ಕಮಲ-ತೆನೆ ಮೈತ್ರಿಗೆ ದೊಡ್ಡಬಳ್ಳಾಪುರ ನಗರಸಭೆ ಚುಕ್ಕಾಣಿ

ಕಮಲ-ತೆನೆ ಮೈತ್ರಿಗೆ  ದೊಡ್ಡಬಳ್ಳಾಪುರ ನಗರಸಭೆ ಚುಕ್ಕಾಣಿ.

ಅಧ್ಯಕ್ಷೆಯಾಗಿ ಬಿಜೆಪಿಯ ಸುಧಾರಣಿ, ಉಪಾಧ್ಯಕ್ಷೆಯಾಗಿ ಜೆಡಿಎಸ್ ನ ಫರ್ಹಾನ್ ತಾಜ್ ಆಯ್ಕೆ.

ಎರಡೂವರೆ ವರ್ಷಕ್ಕೆ ಅಧಿಕಾರ ಹಂಚಿಕೆ ಮಾಡಿಕೊಂಡ ಬಿಜೆಪಿ-ಜೆಡಿಎಸ್ ನಾಯಕರು.


ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ - ಜೆಡಿಎಸ್ ಮೈತ್ರಿಗೆ ನಗರಸಭೆ ಚುಕ್ಕಾಣಿ ದೊರೆತಿದೆ.
ನಗರದ ನಗರಸಭೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿ ಅರುಳ್ ಕುಮಾರ್ ಹಾಗೂ ಉಪ ಚುನಾವಣಾಧಿಕಾರಿಯಾಗಿ ಟಿ.ಎಸ್.ಶಿವರಾಜ್ ಪ್ರಕ್ರಿಯೆ ನಡೆಸಿದರು.
ಬಿಜೆಪಿಗೆ ಅಧ್ಯಕ್ಷ ಸ್ಥಾನ: 

ಬಿಜೆಪಿಯಿಂದ ಎಸ್.ಸುಧಾರಾಣಿ, ಕಾಂಗ್ರೆಸ್ ನಿಂದ ಎಸ್‌.ನಾಗವೇಣಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಿನಿ ಸದಸ್ಯ ಶಾಸಕ ಟಿ.ವೆಂಕಟರಮಣಯ್ಯ ಸೇರಿ 11 ಸದಸ್ಯರು ಕಾಂಗ್ರೆಸ್‌ನ ಎಸ್‌.ನಾಗವೇಣಿ ಪರ ಹಾಗೂ ನಾಮಿನಿ ಸದಸ್ಯ  ಸಂಸದ ಬಚ್ಚೇಗೌಡ ಸೇರಿ 22 ಮಂದಿ ಸದಸ್ಯರು ಬಿಜೆಪಿಯ ಎಸ್.ಸುಧಾರಾಣಿ ಪರ ಕೈ ಎತ್ತುವ ಮೂಲಕ 11 ಮತಗಳ ಅಂತರದಿಂದ ಬಿಜೆಪಿಯ ಎಸ್.ಸುಧಾರಾಣಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೆಡಿಎಸ್ ಗೆ ಉಪಾಧ್ಯಕ್ಷ ಸ್ಥಾನ:

