: ಕರ್ಮ ಸಿದ್ದಾಂತ:-

 : ಕರ್ಮ ಸಿದ್ದಾಂತ:-     


ಕಣ್ಣುಗಳು ಮರದ ಮೇಲಿನ ಮಾವಿನ ಹಣ್ಣನ್ನು ನೋಡಿದವು.... ತಿನ್ನುವ ಇಚ್ಛೆ ಜಾಗ್ರತವಾಯಿತು....ಕಣ್ಣುಗಳೋ ಹಣ್ಣನ್ನು ಕೀಳಲಾರವು....ಅದಕ್ಕೆ ಅಂತಲೇ ಕಾಲುಗಳು ಓಡಿದವು ಮರದ ಕಡೆಗೆ ಹಣ್ಣನ್ನು ಕೀಳಲು....ಮರದ ಹತ್ತಿರ ಹೋದರೂ ಕಾಲುಗಳು  ಕೀಳಲಾರದಾದವು ಹಣ್ಣನ್ನು.......ಆಗ ಕೈ ಮುಂದಾಗಿ ಮೇಲಕ್ಕೆ ಹೋದವು ಹಣ್ಣನ್ನು ಕೀಳಲು....ಕೈಯಿಂದ ಕೀಳಲಾಯಿತು ಹಣ್ಣನ್ನು.... ಆದರೆ.....ಕೈ,ಕಾಲು ಮತ್ತು ಕಣ್ಣುಗಳು ಹಣ್ಣನ್ನು ತಿನ್ನಲಾಗಲಾರದಾದವು....ಆಗ ಹಣ್ಣನ್ನು ತಿನ್ನಲಾಯಿತು ಬಾಯಿಯಿಂದ....ಅದು ಬಾಯಿಯಲ್ಲೂ ಉಳಿಯದೆ ಹೋಯಿತು ಹೊಟ್ಟೆಯಲ್ಲಿ......ಈಗ ತೋಟದ ಮಾಲಿ ಇದನ್ನು ನೋಡಿ, ಬಡಿಗೆಯಿಂದ ಬಡಿದ ಬೆನ್ನಿಗೆ....ಬೆನ್ನು ಹೇಳಿತು..ನನ್ನನ್ನೇಕೆ ಬಡಿಯುತ್ತೀರಿ ?...    ನಾನೆಲ್ಲಿ ಹಣ್ಣನ್ನು ತಿಂದೆ ?....ಬಡಿಗೆಯಿಂದ ಹೊಡೆತ ಬಿದ್ದದ್ದು ಬೆನ್ನಿಗೆ ಆದರೆ ನೀರು ಬಂದವು ಕಣ್ಣುಗಳಲ್ಲಿ...ಏಕೆಂದರೆ ಮೊದಲನೇ ತಪ್ಪು ಕಣ್ಣುಗಳದ್ದು...ಕಣ್ಣುಗಳೇ ಮೊದಲು ನೋಡಿದ್ದವು  ಮಾವಿನ ಹಣ್ಣನ್ನು ...!!!!!                                         ‌                                   

ಇದೇ ಕರ್ಮ ಸಿದ್ಧಾಂತ....       


ಕರ್ಮವು ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲಾ, ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ ಕರ್ಮ.

Post a Comment

Previous Post Next Post