ಉಪ್ಪಾರ ಸಮಾಜದ ಅಭಿವೃದ್ಧಿಗೆ ಭಾ.ಜ.ಪ ಬದ್ಧ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

*ಉಪ್ಪಾರ ಸಮಾಜದ ಅಭಿವೃದ್ಧಿಗೆ ಭಾ.ಜ.ಪ  ಬದ್ಧ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಸಿಂದಗಿ: ಉಪ್ಪಾರ ಸಮಾಜದ  ಅಭಿವೃದ್ಧಿಗೆ ಭಾ.ಜ.ಪ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.

ಸಿಂದಗಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ
ಉಪ್ಪಾರ ಸಮಾಜದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಉಪ್ಪಾರ ಸಮಾಜ ಬಹಳ ಶ್ರಮಜೀವಿಗಳು. ಮಹರ್ಷಿ ಭಗೀರಥರ ವಂಶಜರಾಗಿರುವ ಉಪ್ಪಾರ ಸಮಾಜದವರು ತಮ್ಮ ಕಾರ್ಯಕೌಶಲ್ಯ ಹಾಗೂ ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ. ಮಹರ್ಷಿ ಭಗೀರಥರು ತಮ್ಮ ಪ್ರಯತ್ನದಿಂದ ಭೂಮಿಗೆ ಗಂಗೆಯನ್ನು ತಂದು ಮನುಕುಲದ ಆರಾಧ್ಯ ದೈವವಾಗಿದ್ದಾರೆ ಎಂದರು.  

ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಶೈಕ್ಷಣಿಕವಾಗಿ ಮುಂದುವರೆಯಬೇಕು. ಆದ್ದರಿಂದ  ಉಪ್ಪಾರ ಸಮಾಜದ ಅಭಿವೃದ್ಧಿ ನಿಗಮವನ್ನು ಬಲಪಡಿಸಿ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಮಾಜದ ಯುವಕ ಮತ್ತು ಯುವತಿಯರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

  ನಾಡಿನಾದ್ಯಂತ  ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ ಅಭಿವೃದ್ಧಿಗೊಳಿಸಿ ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ಗುರುತರವಾದ ಜವಾಬ್ದಾರ ಈ ಉಪ್ಪಾರ ಅಭಿವೃದ್ಧಿ ನಿಗಮಕ್ಕಿದೆ. ನಿಗಮದ ಅಧ್ಯಕ್ಷರು ಈ ಸಮಾಜಕ್ಕೆ ನ್ಯಾಯವನ್ನು ಒದಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಹಿಂದುಳಿದ ಸಮಾಜ ಇಂದು ಜಾಗೃತವಾಗಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಬೂಸನೂರ ಅವರನ್ನು ಆಯ್ಕೆ ಮಾಡುವ ಮೂಲಕ ಉಪ್ಪಾರ ಸಮಾಜದ ಸೇವೆಗೆ ಸಹಕರಿಸಬೇಕು.  ಚುನಾವಣೆ ಸಂದರ್ಭದಲ್ಲಿ ನಮ್ಮ ಕೆಲಸಗಳು ಮಾತನಾಡಬೇಕು.ನಿಮ್ಮ ಭಾವನೆಗಳಿಗೆ ವಿಚಾರಗಳಿಗೆ ಸ್ಪಂದಿಸಲಾಗುವುದು. ಸಮಾಜದ ಒಳಿತಿಗಾಗಿ ನಿಗಮದ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಪಕ್ಷದ ಸಂಪೂರ್ಣ ಸಹಕಾರ ಇರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Post a Comment

Previous Post Next Post