ನವರಾತ್ರಿ ಮಹಿಮೆ

*🌺🌷ಆಶ್ವೀನಮಾಸದ ಮಹತ್ವ🌷🌺*

                *|| ಸಂಚಿಕೆ-2 ||*

*🌷ನವರಾತ್ರಿ ಮಹಿಮೆ🌷*

**************************

*ನವರಾತ್ರಿಯಲ್ಲಿ ವೇದ ಪಾರಾಯಣ ಮತ್ತು*
*ಭಾಗವತ ಪಾರಾಯಣ ಮಹಿಮೆ*

ನವರಾತ್ರಿಯಲ್ಲಿ ಚತುರ್ವೇದ ಪಾರಾಯಣಕ್ಕೆ ಅಧಿಕ ಫಲವಿದೆ ನವರಾತ್ರಿಯಲ್ಲಿ ಮಾಡಿದ ವೇದ ಪಾರಾಯಣವು ಗಯಾ ಶ್ರಾದ್ಧಗಳು ವಿಷ್ಣುದರ್ಶನದಿoದಾಗುವ ಪುಣ್ಯಗಳನ್ನು ಕೊಡುವುದು ಶ್ರೀಸೂಕ್ತ , ರಾತ್ರಿ ಸೂಕ್ತ ಸರಸ್ವತಿ ಸೂಕ್ತ ,ದುರ್ಗ ಸಪ್ತಶತೀಗಳ ಪಾರಯಣ ಮಾಡಬೇಕು ದುರ್ಗಾ ಸುಳಾದಿ ಲಕ್ಷ್ಮೀ ಶೋಭಾನ ವೆಂಕಟೇಶ ಸ್ತವರಾಜ ಲಕ್ಷ್ಮೀಹೃದಯ ಇವುಗಳನ್ನು ಪಠಿಸಿದರೆ ಸೌಭಾಗ್ಯ ಪ್ರಾಪ್ತಿಯು .
ಚತುರ್ವೇದ ಪಾರಾಯಣವು ಅಶಕ್ಯ ವಾದಾಗ ಭಾಗವತ ಪಾರಾಯಣವನ್ನು ಮಾಡಬೇಕು ಭಾಗವತ ಶ್ರವಣವು ವಿಹಿತವಾಗಿದೆ.

**********************
*::ದೇವಿ ಪೂಜೆ ಮಹತ್ವ::*
**********************

ನವರಾತ್ರಿಯಲ್ಲಿ ಒಂಬತ್ತು ದಿವಸಗಳು ದೇವಿಪೂಜೆಯನ್ನು ಮಾಡಬೇಕು ಅದರಲ್ಲಿಯೂ ಅಷ್ಟಮೀ ನವಮಿಯಂದು ದೇವಿ ಪೂಜೆಯನ್ನು ಆಚರಿಸಲೆಬೇಕು ,ಇಲ್ಲಿ ದೇವಿ ಎಂದರೆ ದ್ಯೋತನಾದಿಗುಣವುಳ್ಳ ಭಗವಂತನ ಶಕ್ತಿಯಾಗಿದೆ ನವರಾತ್ರಿಯಲ್ಲಿ ದೇವಿಯ ಪೂಜೆಯಿoದ ಮನುಷ್ಯರು ಶೋಕ ರಹಿತರಾಗುವರು .

ಅಷ್ಟಮ್ಯಾo ಚ ನವಮ್ಯಾo ಚ ಜಗನ್ಮಾತರಮಂಬಿಕಾo |
ಪೂಜಯಿತ್ವಾ sಶ್ವಿನೇ ಮಾಸಿ ವಿಶೋಕೋ ಜಾಯತೇ ನರ: ||

