ಮನಗೆದ್ದ ಬಸವರಾಜ ಬೊಮ್ಮಾಯಿ... ಭಲೇ ಮುಖ್ಯಮಂತ್ರಿ ಎಂದ ಕನ್ನಡ ಹೋರಾಟಗಾರರು

ಭಲೇ ಮುಖ್ಯಮಂತ್ರಿ ಬೊಮ್ಮಾಯಿಯವರೆ. ಼಼‌಼಼಼಼    ಕನ್ನಡ ಚಿತ್ರರಂಗದ ಮಹಾ ತಾರೆ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ರಾಜ್ಯದ ಜೊತೆಗೆ ದೇಶ-ವಿದೇಶಗಳಲ್ಲಿರುವ  ಅಭಿಮಾನಿಗಳ ಕಣ್ಣೀರ ಕಂಬನಿ ಹರಿದಿದೆ ರಾಜ್ಯಧಾನಿ   ಬೆಂಗಳೂರಿನಲ್ಲಿ ಜನಸಾಗರವೇ ಸೇರಿ ಎಲ್ಲೆಲ್ಲಿಯೂ ಜನ ಎಂಬಂತೆ ಪುನೀತ್ ರಾಜಕುಮಾರ್  ರವರ ಅಂತಿಮದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರ ಗುಂಪು ಕಂಠೀರವ ಕ್ರೀಡಾಂಗಣಕ್ಕೆ ಬಂದು  ಸಭ್ಯತೆ ಮತ್ತು ಸಂಯಮದಿಂದ ಪುನೀತ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ನಾಯಕತ್ವದಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಪೊಲೀಸರ ಏರು ದನಿಯ ಮಾತುಗಳಿಲ್ಲ ಅವರ ಲಾಟಿ ಮಾತನಾಡಲಿಲ್ಲ ಅವರು ಮೌನದಿಂದಿದ್ದು ಅಪ್ಪು ಅಭಿಮಾನಿ ಗಳಲ್ಲಿಯೂ ಮೌನ ತಂದಿದ್ದಾರೆ ಮೂರು ದಿನಗಳ ಕಾಲ ತಾವು ಮುಖ್ಯಮಂತ್ರಿಯಾಗಿ ಇರದೆ ಜನಸಾಮಾನ್ಯರ ಮುಖ್ಯಮಂತ್ರಿ ಎಂಬಂತೆ ವರ್ತಿಸಿದಿರಿ ಪೊಲೀಸ್ ಇಲಾಖೆ ತಮ್ಮ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸದೆ ಜನಸಾಮಾನ್ಯರ ಪೊಲೀಸರು ಎಂಬಂತೆ ಅಭಿಮಾನಿಗಳನ್ನು ನಿಯಂತ್ರಿಸಿದ್ದಾರೆ ತಾವುಗಳು ಮತ್ತು ಸರ್ಕಾರವು ಜನರಲ್ಲಿ ಪ್ರೀತಿ ಮತ್ತು ಅಭಿಮಾನವನ್ನು ಹೆಚ್ಚುವಂತೆ ಮಾಡಿದ್ದೀರಿ ಬೊಮ್ಮಾಯಿ ಸರ್ ಅಂತಿಮ ವಿದಾಯದ ವೇಳೆ ತಾವು ರಾಜ್ ಕುಮಾರ್ ಕುಟುಂಬದ ಅಭಿಮಾನಿಯಾಗಿ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಆತ್ಮೀಯ ಅಭಿಮಾನಿಯಾಗಿ ತಾವು ಜನಮೆಚ್ಚಿದ ಮುಖ್ಯಮಂತ್ರಿ ಎಂಬಂತೆ ವರ್ತಿಸಿ ಪ್ರೀತಿಯಿಂದ ಅಪ್ಪು  ಅವರ ಹಣೆಗೆ ಹೂಮುತ್ತನಿಟ್ಟು ಕಣ್ಣೀರ ಹನಿಯ ಚೆಲ್ಲಿ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿ ಕೊಂಡಿದ್ದೀರಿ ನಿಮಗಿದೋ ನಮ್ಮ ನಮಸ್ಕಾರ ನಿಮ್ಮ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು ನಿಮ್ಮ ಆಡಳಿತಕ್ಕೆ ಶುಭವಾಗಲಿ ಸುಖವಾಗಲಿ ಼಼ನೇ ಭ ರಾಮಲಿಂಗ ಶೆಟ್ಟಿ ಕನ್ನಡಪರ ಹೋರಾಟಗಾರ

Post a Comment

Previous Post Next Post