ಯವಂತರು.💯💯_
*ಬೇಡಿದ್ದನ್ನು ನೀಡುವ ಕೇಳಿದನ್ನು ಕೊಡುವ ಸರ್ವಮಂಗಳೇ ಶ್ರೀ ಮಂಗಳಾದೇವಿ ಎಂದೇ ಪ್ರಸಿದ್ಧಳಾಗಿರುವ ವಿಂಧ್ಯಾಚಲ ವಾಸಿನಿ ಮಂಜುನಾಥನ ಪಟ್ಟದರಸಿ ಆ ಮಹಾತಾಯಿ ಸಿದ್ಧ ಸುರಮುನಿ ದೇವಾನು ದೇವತೆಗಳಿಂದ ಸಂಪೂಜಿಸಲ್ಪಟ್ಟು ರಾಜ ಮಹಾರಾಜರ ಕಾಲದಿಂದಲೂ ಮಂಗಳಾ ಪುರದ ಕ್ಷೇತ್ರಾಧಿಪತಿಯಾಗಿ ಮೆರೆದು ಸಮಸ್ತ ಭಕ್ತಜನ ಪ್ರಜಾಪರಿಪಾಲಕಳಾಗಿ ನಮ್ಮ ಪರಿಪಾಲನೆಯ ಅನುಗ್ರಹದ ಭಾರವನ್ನು ಹೊತ್ತವಳು. ನಮ್ಮ ಜೀವಮಾನವಿಡೀ ಆಕೆಯ ಸೇವೆಗಾಗಿ, ಅವಳ ಆರಾಧನೆಗಾಗಿ ಅನುದಿನವೂ ಮಂಗಳಾದೇವಿ ಕ್ಷೇತ್ರಕ್ಕೆ ಬರುವಂತೆ ಮಾಡಿ ಇಹ ಪರದಲ್ಲಿ  ಹರಸಿ ಆಶೀರ್ವದಿಸು ಅಮ್ಮಾ ಎಂದು ಪ್ರಾರ್ಥಿಸುತ್ತಾ ಶರನ್ನವರಾತ್ರಿಯ ಕೃತಜ್ಞತಾ ಪೂರ್ವಕ ಪ್ರಣಾಮಗಳನ್ನು ತಾಯಿಯ ಪಾದಕಮಲಗಳಲ್ಲಿ ಸಮರ್ಪಿಸೋಣ.*

_ನಿನ್ನೆಯ ದಿನ ಶನಿವಾರ ಶ್ರೀ ದೇವಿಗೆ ನವರಾತ್ರಿಯ ಪ್ರಯುಕ್ತ ಅಂತಿಮ ದಿನ ಏಕಾದಶಿಯ ಅವಭೃತ ಮಂಗಳಸ್ನಾನದ ಮಹೋತ್ಸವ. ಕಳೆದ ಏಕಾದಶಿಯ ಸಾಯಂಕಾಲ ೬.೩೦'ಕ್ಕೆ ಬಲಿ ಹೊರಟು ವೈಶಿಷ್ಠ್ಯಪೂರ್ಣ ಉಡುಕೆ ಸುತ್ತು, ಚೆಂಡೆ ಸುತ್ತು, ಓಡ ಬಲಿ, ಸ್ಯಾಕ್ಸೋಫೋನ್ ಸುತ್ತು... ವಾದ್ಯಾದಿ ಸುತ್ತುಗಳೊಂದಿಗೆ ಪಲ್ಲಕ್ಕಿ ಉತ್ಸವವು ನಡೆದು ನಾಗಸ್ವರದ ವಿಶೇಷ ಸ್ವರ ನಾದ ಆಲಾಪದಲ್ಲಿ, ಉಡುಕೆ, ಚೆಂಡೆ ತಾಳಗಳ ಹಿಮ್ಮೇಳದಲ್ಲಿ ಶ್ರೀ ಕ್ಷೇತ್ರವೆ ವರ್ಣರಂಜಿತವಾಗಿ ಝೇಂಕರಿಸುತ್ತಿತ್ತು. ಅದರಲ್ಲೂ ಪಾಲಕಿ ಬಲಿಯ ೨ ಸುತ್ತು ನಾಗಸ್ವರದ ವಿಶೇಷ 'ಸರ್ಪ ಪುಂಗಿನಾದ' ಉತ್ಸವದ ಪ್ರಧಾನ ಆಕರ್ಷಣೆಗೆ ಕಾರಣವಾಯಿತು. 😁_

