ಫಿಟ್ನೆಸ್ ಕಾಪಾಡಿಕೊಂಡಿರುವವರಿಗೆ ಈ ರೀತಿ ಸಾವು ಸಂಭವಿಸುವುದಿಲ್ಲ ಎಂದು ಅನೇಕರು ಹೇಳುವುದುಂಟು. ಆದರೆ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಆ ಮಾತನ್ನು ನಂಬಲಾಗುತ್ತಿಲ್ಲ. ಇದೇ ವಿಚಾರವಾಗಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. 'ರೆಗ್ಯೂಲರ್ ವರ್ಕೌಟ್ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಸಡನ್ ಸಾವು ಸಂಭವಿಸುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಕಟು ಸತ್ಯವು ಪುನೀತ್ ಅವರ ದುರಂತ ನಿಧನನಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ? ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಬೇಕು' ಎಂದು ಆರ್ಜಿವಿ ಬರೆದುಕೊಂಡಿದ್ದಾರೆ.
'ಪುನೀತ್ ರಾಜ್ಕುಮಾರ್ ಅವರ ಸಾವು ಈಗಲೂ ಒಂದು ಕೆಟ್ಟ ಕನಸಿನಂತೆ ಅನಿಸುತ್ತಿದೆ. ಅವರ ಆಪ್ತರ ಪರಿಸ್ಥಿತಿ ಏನಾಗಿರಬಹುದು ಅಂತ ಊಹಿಸಲೂ ಸಾಧ್ಯವಾಗುತ್ತಿಲ್ಲ. ಸಾವಿಗೆ ತಾರತಮ್ಯ ಇಲ್ಲ. ಅದು ಯಾರನ್ನು ಬೇಕಾದರೂ ಕೊಲ್ಲುತ್ತದೆ. ನಮ್ಮಲ್ಲಿ ಯಾರಾದರೂ ಯಾವಾಗ ಬೇಕಿದ್ದರೂ ಸಾಯಬಹುದು ಎಂಬುದು ಭಯಾನಕ ಸತ್ಯ. ಬದುಕಿರುವಾಗಲೇ ಫಾಸ್ಟ್ ಫಾರ್ವರ್ಡ್ ಮೋಡ್ನಲ್ಲಿ ಜೀವಿಸಬೇಕು' ಎಂದು ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಇದೇ ರೀತಿ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದು ಈಗ ನೆನಪಾಗುತ್ತಿದೆ.
https://twitter.com/RGVzoomin/status/1454266603365822465?ref_src=twsrc%5Etfw%7Ctwcamp%5Etweetembed%7Ctwterm%5E1454266603365822465%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F
Ram Gopal Varma
@RGVzoomin
The tragic case of @PuneethRajkumar exposes a hard truth that there is no co±------ relation between healthy habits, regular workouts etc and sudden death ..Why death does not care about who i
Post a Comment