***************************************

*::ಪುತ್ಥಲಿಕಾಪೂಜೆ -ಬೊಂಬೆಪೂಜೆಯ ಮಹತ್ವ::*

***************************************

ನವರಾತ್ರಿಯಲ್ಲಿ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೂ.ಬೊಂಬೆ ಗಳನ್ನಿಡುವ ಪದ್ದತಿಯಿದೆ..ಕಳಶವನ್ನು. ಸ್ಥಾಪಿಸಿ ,ಬೊಂಬೆಯಲ್ಲಿ ಲಕ್ಷ್ಮೀ ನಾರಾಯಣರನ್ನು ಆವಾಹಿಸಿ ಅವರ ಆಡಳಿತಕ್ಕೆ ಒಳಪಡುವ ಸಮಸ್ತವಸ್ತುಗಳನ್ನೂ ಬೊಂಬೆ ಪ್ರತಿರೂಪಗಳಿಂದ ಚಿಂತಿಸಿ,ಪೂಜಿಸುವುದು ,ಬೊಂಬೆಗಳಲ್ಲಿ ದಶಾವತಾರಗಳು ,ವಿವಿಧ ಧಾನ್ಯಗಳು ,ರಾಗಿಯ ಪೈರು ,ಇವೇ ಮೊದಲಾದ ವಸ್ತುಗಳಲ್ಲವೂ ಲಕ್ಷ್ಮೀನಾರಾಯಣರ ಆಧಿಪತ್ಯಕ್ಕೆ ಒಳಗೂಂಡಿವೆ ಎಂದು ಚಿಂತಿಸಿ ಮರದ ಬೊಂಬೆಯನ್ನು ಮೇಲೆ ಉಳಿದ ಬೊಂಬೆಗಳನ್ನು ಅದರ ಕೇಳಗೆ ಇಟ್ಟು ಪುತ್ಥಾಲಿಕಾ(ಬೊಂಬೆ) ಪೂಜೆಯನ್ನು ನವರಾತ್ರಿಯಲ್ಲಿ ಮಾಡಬೇಕು.

************************************
*ನಾರಿಕೇಲ - ಬಾಗಿಣ ದಾನ*
**********************************

ನವರಾತ್ರಿಯಲ್ಲಿ ಪ್ರತಿದಿವಸವೂ ನಾರಿಕೇಲ(ತೆಂಗಿನಕಾಯಿ)ವನ್ನು ಒಂಬತ್ತು ನಾರಿಯರಿಗೆ ದಾನವನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಒಂಭತ್ತು ಒಂಭತ್ತರಂತೆ ದಾನ ಮಾಡಬೇಕು. ನವನಾರಿಕೇಲವನ್ನು ಕೊಡಲು ಅಶಕ್ಯವಾದರೆ ಕದಲೀ(ಬಾಳೆಹಣ್ಣು) ಫಲಗಳನ್ನಾದರೂ ಒಂಭತ್ತರಂತೆ ದಾನವನ್ನು ಮಾಡಬಹುದು. 

*ನಾರಿಕೇಲ ಫಲಾದೀನಿ ನವಕಂ ನವಕಂ ಪ್ರಿಯೇ ||*

ಬಿದಿರಿನ ಪಾತ್ರೆಯಲ್ಲಿ (ಮೊರ) ನಾನಾ ವಿಧವಾದ ಸೌಭಾಗ್ಯ ದ್ರವ್ಯಗಳನ್ನು ವಸ್ತ್ರಗಳನ್ನು ಇಟ್ಟು ದುರ್ಗೆಯ ಪ್ರೀತಿಗಾಗಿ ಬಾಗಿಣವನ್ನು ಕೊಡಬೇಕು. 