_ಆ ಬಳಿಕ ೮.೩೦'ಕ್ಕೆ ಸರಿಯಾಗಿ ಶ್ರೀ ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಓಕುಳಿ ಪೂಜೆಯು ನೆರವೇರಿತು. ಬಳಿಕ ೮.೪೫'ಕ್ಕೆ ಸಣ್ಣಭಂಡಿಯಲ್ಲಿ ಶ್ರೀ ದೇವಿಯ ಅವಭೃತ ಸವಾರಿ ಹೊರಟು ನೇತ್ರಾವತಿ ಫಲ್ಗುಣಿ ಸಂಗಮ ತೀರದಲ್ಲಿ ದೇವಿಯ ಅವಭೃತ ಮಂಗಳ ಸ್ನಾನವನ್ನು ಕಂಡು ಭಾವುಕ ಭಕ್ತಾದಿಗಳು ತನ್ಮಯರಾದರು._ 

_*ಜೋರಗಿ ಧಾರಾಕಾರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಹಾಮಳೆಯನ್ನೂ ಲೆಕ್ಕಿಸದೆ ಹೊರಟ ನಿನ್ನೆಯ ಶ್ರೀ ದೇವಿಯ ಅವಭೃತ ಸವಾರಿ ಸದಾಕಾಲ ಸ್ಮರಣೀಯ🥰.*_
_*ಸಾಕ್ಷಾತ್ ವರುಣದೇವನೆ ಮಂಗಳಮ್ಮನ ನವರಾತ್ರಿಯ ವೈಭವಕ್ಕೆ ಮನಸೋತು ಶರಣು ಶರಣಾರ್ಥಿ ಯಾಗಿ ಬಂದಿರುವಂತೆ ಸಿಡಿಲು ಮಿಂಚಿನ ಆರ್ಭಟದಲ್ಲಿ ಮುಗಿಲು ಮುಟ್ಟುವ ಮಂಗಳಾದೇವಿ ಅಮ್ಮನ ಪಾದರವಿಂದಕ್ಕೆ ಗೋವಿಂದಾ ಎಂಬ ಜಯಘೋಷ ಘಂಟಾ ನಾದವಾಗಿ ಮಾರ್ದನಿಸಿ ಶ್ರೀ ಮಂಗಳಾದೇವಿ ಅಮ್ಮನಿಗೆ ಸಂಭ್ರಮದ    ಅವಭೃತ ಮಂಗಳ ಸ್ನಾನವು ನೆರವೇರಿತು* ❤️_

_ಬಳಿಕ ರಾತ್ರಿ ೧೦'ಕ್ಕೆ ಸ್ವಸ್ಥಾನ ಕ್ಷೇತ್ರಕ್ಕೆ ಭಂಡಿಯಲ್ಲಿ ದೇವಿಯ ಆಗಮನವಾಗಿ ನವರಾತ್ರಿಯ ಅಂತಿಮ ಉತ್ಸವವಾಗಿ ನಡೆದ ದರ್ಶನಬಲಿಯ ದೃಶ್ಯವು ಕಣ್ತುಂಬಿಕೊಂಡು ನೆರೆದವರ ಪುಳಕಿತಗೊಳಿಸಿತು._ 

