ಶ್ರೀ ಕಾವೇರಿ ಮಾತೆಯ ದೇಗುಲದಲ್ಲಿ ಇಂದು ತುಲಾ ಸಂಕ್ರಮಣದ ಅಂಗವಾಗಿ ವಿಶೇಷ ಪೂಜೆ

ಕುಶಾಲನಗರ-: ಕೊಡಗು ಮೈಸೂರು ಗಡಿಭಾಗದ ಕಾವೇರಿ ನದಿ ತಟದಲ್ಲಿರುವ
ಸಲ್ಲಿಸಲಾಯಿತು. ಮೊದಲಿಗೆ ಶ್ರೀ ಕಾವೇರಿ ಮಾತೆಯ ವಿಗ್ರಹವನ್ನು ಪನ್ನೀರಿನಿಂದ ಶುದ್ಧೀಕರಿಸಿ ವಿವಿಧ ಬಗೆಯ ಪುಷ್ಪಮಾಲಿಕೆ ಗಳಿಂದ ಅಲಂಕರಿಸಿದೇವಿಗೆ ಮಹಾಮಂಗಳಾರತಿ ಮತ್ತು ಇಲ್ಲಿ ತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆಕಾವೇರಿ ತೀರ್ಥ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮವು ನಡೆಯಿತು. ಕರ್ನಾಟಕದ ಜೀವನದಿ ಕಾವೇರಿ ಮಾತೆಯು ತಲಕಾವೇರಿಯ ಕುಂಡಿಕೆಯಲ್ಲಿ ಉಗಮವಾಗಿ ತೀರ್ಥ ಸ್ವರೂಪಿಣಿಯಾಗಿ ಕೊಡಗು.ಮೈಸೂರು. ಮಂಡ್ಯ. ವಿವಿಧ ಜಿಲ್ಲೆಗಳಲ್ಲಿ ಹರಿದು ನಂತರ ತಮಿಳುನಾಡಿನ ಪೂಂಪುಹಾರ್ ನಲ್ಲಿ ಬಂಗಾಳಕೊಲ್ಲಿ ಸೇರುವುದು ಎಲ್ಲರಿಗೂ ತಿಳಿದಂತ ವಿಷಯವಾಗಿದೆ. ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಉದ್ಯಮಿ ಎಸ್ ಕೆ ಸತೀಶ್ ಮಾತನಾಡಿ. ಸುಮಾರು ಒಂಬತ್ತು ವರ್ಷಗಳಿಂದಲೂ ಭಾರವಿ ಕನ್ನಡ ಅಭಿಮಾನಿ ಸಂಘದ ಸಹೋದರರು ಪ್ರತಿ ತಿಂಗಳ ಹುಣ್ಣಿಮೆ ಪೂಜೆ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು. ಇಂದು ತುಲಾ ಸಂಕ್ರಮಣದ ಅಂಗವಾಗಿ ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರಿಂದಾಗಿ ನಾಡಿನಾದ್ಯಂತ ಸಕಾಲಕ್ಕೆ ಉತ್ತಮ ಮಳೆ ಬೆಳೆ ಆಗಿ ಜೀವನದಿ ಕಾವೇರಿಯ ಸರ್ವರನ್ನು ಕಾಪಾಡಲಿ ಎಂದು ಇದೇ ಸಂದರ್ಭ ತಿಳಿಸಿದರು. ನಂತರ ಮಾತನಾಡಿದ ಭಾರವಿ ಕನ್ನಡ ಅಭಿಮಾನಿ ಸಂಘದ ರವೀಂದ್ರ ಪ್ರಸಾದ್. ಸುಮಾರು 2 ವರ್ಷಗಳ ಹಿಂದೆ ಜೀವನದಿ ಕಾವೇರಿ ಪ್ರವಾಹ ದಿಂದ ಮೈದುಂಬಿ ಹರಿಯುತ್ತಿದ್ದದ್ದನ್ನು ನಾವು ಕಂಡಿದ್ದೇವೆ. ಆದರೆ ಈ ವರ್ಷ ಶಾಂತ ಸ್ವರೂಪಿಣಿ ಯಾಗಿರುವ ಕಾವೇರಿ ಮಾತೆಯು ಸಕಾಲದ ಮಳೆಯಿಂದಾಗಿ ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದ್ದುಯಾವುದೇ ಜೀವ ಹಾಗೂ ಪ್ರಾಣಹಾನಿಗೆ ಅವಕಾಶ ನೀಡಿಲ್ಲ. ತಾಯಿ ಕಾವೇರಿ ಮಾತೆಯು ಸರ್ವ ಜನಾಂಗದವರನ್ನುಕಾಪಾಡಿ ನಾಡಿನಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಲು ಕರುಣೆ ತೋರಬೇಕೆಂದು ಇದೇ ಸಂದರ್ಭ ತಿಳಿಸಿದರು. ಈ ಸಂದರ್ಭ ಎಸ್. ಎಲ್. ಎನ್. ಸಂಸ್ಥೆಯ ಮುಖ್ಯಸ್ಥ ಸಾತಪ್ಪನ್. ವಿಶ್ವನಾಥನ್. ಬಾರೋ ಬಿ ಕನ್ನಡ ಅಭಿಮಾನಿ ಸಂಘದ ಪ್ರಮುಖರಾದ ಬ ಬಿಂದ್ರ ಪ್ರಸಾದ್. ವಿಜಯೇಂದ್ರ ಪ್ರಸಾದ್. ಪ್ರಮುಖರಾದ ಚಂದ್ರು. ಸೋಮಶೇಖರ್. ಪುಟ್ಟರಾಜು. ರವಿ. ಕಾವಲುಪಡೆ ಕೃಷ್ಣ. ಸೇರಿದಂತೆ ಇನ್ನಿತರರು ಹಾಜರಿದ್ದರು.

Post a Comment

Previous Post Next Post