ಕೋಲಿ ಸಮುದಾಯದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳು

[24/10 10:27 ಅಪರಾಹ್ನ] Pannagaraja Kulakarni: ಸಿಂಧಗಿಯಲ್ಲಿ ಇಂದು ಅಯೋಜಿಸಿದ್ದ ಕೋಲಿ ಸಮುದಾಯದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ, ಮಾತನಾಡಿದರು.

ತಳವಾರ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಇಂದು ಕರೆಯಲಾಗಿದೆ. ಹಿಂದುಳಿದ ವರ್ಗಗಳು ಸ್ವಾಭಿಮಾನಿಗಳಾಗಲೇ ಬೇಕು. ಶತಮಾನದ ಕಾಲ ನಮ್ಮನ್ನು ಗುಲಾಮರಂತೆ ದುಡಿಸಲಾಗಿದೆ. ಮನುವಾದಿಗಳು ಚತುರ್ವರ್ಣ ವ್ಯವಸ್ಥೆಯನ್ನು ಜಾರಿಗೆ ತಂದು, ಕೆಳ ವರ್ಗದ ಜನರ ಮೇಲೆ ನಿರಂತರ ಶೋಷಣೆ ನಡೆಸಿದರು. ತಳ ಸಮುದಾಯದ ಜನರನ್ನು ಅಕ್ಷರ ಸಂಸ್ಕೃತಿಯಿಂದ ದೂರವಿಡಲಾಯಿತು. ಇದರಿಂದ ಮೇಲ್ವರ್ಗದ ಜನರಿಗೆ ಸಂಪತ್ತನ್ನು ಅನುಭವಿಸಲು ಅವಕಾಶ ಸಿಕ್ಕಿತ್ತು, ಕೆಳವರ್ಗಗಳು ಕೇವಲ ಉತ್ಪಾದನೆಗೆ ಮೀಸಲಾಗಿ ಬಿಟ್ಟವು. ಅಧಿಕಾರ, ಶಿಕ್ಷಣ, ಸಂಪತ್ತಿನ ಹಂಚಿಕೆಯಿಂದ ವಂಚಿತರಾದ ಕಾರಣ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಯಿತು. 

ಒಂದು ವೇಳೆ ನೂರಾರು ವರ್ಷಗಳ ಹಿಂದೆಯೇ ಎಲ್ಲರಿಗೂ ಶಿಕ್ಷಣದ ಅವಕಾಶ ದೊರೆತಿದ್ದರೆ ಈ ಅಸಮಾನತೆ ಖಂಡಿತವಾಗಿ ವಿನಾಶವಾಗಿರುತ್ತಿತ್ತು. ಇದೇ ಕಾರಣಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅವರು ವರ್ಗ ವ್ಯವಸ್ಥೆ ಹೋಗಿ, ಸಮಾನತೆ ತರಬೇಕು ಎಂದು ಹೋರಾಟ ಮಾಡಿದರು. ಅಂಬಿಗರ ಚೌಡಯ್ಯ ಅವರು ಬಸವಣ್ಣನ ಸಮಕಾಲೀನವರು. ವಚನಗಳ ಮೂಲಕ ಸಮಾನತೆ ಸಾರಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು ಅಧ್ಯಕ್ಷರಾಗಿದ್ದರು, ಅಲ್ಲಿ ಅಸ್ಪೃಶ್ಯತೆ, ಅಸಮಾನತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಅಲ್ಲಿ ಎಲ್ಲರಿಗೂ ಸಮಾನವಾಗಿ ಕೂರುವ ವ್ಯವಸ್ಥೆಯನ್ನು ಮಾಡುವ ಮೂಲಕ ಸಮಾನತೆಗೆ ನಾಂದಿ ಹಾಡಿದರು. ಇದೇ ಕಾರಣಕ್ಕೆ ಇಂದಿಗೂ ನಾವು ಶರಣರನ್ನು ನೆನೆಯುತ್ತೇವೆ. 