*ವಂಶಪಾತ್ರಾಣಿ ವಸ್ತ್ರಾಣಿ ಭಕ್ಷ್ಯಭೋಜ್ಯಾನ್ವಿತ್ವಾನಿ ಚ | ಸೌಭಾಗ್ಯ ಪಾತ್ರಾಣ್ಯಥವಾ ಕುಂಕುಮ ಪ್ರಭೃತೀನಿ ಚ | ದುರ್ಗಾದೇವಿ ಪ್ರೀಯತಾಂ ಮೇ ಇತ್ಯುಕ್ತ್ವಾ ವಿಧಿವದ್ ದದೇತ್ ||*

***********************************************

*|| ನವರಾತ್ರಿಯಲ್ಲಿ ಮುತೈದೆಯರಿಗೆ ಕೂಡಬೇಕಾದ ದಾನಗಳು ||*

ಪ್ರತಿಪತ್ತಿನಿಂದ ಹಿಡಿದು ಒಂಭತ್ತು ದಿವಸಗಳಲ್ಲಿ ಕೇಶಸಂಸ್ಕಾರ ವಸ್ತುಗಳನ್ನು ಮುತ್ತೈದೆಯರಿಗೆ ಕೊಡಬೇಕು. 

*ಕೇಶಸಂಸ್ಕಾರ ದ್ರವ್ಯಾಣಿ ಪ್ರದದ್ಯಾತ್ ಪ್ರತಿಪತ್ ದಿನೇ |*

ದ್ವಿತೀಯಾ ದಿನದಂದು ರೇಷ್ಮೆ ವಸ್ತ್ರ ರೇಷ್ಮೆಯ ತಲೆ ಕಟ್ಟಿಕೊಳ್ಳುವ ದಾರ (ಪಟ್ಟಿ ದೋರ- ಟೇಪು) ವನ್ನು ದಾನ ಕೊಡಬೇಕು. ಇದು 
" ಪ್ರೀತಿ ದ್ವಿತೀಯ " ಎನಿಸಿದೆ. ತೃತೀಯಾದಲ್ಲಿ ಕನ್ನಡಿಯನ್ನು, ಸಿಂಧೂರ, ಗೋರಂಟಿಯನ್ಶು ದಾನ ಮಾಡಬೇಕು. ಚತುರ್ಥಿಯಲ್ಲಿ ಮಧುಪರ್ಕವನ್ನು ಕಾಡಿಗೆ, ತಿಲಕವನ್ನು ದಾನ ಮಾಡಬೇಕು. 

*ಪಟ್ಟದೋರಂ ದ್ವಿತೀಯಾಯಾಂ ಕೇಶಸಂಚಯ ಹೇತವೇ|| ದರ್ಪಣಂ ಚ ತೃತೀಯಾಯಾಂ ಸಿಂಧೂರಾಲಕ್ಷಕಂ ತಥಾ | ಮಧುಪರ್ಕಂ ಚತುರ್ಥ್ಯಾಂತು ತಿಲಕಂ ನೇತ್ರಮಂಡನಂ ||*

ಪಂಚಮಿಯಲ್ಲಿ ನಾನಾ ವಿಧ ಅಂಗರಾಗಗಳು ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಷಷ್ಠಿಯಂದು ತುಲಸಿಯ ಬುಡದಲ್ಲಿ ದೇವಿಯನ್ನು ಅರ್ಚಿಸಿ ಸಪ್ತಮಿಯಂದು ಮನೆಯೊಳಗೆ ಪೂಜಿಸಬೇಕು. ಅಷ್ಟಮಿಯಂದು ವಿಶೇಷವಾಗಿ ದುರ್ಗೆಯನ್ನು ಪೂಜಿಸಿ ನಂತರ ನವಮಿಯಂದು ಮರದ, ಕತ್ತಿ, ಮುಂತಾದ ಜೀವನೋಪಾಯ ವಸ್ತುಗಳನ್ನು ತದಂತರ್ಯಾಮಿಯಾದ ದುರ್ಗಾಂತರ್ಯಾಮಿ ಪರಶುರಾಮನನ್ನು ಪೂಜಿಸಿ, ದಶಮಿಯಂದು ವಿಜಯೋತ್ಸವವನ್ನು ಆಚರಿಸಿದರೆ ದುರ್ಗೆಯು ಸ್ಕಂಧನಂತೆ ಪಾಲಿಸುವಳು  