ಕಾಂಗ್ರೆಸ್ ನಿಂದ ರಜನಿ, ಜೆಡಿಎಸ್ ನಿಂದ ಆದಿಲಕ್ಷ್ಮೀ, ಫರ್ಹಾನಾ ತಾಜ್, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಆದಿಲಕ್ಷ್ಮೀ, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಹಿಂಪಡೆದರು.
ಅಂತಿಮವಾಗಿ ಕಾಂಗ್ರೆಸ್ ನ ರಜನಿ ಎಂ.ಸುಬ್ರಮಣಿ, ಜೆಡಿಎಸ್ ನ ಫರ್ಹಾನಾ ತಾಜ್ ಸ್ಪರ್ಧಾ‌ಕಣದಲ್ಲಿದ್ದರು. ನಾಮಿನಿ ಸದಸ್ಯ ಶಾಸಕ ಟಿ.ವೆಂಕಟರಮಣಯ್ಯ ಸೇರಿ 11 ಸದಸ್ಯರು ಕಾಂಗ್ರೆಸ್ ನ ರಜನಿ ಎಂ.ಸುಬ್ರಮಣಿ ಅವರ ಪರ, ನಾಮಿನಿ ಸದಸ್ಯ  ಸಂಸದ ಬಚ್ಚೇಗೌಡ ಸೇರಿ 22 ಮಂದಿ ಸದಸ್ಯರು ಜೆಡಿಎಸ್ ನ ಫರ್ಹಾನಾ ತಾಜ್ ಪರ ಕೈ ಎತ್ತುವ ಮೂಲಕ 11 ಮತಗಳ ಅಂತರದಿಂದ ಫರ್ಹಾನಾ ತಾಜ್ ಅವರನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯಲ್ಲಿ ನಗರಸಭೆ ಪೌರಾಯುಕ್ತ ರಮೇಶ್.ಎಸ್.ಸುಣಗಾರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಸಂಸದ ಹಾಗೂ ಶಾಸಕ ನಾಮಿನಿ ಸದಸ್ಯರ ಹೊರತು ಪಡಿಸಿ 31 ಜನ ಸದಸ್ಯರನ್ನು ಹೊಂದಿರುವ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕು ಸ್ಪಷ್ಟ ಬಹುಮತ ಬರದೆ ಅತಂತ್ರವಾಗಿತ್ತು. ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ 3 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡು ನಗರಸಭೆ ಚುಕ್ಕಾಣಿ ಹಿಡಿದಿವೆ.
ಅಧಿಕಾರ ಹಂಚಿಕೆ ಸೂತ್ರ:

೧೨ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡು, ಉಪಾಧ್ಯಕ್ಷ ಹಾಗೂ ಮೂರು ನಾಮಿನಿ ಸದಸ್ಯರ ಆಯ್ಕೆ ಮಾಡುವ ಅಧಿಕಾರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಡಿದೆ. ಅಲ್ಲದೆ ಸ್ಥಾಯಿ ಸಮಿತಿಗಳನ್ನು ಜೆಡಿಎಸ್ ನಾಯಕರ ಪಾಲಾಗಿದೆ. ಬಿಜೆಪಿ ಕೇವಲ ಒಂದು ಅಧ್ಯಕ್ಷ ಸ್ಥಾನ ಮತ್ತು ಒಂದು ನಾಮಿನಿ ಸದಸ್ಯತ್ವಕ್ಕೆ ತೃಪ್ತಿ ಪಟ್ಟುಕೊಂಡಿದೆ. 

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಚಿವರಾದ ಆರ್.ಅಶೋಕ್, ಎಂಟಿಬಿ ನಾಗರಾಜು, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ, ನಿರ್ದೇಶಕ ಆನಂದ್ ಮೂರ್ತಿ, ಜೆಡಿಎಸ್ ಮುಖಂಡರಾದ ಅಪ್ಪಯ್ಯ, ಹರೀಶ್ ಗೌಡ, ಬಿ.ಮುನೇಗೌಡ ಅಭಿನಂದಿಸಿದರು.

ಫೋಟೋ: ೨೬೧೦ಡಿಬಿಪಿವಿಕೆ೧
ದೊಡ್ಡಬಳ್ಳಾಪುರ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಚಿವರಾದ ಆರ್.ಅಶೋಕ್, ಎಂಟಿಬಿ ನಾಗರಾಜು ಅಭಿನಂದಿಸಿದರು.

ಫೋಟೋ:೨೬೧೦ಡಿಬಿಪಿವಿಕೆ೨
ನೂತನ ಅಧ್ಯಕ್ಷೆ ಎಸ್. ಸುಧಾರಣಿ

ಫೋಟೋ: ೨೬೧೦ಡಿಬಿಪಿವಿಕೆ೩
ನೂತನ ಉಪಾಧ್ಯಕ್ಷೆ ಫರ್ಹಾನ್ ತಾಜ್.

Post a Comment

Previous Post Next Post