1997 ರಲ್ಲಿ ನಾರಾಯಣ್ ರಾವ್ ಸೇರಿದಂತೆ ಬೀದರ್ ನ ಮುಖಂಡರು ಬಂದು ನಮ್ಮನ್ನು ಕೋಲಿ, ತಳವಾರ, ಅಂಬಿಗರ ಸಮಾಜವನ್ನು ಎಸ್.ಟಿ ಗೆ ಸೇರಿಸಬೇಕು ಎಂದು ನನಗೆ ಮನವಿ ಮಾಡಿದ್ರು, ಆಗ ನಾನು ಉಪಮುಖ್ಯಮಂತ್ರಿಯಾಗಿದ್ದೆ. ಅವರ ಬೇಡಿಕೆಯನ್ನು ಸಚಿವ ಸಂಪುಟದ ಸಭೆಯ ಮುಂದಿಟ್ಟು ಒಪ್ಪಿಗೆ ಪಡೆದು, ಪರಿಶಿಷ್ಟ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿಸಿದೆ. 

ಮತ್ತೆ ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರ ನಮ್ಮ ಶಿಫಾರಸನ್ನು ವಾಪಾಸು ಕಳಿಸಿ, ಸ್ಪಷ್ಟನೆ ನೀಡುವಂತೆ ಕೇಳಿತ್ತು. ಆಗ ನಾನು ಅಗತ್ಯ ಮಾಹಿತಿ ಎಲ್ಲವನ್ನೂ ನೀಡಿ, ಮತ್ತೆ ಶಿಫಾರಸು ಮಾಡಿದೆ. ತಳವಾರ, ಪರಿವಾರ ಕೂಡ ಎಸ್.ಟಿ ಗೆ ಸೇರಿಸಬೇಕು ಎಂದು ಕುಲಶಾಸ್ತ್ರ ಅಧ್ಯಯನ ಮಾಡಿಸಿ, ಅರ್ಹತೆಯ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರದವರು ಪರಿವಾರ ಮತ್ತು ತಳವಾರ ಸಮಾಜವನ್ನು ಎಸ್.ಟಿ ಗೆ ಸೇರಿಸಿ ಅಧಿಸೂಚನೆ ಹೊರಡಿಸಿದರು, ಕಬ್ಬಲಿಗರು, ಕೋಲಿ, ಅಂಬಿಗರನ್ನು ಸೇರಿಸದೆ ಹಾಗೆ ಬಿಟ್ಟಿದ್ದಾರೆ. 

ಚಿಂಚನಸೂರು ಅವರನ್ನು ಎರಡು ಬಾರಿ ಮಂತ್ರಿ ಮಾಡಿದ್ದು, ಮಧ್ವರಾಜ್ ಮತ್ತು ಪ್ರಮೋದ್ ಮಧ್ವರಾಜ್ ಅವರನ್ನು ಮಂತ್ರಿ ಮಾಡಿದ್ದು, ಚೌದರಿ ಅವರನ್ನು ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇವೇಂದ್ರಪ್ಪ ಗಾಳಪ್ಪ ಅವರು ದೇವರಾಜ ಅರಸು ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಕೋಲಿ ಸಮಾಜದ ನಾಯಕರಿಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ, ಬಿಜೆಪಿಯಲ್ಲಿ ಯಾರಾದರೂ ಒಬ್ಬ ಶಾಸಕ, ಸಂಸದ, ಮಂತ್ರಿ ಇದ್ದಾರ? ಈ ಕಾರಣಕ್ಕಾಗಿ ಕೋಲಿ ಸಮಾಜದ ಜನ ಕನಸಿನಲ್ಲೂ ಬಿಜೆಪಿಯನ್ನು ನೆನಪು ಮಾಡಿಕೊಳ್ಳಬಾರದು. 

