ನಾಗಪ್ಪ ಬೀದಿ, ಪ್ಯಾಲೇಸ್ ಗುಟ್ಟಹಳ್ಳಿ, ಬೆಂ.೩., ಪ್ರದೇಶದಲ್ಲಿಕುಡಿಯುವ ನೀರಿನ ಜತೆ ಮಲೀನ ನೀರು ಪೂರೈಕೆ.

ಪ್ಯಾಲೇಸ್ ಗುಟ್ಟಹಳ್ಳಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ನಂ.೧೦, ೪ನೇ ಅಡ್ಡ ರಸ್ತೆ, ನಾಗಪ್ಪ ಬೀದಿ, ಪ್ಯಾಲೇಸ್ ಗುಟ್ಟಹಳ್ಳಿ, ಬೆಂ.೩., ಕುಡಿಯುವ ನೀರಿನ ಜತೆ ಮಲೀನ ನೀರು ಪೂರೈಕೆ.
ದಿ.೨೬.೧೦.೨೦೨೧ ರಂದು ಬೆಳಗಿನ ಜಾವ ನಮ್ಮ ಬಡಾವಣೆ ೪ನೇ ಆಡ್ಡ ರಸ್ತೆ, ನಾಗಪ್ಪ ಬೀದಿಯಲ್ಲಿ ಜಲಮಂಡಳಿ ಪೂರೈಸಿದ (ಪೈಪ್ ಗಳಲ್ಲಿ ಹರಿಸಿದ) "ಕುಡಿಯುವ ನೀರು" ಸಂಪೂರ್ಣ ಮಲೀನದಿಂದ ಕೂಡಿತ್ತು. ನಾಗರಿಕರು ಅದರ ಸ್ಯಾಂಪಲ್ ಅನ್ನು ಬಾಟಲುಗಳಲ್ಲಿ ಹಿಡಿದು ಇಟ್ಟಿದ್ದಾರೆ. ಈ ಪ್ರದೇಶದಲ್ಲಿ ನೀರು ಬಿಡುವ ಜಲಮಂಡಳಿಯ 'ವಾಲ್ ಮನ್" ಅವರಿಗೆ ಬೆಳಗಿನ ಜಾವ ಕೊಳಾಯಿ ಗಳಲ್ಲಿ ಬರುತ್ತಿರುವ ನೀರನ್ನು ಹಾಗೂ ಪ್ಲಾಸ್ಟಿಕ್ ಬಾಟಲಲ್ಲಿ ಹಿಡಿದಿಟ್ಟಿರುವ ನೀರನ್ನು ತೋರಿಸಲಾಗಿದೆ. ಅಲ್ಲದೆ, "ಒಳಚರಂಡಿ ಯ ಮಲೀನ ನೀರು ಕುಡಿಯುವ ನೀರಿನ ಪೈಪ್ ಗಳಲ್ಲಿ ಸೆರುತ್ತಿರುವ ಜಾಗವನ್ನು, ಯುಜಿಡಿ ಛೇಂಬರುಗಳನ್ನು ಹಾಗೂ ಸಮಸ್ಯೆ ಬಗ್ಗೆ ಪ್ರತ್ಯಕ್ಷವಾಗಿ ವಿವರಿಸಲಾಗಿದೆ.
ಇಲ್ಲಿ ಒಳಚರಂಡಿ ಸಮಸ್ಯೆ ಇರುವ ಬಗ್ಗೆ ಬಡಾವಣೆ ಯ ನಾಗರಿಕ ರು ಈಗಾಗಲೆ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತೋರುತ್ತದ್ದಾಋ. ಅದರ ಒಂದು ಪರಿಣಾಮ ಇಂದು ಕಂಡುಬಂದಿದೆ. ಈಗಾಗಲೆ ಕೊರೊನಾ ಮಹಾಮಾರಿಯಿಂದ ನೊಂದಿರುವ ನಾಗರಿಕ ರು ವಾರಕ್ಕೆ ಎರಡು . ಮೂರು ದಿನಕ್ಕೊಮ್ಮೆ ಬಿಡುವ ಕುಡಿಯುವ ನೀರು ಕೂಡ ಮಲೀನದಿಂದ ಕೂಡಿರುವುದು ಈ ಭಾಗದ ಜನರಲ್ಲಿ ಭೀತಿಯುಂಟು ಮಾಡಿದೆ. ಮತ್ತೊಂದು ಮಹಾಮಾರಿ ಅಥವಾ ಸಾಂಕ್ರಾಮಿಕ ಹರಡಿರುವ ಎಲ್ಲ ಸಾಧ್ಯತೆಗಳು ಕಂಡುಬರುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
ಈ ಭಾಗದ ಜನರ ಸಮಸ್ಯೆ ಬಗೆಹರಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ತಮ್ಮ ವಿಶ್ವಾಸದ ಸಂಘದ ಪ್ರಧಾನ ಕಾರ್ಯದರ್ಶಿ, ಗೋಪಾಲ್ ತಿಮ್ಮಯ್ಯ. 
ಬಿಂದಿಗೆ ಫೋಟೋ ಇಲ್ಲ. ಬಕೆಟ್ ಗಳಲ್ಲಿ ಹಿಡಿದು ರಸ್ತಗೆ ಚೆಲ್ಲಲಾಗಿದೆ. ಕೊನೆಯಲ್ಲಿ ಬಾಟಲಲ್ಲಿ ಹಿಡಿದುಕೊಂಡು ಸ್ಥಳೀಯ ಜಲಮಂಡಳಿ ಅಧಿಕಾರಿಗಳಿಗೂ  ಕೊಟ್ಟಿರುತ್ತೇವೆ.

Post a Comment

Previous Post Next Post