ಅಮೆರಿಕ ದೇಶದ ಜಾರ್ಜಿಯ ದಲ್ಲಿ ನವೆಂಬರ್ ೧ ನೇ ತಾರೀಖನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ ಘೋಷಣೆ

ಇಂದು ವಿಶ್ವ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಷಯ, ಅಮೇರಿಕಾ ದೇಶದಲ್ಲಿ ಮೊಟ್ಟ ಮೊದಲಬಾರಿಗೆ  ಕನ್ನಡ ಭಾಷೆಗೆ ರಾಜ್ಯ ಮಟ್ಟದಲ್ಲಿ ಸಂದ ಗೌರವ .
ಅಮೆರಿಕ ದೇಶದ ಜಾರ್ಜಿಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದಂತಹ ಶ್ರೀ ಬ್ರಿಯಾನ್ ಕೆಂಪ್, ನವೆಂಬರ್  ೧ ನೇ ತಾರೀಖನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವೆಂದು ಘೋಷಣೆ ಮಾಡಿದ್ದಾರೆ ಎಂದು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ನಮಗೆ ಅತ್ಯಂತ ಹರ್ಷವಾಗುತ್ತಿದೆ.

ಈ ಗೌರವವನ್ನು ದಯಪಾಲಿಸಿದ ಜಾರ್ಜಿಯಾದ ಮಾನ್ಯ ರಾಜಪಾಲರಿಗೂ ಹಾಗು ಈ ನಿಟ್ಟಿನಲ್ಲಿ ಶ್ರಮಿಸಿದ ನೃಪತುಂಗ ಕನ್ನಡ ಕೂಟದ ಪದಾಧಿಕಾರಿಗಳಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಜೈ ಕರ್ನಾಟಕ.

Post a Comment

Previous Post Next Post