ಸಮಗ್ರ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧ :ಸಿಂದಗಿಯಲ್ಲಿ ೭ ಸಾವಿರ ಮನೆ ಕಟ್ಟಿಯೇ ಕಟ್ಟುತ್ತೇವೆ- ಬೊಮ್ಮಾಯಿ

[24/10 10:28 ಅಪರಾಹ್ನ] Pannagaraja Kulakarni: ಸಿಂಧಗಿ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧ :
 ಬೊಮ್ಮಾಯಿ


ಸಿಂದಗಿಯಲ್ಲಿ ೭ ಸಾವಿರ ಮನೆ ಕಟ್ಟಿಯೇ ಕಟ್ಟುತ್ತೇವೆ- ಬೊಮ್ಮಾಯಿ

ಸಿಂದಗಿ: (ಬ್ಯಾಕೋಡು: )
ಸಿಂಧಗಿಯ ಸಮಗ್ರ ಅಭಿವೃದ್ದಿಗೆ ಬಿಜೆಪಿ ಕಂಕಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಂಧಗಿಯ ರೈತರ ಹೋಲಗಳಿಗೆ ನೀರು ಹರಿಸುವುದು, ಇಲ್ಲಿನ ಯುವಕರಿಗೆ ಉದ್ಯೋಗ ನೀಡುವುದಕ್ಕೆ ನಾವು ಹೆಚ್ಚು ಒತ್ತು ನೀಡುತ್ತೇವೆ ಎಂದು  ಬ್ಯಾಕೋಡು ಗ್ರಾಮದ ಚುನಾವಣಾ ಪ್ರಚಾರದಲ್ಲಿ ಅವರು ಹೇಳಿದರು. 

ಭಾರತೀಯ ಜನತಾ ಪಕ್ಷದ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರಲ್ಲೂ ರೈತರ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದೆ. ದೇಶದಲ್ಲಿ ಮೊದಲ ಬಾರಿಗೆ 20 ಲಕ್ಷ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ರೂಪಿಸಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇನ್ನುಮುಂದೆ ಪಡಿತರ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕೆತೆ ಇಲ್ಲ. ಮುಂದಿನ ವರ್ಷ ಜನೇವರಿ ೨೬ ರಿಂದ ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆ ಆಗಲಿದೆ. ಬಡವರ, ದೀನದಲಿತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವಂತೆ ಬಿಜೆಪಿ ಸರ್ಕಾರ ಸಿಂಧಗಿಯ ಅಭಿವೃದ್ಧಿಯ ಮಾಡಲಿದೆ ಎಂದು ಅವರು ನುಡಿದರು.

ಸಚಿವರಾದ ಗೋವಿಂದ ಕಾರಜೋಳ ಬೈರತಿ ಬಸವರಾಜ್ ಸಿಸಿ ಪಾಟೀಲ್ ಮುಂತಾದವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.
[24/10 10:28 ಅಪರಾಹ್ನ] Pannagaraja Kulakarni: ಕಾಂಗ್ರೆಸ್ ನವರು ಭಯಭೀತರಾಗಿ ಹತಾಶರಾಗಿದ್ದಾರೆ

ಸಿಎಂ ಬಸವರಾಜ ಬೊಮ್ಮಾಯಿ ಆರೋಪ


ಕನ್ನೋಳಿ: ಸಿಂದಗಿ: ಕಾಂಗ್ರೆಸ್ ಪಕ್ಷದ ನಾಯಕರಿಗೆ ಪ್ರಾಚರಕ್ಕೆ ವಿಷಯಗಳೇ ಸಿಗುತ್ತಿಲ್ಲ.
ಸೋತಮೇಲೆ ನೀಡುವಂತಹ ಹೇಳಿಕೆಗಳನ್ನು ಚುನಾವಣಾ ಆರಂಭದಲ್ಲೇ ನೀಡುತ್ತಿದೆ.‌ ಕಾಂಗ್ರೆಸ್ ಸಂಪೂರ್ಣವಾಗಿ ಹತಾಶವಾಗಿ ಇಂಥ ಹೇಳಿಕೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಹೇಳಿದರು. 

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಗೆ ಅದ್ಭುತವಾದ ಬೆಂಬಲವನ್ನು ನೋಡಿ ಕಾಂಗ್ರೆಸ್ ಪಕ್ಷ ಭಯ ಗೊಂಡಿದೆ. 
ಸೋಲಿನ ಅನುಭವ ಆರಂಭದಲ್ಲಿ ಆಗಿರುವುದರಿಂದ ಚುನಾವಣಾ ನಂತರದ ಹೇಳಿಕೆಗಳನ್ನು ಈಗಲೇ ಆ ಪಕ್ಷದ ನಾಯಕರು ನೀಡುತ್ತಿದ್ದಾರೆ ಎಂದರು.

ಅವರು ಸಿಂದಗಿ  ವಿಧಾನಸಭೆ ಕ್ಷೇತ್ರದ ಕನ್ನೊಳಿ ಗ್ರಾಮದ ಪ್ರಚಾರದ ಸಂದರ್ಭದಲ್ಲಿ ಹೇಳಿದರು.

ಬಿಜೆಪಿ ಗೋಣಿ ಚೀಲದಲ್ಲಿ ದುಡ್ಡು ತಂದು ಹಂಚುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ.
ದುಡ್ಡು ಹಂಚುವ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದವರೆ ಆರಂಭ ಮಾಡಿದ್ದು. 
ಹಿಂದಿನ ಐದು ವರ್ಷ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡು ಅದರಿಂದ ಬಂದ ಹಣವನ್ನು ಚುನಾವಣೆಯಲ್ಲಿ ಹಂಚುವಂತಹ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ ಎಂದು ಅವರು ಆರೋಪಿಸಿದರು. 

ಡಿಕೆ ಶಿವಕುಮಾರ್ ಬಗ್ಗೆ ನನಗೆ ಕನಿಕರವಿದೆ.
ಈ ಹಿಂದೆ ನಡೆದಂತಹ ಮೂರು ಉಪಚುನಾವಣೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಗೋಣಿಚೀಲದಲ್ಲಿ ಹಣ ಹಂಚುವ ಮೂಲಕ ಚುನಾವಣೆ ನಡೆಸಿದ ಅನುಭವವನ್ನು ಸಿಂದಗಿ ಉಪಚುನಾವಣೆ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಸಿಂಧಗಿಯಲ್ಲಿ ಅಭಿವೃದ್ಧಿಯ ಗಾಳಿ ಬೀಸುತ್ತಿದೆ. 
ಜನಸಾಮಾನ್ಯರು ಮಾತಿಗೆ ಮರುಳಾಗುವ ಕಾಲ ಹೋಯಿತು. ಇನ್ನೇನಿದ್ದರು ಮಾತಿಗಿಂತ ಕೃತಿ ಮುಖ್ಯ ಎನ್ನುವುದು ಎಲ್ಲ ಮದಾರರಿಗೆ ತಿಳಿಸಿದೆ. 
ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಮತವಾಗಿ ಪರಿವರ್ತನೆ ಆಗಲಿವೆ‌ ಎಂದು‌ ಅವರು ತಿಳಿಸಿದರು. 
ಸಚಿವರಾದ ಗೋವಿಂದ ಕಾರಜೋಳ,  ಬೈರತಿ ಬಸವರಾಜ, ಸಿಸಿ ಪಾಟೀಲ್ , ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಇತರರುಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಚಾರದಲ್ಲಿ ಸಾಥ್ ನೀಡಿದರು.‌

Post a Comment

Previous Post Next Post