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಏಳು ವರ್ಷಗಳಾಯ್ತು. ಕೋಲಿ ಸಮಾಜದವನ್ನು ಎಸ್.ಟಿ ಸೇರಿಸಲು ಇನ್ನೂ ಆಗಿಲ್ಲ ಅಂದರೆ ಇನ್ನೆಷ್ಟು ವರ್ಷ ಬೇಕು? ಅಧಿವೇಶನದಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸುವಂತೆ ಶ್ರೀರಾಮುಲು ಅವರನ್ನು ಒತ್ತಾಯ ಮಾಡುತ್ತೇನೆ, ಒಂದು ವೇಳೆ ಬಿಜೆಪಿಯವರು ಮಾಡಿಲ್ಲ ಎಂದರೆ 2023 ರಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಆಗ ಒಂದು ತಿಂಗಳೊಳಗೆ ಆದೇಶ ಹೊರಡಿಸುತ್ತೇವೆ. ಕೋಲಿ ಸಮಾಜ ಎಸ್.ಟಿ ಗೆ ಸೇರಬೇಕು ಎಂದು ಹೋರಾಟ ಮಾಡುವವರಲ್ಲಿ ನಾನು ಮೊದಲಿಗ. ನಿಮ್ಮೊಂದಿಗೆ ನಾನು ಸದಾ ಇದ್ದೇನೆ. 

ಉಪಚುನಾವಣೆಯಲ್ಲಿ ಯಾರು ಕೋಲಿ ಸಮಾಜದ ಹಿತ ಕಾಪಾಡುತ್ತಾರೆ, ಯಾರು ಸಮಾಜದ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಾರೆ ಅಂಥವರಿಗೆ ಮತ ನೀಡಬೇಕು. ಸುಣಗಾರ್ ಅವರಿಗೆ ಪಕ್ಷದ ಟಿಕೆಟ್ ನೀಡದಿದ್ದರೂ ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನ ಮತ್ತು ಗೌರವ ಸಿಗುವಂತೆ ಮಾಡುತ್ತೇವೆ ಎಂಬ ವಾಗ್ದಾನ ನೀಡಿದ್ದೇವೆ, ಅದಕ್ಕೆ ನಮ್ಮ ಪಕ್ಷ ಬದ್ಧವಾಗಿರುತ್ತದೆ. ನೀವು ನೀಡುವ ಪ್ರತಿ ಮತ ಸುಣಗಾರ್ ಅವರಿಗೆ, ನನಗೆ ನೀಡಿದಂತೆ ಎಂದು ಭಾವಿಸಿ, ಅಶೋಕ್ ಮನಗೂಳಿ ಅವರನ್ನು ಗೆಲ್ಲಿಸಿಕೊಡಬೇಕು.
[24/10 10:27 ಅಪರಾಹ್ನ] Pannagaraja Kulakarni: ಸಿಂಧಗಿಯಲ್ಲಿ ಇಂದು ಅಯೋಜಿಸಿದ್ದ ಕೋಲಿ ಸಮುದಾಯದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಧ್ರುವ ನಾರಾಯಣ, ಮಾಜಿ ಸಚಿವ ಎಂ.ಬಿ. ಪಾಟೀಲ್, ಸಮಾಜದ ಮುಖಂಡರಾದ ಸುಣಗಾರ್ ಪಾಲ್ಗೊಂಡಿದ್ದರು.
[24/10 10:28 ಅಪರಾಹ್ನ] Pannagaraja Kulakarni: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಕನ್ನೊಳ್ಳಿ ಗ್ರಾಮದಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಬಿಜೆಪಿ ಮುಖಂಡರ ಜತೆ ಮುಖ್ಯಮಂತ್ರಿಗಳು ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಅಭಿವೃದ್ಧಿಗೆ ಮತ ನೀಡಿ ಎಂದು ಕೋರಿದರು.
[24/10 10:28 ಅಪರಾಹ್ನ] Pannagaraja Kulakarni: ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಿಂದಗಿ: ಕೋಕಟನೂರು:


ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

         ಅವರು ಭಾನುವಾರ ಸಿಂದಗಿ ಮತಕ್ಷೇತ್ರದ ಕೊಕಟನೂರು ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಉಣ್ಣೆ ಕಂಬಳಿಯನ್ನು ಯಾರು ಬೇಕಾದರೂ ಹಾಕಿಕೊಂಡರೆ ಯೋಗ್ಯತೆ ಬರುವುದಿಲ್ಲ. ಹಾಲುಮತದ ಸಮಾಜಕ್ಕೆ ಸರಿಯಾದ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಪ್ರಾಪ್ತವಾಗುತ್ತದೆ. ದಾಸಶ್ರೇಷ್ಠರಾದ ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಅವರ ಕರ್ಮಭೂಮಿ ಕಾಗಿನೆಲೆಯನ್ನು ಬಿ.ಜೆ.ಪಿ.ಅಧಿಕಾರದ  ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.

