ಸರ್ಕಾರಿ ಸ್ವಾಮ್ಯ ದಲ್ಲಿ ಮೈಸುಗರ್ ಉಳಿಸಿಕೊಳ್ಳುವ ಕುರಿತು ಸರ್ವಪಕ್ಷಗಳ ಸಭೆ ತೀರ್ಮಾನ

ಮಂಡ್ಯ:- ಸರ್ಕಾರಿ ಸ್ವಾಮ್ಯ ದಲ್ಲಿ ಮೈಸುಗರ್ ಉಳಿಸಿಕೊಳ್ಳುವ ಕುರಿತು ಸರ್ವಪಕ್ಷಗಳ ಸಭೆ ತೀರ್ಮಾನ ಕೈಗೊಂಡಿರುವುದು ಸಂತೋಷದ ವಿಚಾರವಾಗಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅಂತೂ ಬಹುದಿನಗಳ ಬಳಿಕ ಜಿಲ್ಲೆಯ ರೈತರ ಸಮಸ್ಯೆಗೆ ಈ ಸರ್ಕಾರ ಮತ್ತು ನೂತನ ಮುಖ್ಯಮಂತ್ರಿಗಳು ಸ್ಪಂದಿಸಿರುವುದು ವೈಯಕ್ತಿಕವಾಗಿ ನನಗೆ ಖುಷಿಯಾಯಿತು ಎಂದಿರುವ ಅವರು ಕಳೆದ ಹಲವು ದಿನಗಳಿಂದ ಪ್ರಗತಿಪರ ವೇದಿಕೆ ಗಳು, ರೈತ ಸಂಘಟನೆ ಗಳು, ಕಾಂಗ್ರೆಸ್ ಪಕ್ಷ ವು ಸೇರಿದಂತೆ, ಮಂಡ್ಯನಗರ ದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ನಡೆಸು ತಿದ್ದ ಮೈಶುಗರ್ ಉಳಿಸಿ ಅಭಿಯಾನ ದ ಹೋರಾಟ ದ ಸ್ಥಳ ಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಹೋರಾಟ ದಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷ ಎಂದಿಗೂ ರೈತಪರ ಮತ್ತು ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿMYSUGAR ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು ಹಾಗೂ ಶಾಸನ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿರುವುದರ ಫಲವಾಗಿ ಎಚ್ಚೆತ್ತು ಸರ್ಕಾರವು ಒಳ್ಳೆಯ ತೀರ್ಮಾನಕ್ಕೆ ಬಂದಿದೆ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು, ಹೋರಾಟ ಗಳನ್ನು ಗಮನಿಸಿದ ರಾಜ್ಯ ಸರ್ಕಾರ ಇಂದು ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆ ಯ ಸರ್ವನಾಯಕರು ಸ್ವಾಮ್ಯದಲ್ಲಿ ಯೆ ಉಳಿಸಿಕೊಳ್ಳುವ ಅಧಿಕೃತ ಒಪ್ಪಿಗೆಯನ್ನು ಸರ್ಕಾರದ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಬಸವರಾಜಬೊಮ್ಮಾಯಿ ಅವರು ಇಂದು ಭರವಸೆ ನೀಡಿ ನುರಿತ ತಜ್ಞ ರನ್ನು ನೇಮಿಸುವುದಾಗಿ ಬೆಂಗಳೂರಿನಸರ್ವ ಪಕ್ಷದ ಸಭೆಯಲ್ಲಿ ತಿಳಿಸಿರುವುದು ಸಂತೋಷದ ವಿಚಾರ ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮತ್ತು ವೈಯಕ್ತಿಕವಾಗಿ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು ಸಲ್ಲಿಸಿದ್ದಾರೆ.

Post a Comment

Previous Post Next Post