_ಇದರೊಂದಿಗೆ ಇಂದು ಪ್ರಾತಃಕಾಲ ನವಾಕ - ಶುದ್ಧೀಕಲಶ'ವಾಗಿ ಮಧ್ಯಾಹ್ನದ ಮಹಾಪೂಜೆಯು ನಡೆದು ಬ್ರಾಹ್ಮಣೋತ್ತಮರಿಂದ ಗಂಧಾಕ್ಷತೆಯ ಅಕ್ಷತೆಯ ಪ್ರಸಾದವನ್ನು ಸ್ವೀಕರಿಸಿ ಸಂಪ್ರೋಕ್ಷಣೆಯೊಂದಿಗೆ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವ ೨೦೨೧'ಶುಭ ಮಂಗಳವಾಯಿತು._

_ತನ್ನೆಲ್ಲಾ ಉತ್ಸವಾದಿಗಳನ್ನು ನಿರ್ವಿಘ್ನವಾಗಿ ನಡೆಸಿಕೊಟ್ಟು ಇಂದಿನ ಅಲಂಕಾರದಲ್ಲಿ ಶ್ರೀ ದೇವಿಯು ಅಭಯ ವರದ ಹಸ್ತಳಾಗಿ ಚಕ್ರ -ರಜತ ಕಮಲ ಪುಷ್ಪವನ್ನು ಧರಿಸಿ ಪದ್ಮಾಸನಸ್ಥಿತಳಾದ ಮಹಾರಾಣಿಯು ಅನವರತ ಆಕೆಯ ಸನ್ನಿಧಾನದಲ್ಲಿ ಪೊಡಮಟ್ಟು ಧನ್ಯರಾಗುವ ಸುಯೋಗವನ್ನು ನಮ್ಮೆಲ್ಲರಿಗೂ ಸದಾ ಕರುಣಿಸಿ ಕರುಣಾ ಕಟಾಕ್ಷ ಸ್ಥಿರವಾಗಿರಲಿ._

ಇಂತೆ ಈ ಬಾರಿಯ ನವರಾತ್ರಿಯ ಅಪೂರ್ವ ಕ್ಷಣಕ್ಕೆ ಶಿರಸ್ಸಾ ಮನಸ್ಸಾ ನಮಿಸಿ ಬರುವ *ಮುಂದಿನ ವರುಷ ಸಪ್ಟೆಂಬರ್ ೨೬' ರಿಂದ ಆರಂಭವಾಗಿ ಅಕ್ಟೋಬರ ೫'ರ ವರೆಗೆ ನಡೆಯಲಿರುವ ೨೦೨೨'ರ ನವರಾತ್ರಿಗೆ* ಸಿಹಿಗನಸುಗಾಣುತ್ತಾ ಸಂಭ್ರಮಿಸೋಣ😜😆👏

_ನವರಾತ್ರಿಯಿಂದ ಸಂತುಷ್ಟಳಾದ ಸರ್ವಮಂಗಳೆಯು ಸಕಲ ಭಯಗಳಿಂದ ದುರಿತಗಳಿಂದ ಈ ವಿಶ್ವವನ್ನು ಪಾರುಮಾಡಲಿ. ತಾಯಿಯ ದರ್ಶನದಿಂದ ಕರ್ಮಗಳು ಕಳೆದು ಪುಣ್ಯ ಸಂಚಯವಾಗುತ್ತಿದೆ._

_*ಧರ್ಮೋ ರಕ್ಷತಿ ರಕ್ಷಿತಃ* ಎಂಬ ಸನಾತನ ವಾಕ್ಯದಂತೆ ಸತ್ಯ ನ್ಯಾಯ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಕಾಯ ವಾಚ ಮನಸಾ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಧರ್ಮದ ಅನುಷ್ಠಾನ ಮಾಡೋಣ. 'ಧರ್ಮ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ' ಎಂಬಂತೆ ಅನವರತ ಮಂಗಳಾದೇವಿಯ ಸ್ಮರಣೆಯಿಂದ ಆಕೆಯ ಕ್ಷೇತ್ರದ ಸೇವೆಗೈಯುತ್ತಾ ಬದುಕನ್ನು ಮುನ್ನಡೆಸೋಣ._