 *ಉ ಕ ಅಭಿವೃದ್ಧಿಗೆ ಸರಕಾರ ಬದ್ಧ*  ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಈ ಭಾಗದಲ್ಲಿ ನೀರಾವರಿ, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ವಸತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರವು ಈ ವರ್ಷ ಹೆಚ್ಚುವರಿಯಾಗಿ 5ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದ್ದು, ಸಿಂದಗಿ ಕ್ಷೇತ್ರಕ್ಕೆ 5ಸಾವಿರ ಮನೆ ನೀಡಲಾಗುತ್ತದೆ. ಅಮೃತ  ಯೋಜನೆಯಡಿಯಲ್ಲಿ 2 ಸಾವಿರ ಮನೆ ನಿರ್ಮಿಸಲಾಗುವುದು ಲಾಗುವುದು. ಹೀಗೆ ಒಟ್ಟು 1ವರ್ಷದಲ್ಲಿ ಸಿಂದಗಿ ಕ್ಷೇತ್ರದಲ್ಲಿ  7ಸಾವಿರ ಮನೆ  ನಿರ್ಮಿಣ ಮಾಡಲಾಗುವುದು ಎಂದರು.

 ಚಿಮ್ಮಲಗಿ ಏತ ನೀರಾವರಿ ಅಡಿ ಬರುವ ಕೋರವಾರ್ ಉಪಕಾಲುವೆ ಟೆಂಡರ್ ಈಗಾಗಲೇ ಪೂರ್ಣಗೊಂಡಿದೆ.  ಇದರಿಂದ ಎಂಬತ್ತು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿ ಸಲಾಗುತ್ತದೆ. ಇಂಡಿ ಮತ್ತು ಗುತ್ತಿ ಬಸವಣ್ಣ ಯೋಜನೆಗಳ ಪುನಃಶ್ಚೇತನ ಮಾಡಲಾಗುತ್ತಿದೆ ಎಂದು ಕೇಳಿದರು.
 *ಎಲ್ಲಿದೆ ಸಾಮಾಜಿಕ ನ್ಯಾಯ* ಸಾಮಾಜಿಕ ನ್ಯಾಯದ ಹರಿಕಾರರಾದ ಕಾಂಗ್ರೆಸ್ ಪಕ್ಷ ಯಾರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಸಂವಿಧಾನ ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಗೆ ದೇಶ ಸದಾ ಋಣಿಯಾಗಿರಬೇಕು. ಆದರೆ ಅವರ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಚುನಾವಣೆಯಲ್ಲಿ ಸೋಲಿಸಲಾಯಿತು. 
ಹಾಲುಮತ ಸಮಾಜ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಸಣ್ಣ ಸಣ್ಣ ಕಸುಬುಗಳನ್ನು ಮಾಡುವವರು ಸಹ ಅದೇ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಚುನಾವಣೆಗೆ ಬಳಸಿಕೊಂಡರು ಅವರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದ ಅವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮಕ್ಕಳು ಮುಂದಕ್ಕೆ ಬಂದು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಯಿಂದ ಮಾತ್ರ ಸಾಧ್ಯ. ಕಾರಣ ಮತದಾರರು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಗೋವಿಂದ್ ಕಾರಜೋಳ,  ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.
[24/10 10:28 ಅಪರಾಹ್ನ] Pannagaraja Kulakarni: ಸಿಂದಗಿ ವಿಧಾನಸಭಾ ಕ್ಷೇತ್ರದ ಕೊಕಟನೂರ ಗ್ರಾಮದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು. ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ ,  ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post