ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ

*ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ ಹಬ್ಬದ ವಿಶೇಷವೇನೆಂದರೆ, ಕಾಲವಾದ ಹಿರಿಯರಿಗೆ ಸ್ಮರಿಸಿ, ನೆನೆದು ಅವರುಗಳ ಆತ್ಮಕ್ಕೆ ಶಾಂತಿ ಕೋರುವ ಹಿಂದೂಧರ್ಮ ಸಂಸ್ಕೃತಿ ಪರಂಪರೆಗಳ ಸಂಪ್ರದಾಯದ ಹಬ್ಬ :=*

 ಅನಾದಿಕಾಲದಿಂದಲೂ ನಡೆದುಕೊಂಡುಬಂದ ಹಿಂದೂ ಧರ್ಮ ಸಂಸ್ಕೃತಿ-ಪರಂಪರೆಗಳ ಸಂಪ್ರದಾಯದ ಹಬ್ಬದ ಪೈಕಿ ಒಂದಾದ ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ ಹಬ್ಬ. ಈ ಹಬ್ಬ ಹಿಂದುಗಳ ಪವಿತ್ರವಾದ ಹಬ್ಬ.

 ಕಾಲವಾದ ಹಿರಿಯರನ್ನು ಸ್ಮರಿಸಿ, ನೆನೆದು ಅವರುಗಳ ಆತ್ಮಕ್ಕೆ ಶಾಂತಿ ಕೋರುವ ಹಬ್ಬ. ಈ ಹಬ್ಬ ಸಂತೋಷಕ್ಕಿಂತ, ಹೃದಯತುಂಬಿ ಬರುವ ದುಃಖದ ಸಂಗತಿಯಲ್ಲಿ ಆಚರಿಸುವ ಹಬ್ಬ.

 ದೇಹಬಿಟ್ಟ ಮೊದಲನೆಯ ದಿನ ಅಂತ್ಯಕ್ರಿಯೆ, ಮೂರು ದಿವಸಕ್ಕೆ ಮೃತರ ಸಮಾಧಿಗೆ ಹಾಲುತುಪ್ಪ ಬಿಡುವ ಪದ್ಧತಿ, ಹನ್ನೊಂದು ದಿವಸಕ್ಕೆ ವೈಕುಂಠ ಸಮಾರಾಧನೆ. ಹಾಗೆ ಪ್ರತಿ ವರ್ಷಕ್ಕೆ ಬರುವ ದಿನವೇ ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ.

 ನಾವುಗಳು ಎರಡು ತಲೆಮಾರುಗಳನ್ನು ಮಾತ್ರ ಅಂದು ನಾವುಗಳು ಹಿರಿಯರನ್ನು ನೆನೆಸಿಕೊಳ್ಳುತ್ತೇವೆ.

 ಉಸಿರು ಇದ್ದಾಗ ಏನಾದರೂ ಸಾಧಿಸಿದ್ದರೆ ಹೆಸರು ಇರುತ್ತದೆ. ಅಥವಾ ಏನೂ ಸಾಧನೆ ಇಲ್ಲದೇ ಉಸಿರು ನಿಂತರೆ ಅಂದೇ ಹೆಸರು ಮಾಯವಾಗುತ್ತದೆ. ಒಟ್ಟಾರೆ ಮನುಷ್ಯ ಹುಟ್ಟಿದರೆ ಶಾಶ್ವತವಾಗಿ ಜಗತ್ತಿನಲ್ಲಿ ಹೆಸರು ನಿಲ್ಲುವಂತೆ ಸಾಧಿಸಿ ಬದುಕಬೇಕು. ಅಂತಹ ಮಹನೀಯರಿಗೆ ಈ ಭಾರತಾಂಬೆ ಜನ್ಮ ನೀಡಿದೆ. 

 ಅದರಲ್ಲಿ ಕೆಲವು ಹಿರಿಯರು ಬಿಟ್ಟು ಹೋಗಿದ್ದಾರೆ ,ಕೆಲವು ಹಿರಿಯರು ಕೊಟ್ಟು ಹೋಗಿದ್ದಾರೆ. ಆದರೆ ಯಾರೂ ಸಹ ಜೊತೆಯಲ್ಲಿ ಕೊಂಡೊಯ್ದಿಲ್ಲ.

 ಉದಾಹರಣೆಗೆ:= ಮನೆಮಠ, ಆಸ್ತಿಪಾಸ್ತಿ, ಹಣ, ಚಿನ್ನ-ಬೆಳ್ಳಿ, ವಜ್ರ-ವೈಡೂರ್ಯ ಇತ್ಯಾದಿ.

ಆದರೆ ಕೆಲವು ಹಿರಿಯರು ಬಿಟ್ಟು ಹೋಗಿರುವವರು ಮತ್ತು ಕೊಟ್ಟು ಹೋಗಿರುವವರಿಗೆ ಒಂದು ರೀತಿ ಅಥವಾ ಏನೂ ಕೊಟ್ಟಿಲ್ಲದವರಿಗೆ ಒಂದು ರೀತಿ ನಡೆದುಕೊಳ್ಳುವ ಮನುಷ್ಯನ ವಿಚಿತ್ರ ಮನಸ್ಥಿತಿ ಹಸಿರಾಗಿದೆ.