_ದೇವಿ ಸಾಮಾನ್ಯವಾಗಿ *ತನ್ನ ನಿತ್ಯಾಲಂಕಾರದಲ್ಲಿ ಅಭಯ ವರದ ಹಸ್ತಳಾಗಿ ಇರುವುದು ರೂಢಿ. ಅರ್ಥಾತ್ ನಮ್ಮ ಪ್ರಾರ್ಥನೆ ಸಂಕಲ್ಪಗಳೆಲ್ಲದಕ್ಕೂ ತಥಾಸ್ತು ಎಂದು ಅಭಯಹಸ್ತದಿಂದಲೇ ಅನುಗ್ರಹಿಸುತ್ತಾಳೆ. ವರದ ಹಸ್ತದಿಂದ ಬೇಕು ಬೇಕಾದನ್ನು ಕೇಳಿ ಕೇಳಿದನ್ನು ಯಥೇಚ್ಛವಾಗಿ ಕರುಣಿಸುತ್ತಾಳೆ.* ಹೀಗಿರುವಾಗ ಯಾವ ರೋಗ ರುಜಿನಗಳು ಸಂಕಷ್ಟ ಬಾಧೆಗಳು ನಮ್ಮನ್ನು ಕಾಡಲಾರವು. ನಮ್ಮ ದೇಶ, ರಾಜ್ಯವೇ ಸ್ತಬ್ಧವಾಗಿದ್ದ ಸಂದರ್ಭದಲ್ಲಿ ದೇವಳವೂ ತಿಂಗಳುಗಳ ಕಾಲ ಪ್ರವೇಶ ರಹಿತವಾದ ಕಾಲದಲ್ಲಿ ಇಷ್ಟೊಂದು ನವರಾತ್ರಿಯ ಮಹೋತ್ಸವವು ಯಶಸ್ವಿಯಾಗುತ್ತದೆ ಎಂದೂ ಯಾರೂ ಊಹಿಸಲು ಸಾಧ್ಯವಿರಲಿಲ್ಲ._

_ದೇವಿ ನವರಾತ್ರಿ ಉತ್ಸವದ ಮೂಲಕವೇ ತನ್ನ ಕಾರಣೀಕ ಶಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾಳೆ. ಅಸಾಧ್ಯವನ್ನೂ ಸಾಧ್ಯಗೈದು ಅದರಲ್ಲಿ ಪಾಲ್ಗೊಂಡು ಧನ್ಯರಾಗುವ ಸೌಭಾಗ್ಯವನ್ನು ದಯಪಾಲಿಸಿದ್ದಾಳೆ._

_*ದೇವಿಯ ಮೇಲೆ ಅಚಲ ವಿಶ್ವಾಸ, ಶ್ರದ್ಧೆ ಭಕ್ತಿಯಿಂದ ಧರ್ಮದ ಅನುಷ್ಠಾನ, ನ್ಯಾಯ ಬದ್ಧ ಜೀವನ ಶೈಲಿ ಮತ್ತು ಹಿತ-ಮಿತ ಸಾತ್ವಿಕ ಸಸ್ಯಾಹಾರ ಸೇವನೆಯಿಂದ ರೋಗ ಮುಕ್ತರಾಗುವುದರಲ್ಲಿ ಸಂದೇಹವಿಲ್ಲ.*_    

_ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಅವಳ ರಕ್ಷಣೆಯಿಂದಲೇ ರೋಗ ಭೀತಿ, ಮೃತ್ಯುಭಯ, ಕಂಟಕಾದಿ ಹಲವು ರೀತಿಯ ತಾಪತ್ರಯಗಳನ್ನು ಎದುರಿಸಿ ದೇವಿಯ ಅನುಗ್ರಹದಿಂದ ಪರಿಹರಿಸಿ ಕೊಂಡಿದ್ದೇವೆ. ಅಷ್ಟು ಸುಲಭದಲ್ಲಿ ಆ ಮಹಾತಾಯಿ ನಮ್ಮನ್ನು ಬಿಟ್ಟು ಕೊಡುವುದಿಲ್ಲ. ನಮ್ಮಕೈ ಬಿಡುವುದಿಲ್ಲ. ಎಂತಹ ಕಷ್ಟವೇ ಇರಲಿ, ಯಾವ ಅರಿಷ್ಟವೇ ಬರಲಿ, ಗ್ರಹಣ ಗ್ರಹಚಾರವಿರಲಿ, ಪ್ರಾಕೃತಿಕ ವಿಕೋಪಗಳಾಲಿ ಮಹಾರೋಗವೇ ವಿಶ್ವಾದ್ಯಂತ ಉಲ್ಬಣಿಸಲಿ ಸ್ವಯಂ ತಾನೇ ರಕ್ಷಣೆಗೆ ಅದೃಶ್ಯ ರೂಪದಲ್ಲಿ ಧಾವಿಸಿ ಬಂದು ಎಲ್ಲವನ್ನು ನಿವೃತ್ತಿಗೊಳಿಸಿ, ಹರಸಿ ಆಶಿರ್ವದಿಸಿದ್ದಾಳೆ._
*ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ* ಎನ್ನುವಂತೆ ಅವಳ ಹೊರತಾಗಿ ಇನ್ನಾರೂ ನಮ್ಮನ್ನು ರಕ್ಷಿಸಲಾರರು.

_*ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಮ್ ತಾತ ಗಚ್ಛತಿ* ಎನ್ನುವಂತೆ ಒಳ್ಳೆಯದನ್ನು ಮಾಡಿದವನಿಗೆ ಎಂದೂ ಕೆಟ್ಟದಾಗುದಿಲ್ಲ. ಒಳ್ಳೆದನ್ನೇ ಮಾಡಿ, ಮಾಡುತ್ತಲೇ ಇರಿ. ಅವಳ ಕೃಪಾಕಟಾಕ್ಷ ಒಂದಿದ್ದರೆ ಸಾಕು. ಆ ಮಹಾತಾಯಿಯೇ ನಮ್ಮೆಲ್ಲರನ್ನು ಕಾಪಾಡುತ್ತಾಳೆ._

_ಕೃಪೆತೋರಿ ಅನುಗ್ರಹಿಸಿ ಸರ್ವರನ್ನೂ ಉದ್ಧರಿಸಿ ಆಶಿರ್ವದಿಸಬೇಕೆಂಂದು ಭಕ್ತಿಯಿಂದ ಪ್ರಾರ್ಥನೆ' ಯೊಂದಿಗೆ ನವರಾತ್ರಿ೨೦೨೧'ಕ್ಕೆ ಮಂಗಳ ಹಾಡೋಣ._🌸

_ಹೇ ತಾಯಿ ನಿನ್ನನ್ನು ನಮಿಸುವ ಸರ್ವರಿಗೂ ಶುಭವಾಗಲಿ. ಎಲ್ಲರ ಮನದಲ್ಲೂ ಸುಖ ಶಾಂತಿ ಸಂತೋಷ ಸಮೃದ್ಧವಾಗಿ ನೆಲೆಗೊಳ್ಳಲಿ. ನಿನ್ನ ಮಹಿಮೆಯಿಂದ ವಿಶ್ವದೆಲ್ಲಾ ಉತ್ಪಾತಗಳು ಶಮನಗೊಂಡು ನಮ್ಮಅಪರಾಧಗಳು ಏನೇ ಇದ್ದರೂ ಎಲ್ಲವನ್ನು ಕ್ಷಮಿಸಿ ಪ್ರಸನ್ನಳಾಗು._

     🌼ಶುಭಂ🌼

Post a Comment

Previous Post Next Post