*ಅನೇನ ವಿಧಿನಾ ಯಸ್ತು ದೇವೀಂ ಪೂಜಯಂತೇ ನರಃ |*
*ಸ್ಕಂಧವತ್ ಪಾಲಯೇತ್ ತಂ ದೇವೀ ಸರ್ವಾಪದಿ ಸ್ಥಿತಮ್ ||*

   *|| ಮುಂದುವರಿಯುತ್ತದೆ ||*

*( ಮುಂದಿನ ಷಂಚಿಕೆಯಲ್ಲಿ ನವರಾತ್ರಿಯಲ್ಲಿ ಕುಮಾರಿಪೂಜೆಯ ಮಹತ್ವದ ತಿಳಿಸುತ್ತೇನೆ )*

                   *|| ಶ್ರೀಕೃಷ್ಣಾರ್ಪಣಮಸ್ತು ||*

*✍️ ಫಣೀಂದ್ರಕೌಲಗಿ*

 *ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್*
, -.,........ 

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ ‌  ‌   ‌    ‌   ‌    ‌   ‌   ‌    ‌   ‌   ‌    ‌   ‌   ‌   ‌    ‌    ‌     ‌                                                    ‌ *ನವರಾತ್ರಿ 2021 : ಈ ವರ್ಷ ನವರಾತ್ರಿ ಎಂಟೇ ದಿನ..! ಇಲ್ಲಿದೆ ಘಟಸ್ಥಾಪನೆ ಮುಹೂರ್ತ, ಶುಭ ದಿನಗಳು..!*

ಈ ಬಾರಿ ನವರಾತ್ರಿ ಹಬ್ಬವು 2021 ರ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಆಚರಿಸಲಾಗುವುದು. ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ. 

ಶಾರದಿಯಾ ನವರಾತ್ರಿ ಎಂದರೆ ದುರ್ಗಾ ದೇವಿಯ ಪವಿತ್ರ 9 ರೂಪಗಳನ್ನು ಪೂಜಿಸುವ ಒಂಬತ್ತು ದಿನಗಳು. ನವರಾತ್ರಿಯ ಪ್ರತಿದಿನ ದುರ್ಗಾ ದೇವಿಯ 9 ವಿವಿಧ ರೂಪಗಳನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶ ಸಿಗುತ್ತದೆ. ಈ ವರ್ಷ ಶಾರದಿಯ ನವರಾತ್ರಿಯನ್ನು ಕೇವಲ ಎಂಟು ದಿನಗಳ ಕಾಲ ಮಾತ್ರ ಆಚರಿಸಲಾಗುತ್ತದೆ. ಕಾರಣ, ಈ ಬಾರಿ ಚತುರ್ಥಿ ಮತ್ತು ಪಂಚಮಿ ತಿಥಿ ಒಟ್ಟಿಗೆ ಬೀಳುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ, ಶಾರದಿಯ ನವರಾತ್ರಿ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 14 ರವರೆಗೆ ಮತ್ತು ವಿಜಯದಶಮಿ ಅಂದರೆ ದಸರಾವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.

ಅಕ್ಟೋಬರ್ 9 ರ ಶನಿವಾರ, ತೃತೀಯಾ ಬೆಳಿಗ್ಗೆ 7:48 ರವರೆಗೆ ಇರುತ್ತದೆ, ನಂತರ ಚತುರ್ಥಿ ಆರಂಭವಾಗುತ್ತದೆ, ಇದು ಮರುದಿನ10, ಭಾನುವಾರ ಬೆಳಿಗ್ಗೆ 4:56 ಗಂಟೆಯವರೆಗೆ ಇರುತ್ತದೆ. ಈ ಬಾರಿ ಮಾತೃ ದೇವಿಯ ಆರಾಧನೆಯು ಗುರುವಾರದಿಂದ


Post a Comment

Previous Post Next Post