ಇಂದಿನ ಕಾಲಘಟ್ಟದಲ್ಲಿ ಮನುಷ್ಯ ಸತ್ತ ಮೇಲೂ ಸಹ ಕೆಲವರು ದ್ವೇಷ ಸಾಧಿಸುವರು ಹಲವು ಮಂದಿ ಕುಟುಂಬ ಮತ್ತು ಸಮಾಜದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲವು ಕುಟುಂಬಗಳಲ್ಲಿ ಬದುಕಿದ್ದಾಗ ಪೊಲೀಸ್ ಠಾಣೆ ,ಕೋರ್ಟು ಮೆಟ್ಟಿಲುಗಳನ್ನು ಏರಿಸಿ ಹಾಗೂ ಕೆಲವು ಕುಟುಂಬ ಗಳ ಮನೆಯಲ್ಲಿ ಬದುಕಿದ್ದರೂ ಸಹ ಸತ್ತಂಗೆ ಎಂಬ ರೀತಿ ಕುಟುಂಬದಲ್ಲಿ ಕೆಲವರು ಕಾಣಿಸಿಕೊಂಡಿದ್ದರು ಹಾಗೂ ಕಾಣಿಸಿಕೊಂಡಿದ್ದಾರೆ.

 ಬದುಕಿದ್ದಾಗ ನೆಮ್ಮದಿಯ ಜೀವನಕ್ಕೆ ಕುಟುಂಬದ ಸದಸ್ಯರು ಸಹಕರಿಸದೇ ಅವರು ಸತ್ತ ಮೇಲೆ ದೂಪ ಮತ್ತು ಪಿಂಡ ಹಾಕುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.
ಕಾರಣಾಂತರಗಳಿಂದ ಅಂತಹ ನೊಂದ ವ್ಯಕ್ತಿಗಳು ಸತ್ತರೆ ಮನೆ ಗೋಡೆಗೆ ಒಂದು ಫೋಟೋ, ಊರಿಗೊಂದು ಊಟ ಹಾಕಿ ಕೈತೊಳೆದುಕೊಳ್ಳುತ್ತಾರೆ.

ಇಂತಹ ಮನಸ್ಥಿತಿ ಉಳ್ಳವರು ಪ್ರತಿ ವರ್ಷಕ್ಕೆ ಬರುವ ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ ಹಬ್ಬವನ್ನು ಯಾವ ಪುರುಷಾರ್ಥಕ್ಕೆ ಆಚರಣೆ ಮಾಡುವುದು, ಕೇವಲ ಬೂಟಾಟಿಕೆ .

ಯಾವುದೇ ಹಬ್ಬವನ್ನು ಸಂಪ್ರದಾಯ ಪದ್ಧತಿ ಮೂಲಕ ಆಚರಣೆ ಮಾಡುವುದು ಸರಿ ,ಆದರೆ ಹಬ್ಬಗಳ ತಕ್ಕಂತೆ ಮಾನವನ ನಡವಳಿಕೆ ಸರಿ ಇರಬೇಕು .ಆಗ ಅದಕ್ಕೆ ತಕ್ಕ ಭೂಷಣ ಇರುತ್ತದೆ.

ಕೇವಲ ಯಾವುದೇ ಹಬ್ಬಗಳು ಬೂಟಾಟಿಕೆ , ಆಡಂಬರ, ಹೆಗ್ಗಳಿಕೆ, ತೋರ್ಪಡಿಸುವಿಕೆ , ಪ್ರದರ್ಶಿಸುವಿಕೆ ಹಬ್ಬಗಳು ಆಗಬಾರದು. ಅದಕ್ಕೆ ಆದ ಹಿಂದೂ ಧರ್ಮದ ಸಂಸ್ಕೃತಿ ಪರಂಪರೆಗಳ ಕೆಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರೆದ ಹಾಗೆ ನಡೆದುಕೊಳ್ಳಬೇಕು.

 ಹಬ್ಬಗಳನ್ನು ಆಚರಿದರೆ ದೈವ ಮೆಚ್ಚುವ, ಜಗ ಮೆಚ್ಚುವ ಮಿಗಿಲಾಗಿ ಆತ್ಮ ಮೆಚ್ಚುವ ಆಚರಣೆಯಾಗಬೇಕು.

ಒಟ್ಟಾರೆ ಪಿತೃಪಕ್ಷ- ಮಹಾಲಯ ಅಮಾವಾಸ್ಯೆ ಹಬ್ಬವನ್ನು ಸಡಗರ-ಸಂಭ್ರಮವಿಲ್ಲದೇ ಶ್ರದ್ಧಾ ಭಕ್ತಿ ಮತ್ತು ಮೌನದಿಂದ ಆಚರಿಸುವುದು ಸರಿ. ಆದರೆ ಕಾಲವಾದ ಹಿರಿಯರ ಮಾರ್ಗದರ್ಶನವನ್ನು, ಅವರುಗಳ ದಾರಿ ಮಾರ್ಗಗಳನ್ನು ,ಅವರ ತತ್ವಸಿದ್ಧಾಂತಗಳನ್ನು, ಅವರ ಸಾಮಾನ್ಯ ಸರಳತೆ ಯ ಬದುಕನ್ನು ತಮ್ಮಗಳ ಜೀವನದ ಬದುಕಿನಲ್ಲಿ ಅಳವಡಿಸಿಕೊಂಡರೆ ಅವರ ಆತ್ಮಕ್ಕೆ ಶಾಂತಿ ಮತ್ತು ಸದ್ಗತಿ ದೊರಕುತ್ತದೆ.

 ಶುಭವಾಗಲಿ ;
ಶುಭ ಕೋರುವ ;

ಕೃಷ್ಣಪ್ಪ ಪ್ರಗತಿಪರ ಚಿಂತಕ
 ಆರ್ ಆರ್ ನಗರ ಬೆಂಗಳೂರು.

Post a Comment

Previous Post Next Post