ಸರ್ಕಾರ ಎತ್ತ, CM ಅತ್ತ, ವೈದ್ಯ ಮಂತ್ರಿಗಳು, ವೈದ್ಯರು ಎತ್ತಲೋ... ಮಾಯವಾದರು... ವಾರಿಯರ್ಸ್ ನ್ನು ಬೀದಿಗೆ ಬಿಟ್ಟರು

*ಕೊರೊನಾ ವಾರಿಯರ್ಸ್‌ ಗಳನ್ನು ನಿರ್ಲಕ್ಷ್ಯಿಸಿದ ಆರೋಗ್ಯ ಇಲಾಖೆ*

ದೇವನಹಳ್ಳಿಅ26,
 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೊವಿಡ್೧೯ ವಿರುದ್ಧ ಹೋರಾಡಲು, ಅನೇಕ ರೀತಿಯ ಕಾರ್ಯಕ್ರಮ ರೂಪಿಸಿದ ಕೇಂದ್ರ ಸರ್ಕಾರ, ಅನೇಕ ಕೊರೊನಾ ವಾರಿಯರ್ಸ್‌ ಗಳ ಪರಿಶ್ರಮದಿಂದ  ಇಂದು ಕೊರೊನಾ ಹತೋಟಿಗೆ ಬಂದು ನಿಂತಿದೆ, ಕೇಂದ್ರ ಸರ್ಕಾರ ನೂರು ಕೋಟಿ ಡೋಜ್ ಲಸಿಕೆ ಹಾಕಿಸಿದ್ದಾರೆ,ಇವಕ್ಕೆಲ್ಲ ಆಶಾಕಾರ್ಯಕರ್ತೆ,ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಕಾರ್ಯ ಕರ್ತೆ, ಸ್ವಯಂಸೇವಕರು,ಸಂಘಸಂಸ್ಥೆಗಳು ಪಾತ್ರ ಅಪಾರವಾದದ್ದು,  
ಕೊರೊನಾ ಸೋಂಕು ನಿರ್ಮೂಲನೆ ಮಾಡುವ ಉದ್ದೇಶದಿಂದ, ಮನೆಮನೆಗೆ ಸರ್ವೆಮಾಡಿ ಲಸಿಕೆ ,ಮೊದಲ ಮತ್ತು ಎರಡನೇ ಡೋಜ್ ಹಾಕಿಸಿಕೊಳ್ಳದವರ ಪತ್ತೆಹಚ್ಚಲು, ಹಾಕಿಸಿಕೊಳ್ಳಲು ನಿರಾಕರಿಸಿದವರ ಮನವೊಲಿಸಲು  ಅನೇಕ ಪ್ರಯತ್ನ ನಡೆಯುತ್ತಿದೆ, ಅವರ ಸರ್ವೆ ಗಾಗಿ ಆಶಾ ಕಾರ್ಯ ಕರ್ತೆ,ಆರೋಗ್ಯ ಕಾರ್ಯಕರ್ತೆಯರನ್ನು,ಬಳಸಿಕೊಂಡು ಸರ್ವೆ ಮಾಡುತ್ತಿದ್ದಾರೆ, ಆದರೆ ಅವರನ್ನು ಸರಿಯಾಗಿ  ನಡೆಸಿಕೊಳ್ಳುತ್ತಿಲ್ಲ, ಅವರಿಗೆ ಮಾಸ್ಕ್  ನೀಡುತ್ತಿಲ್ಲ ಸಮಯಕ್ಕೆ ಸರಿಯಾಗಿ ತಿಂಡಿ ಊಟ ನೀಡುತ್ತಿಲ್ಲ,ಎಂಬ ಆರೋಪ ಹೆಚ್ಚಾಗಿ ಕಂಡುಬರುತ್ತದೆ,
ಅದೇರೀತಿ ದೇವನಹಳ್ಳಿ ತಾಲೂಕು ಕಿನ ಆಶಾ ಕಾರ್ಯಕರ್ತೆ ಯರಿಗೂ ಇದೆ ಅನುಭವ,
ದೇವನಹಳ್ಳಿ ಪಟ್ಟಣದಲ್ಲಿ ಲಸಿಕೆಯ ಸರ್ವೆ ಕಾರ್ಯ ನಡೆಯುತ್ತದೆ,
ಗ್ರಾಮೀಣ ಭಾಗದ ಆಶಾಕಾರ್ಯಕರ್ತೆಯರನ್ನು 
ಸರ್ವೆ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ,
ಅವರಿಗೆ ಸರಿಯಾಗಿ ತಿಂಡಿ ನೀಡುತ್ತಿಲ್ಲ, ಊಟದ ವ್ಯವಸ್ಥೆ ಮಾಡಿಲ್ಲ, ಮಧ್ಯಾಹ್ನ ಕಾರ್ಯಕರ್ತಯರಿಗೆ  ಕಾಟಚಾರಕ್ಕೆ, ಊಟದ ಪೊಟ್ಟಣ ನೀಡಿ ಪುಟ್ ಪಾತ್ ಗಳಲ್ಲಿ ಊಟ ಮಾಡುವಂತೆ ಮಾಡಿದ್ದಾರೆ,ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾದವರೆ ಎಲ್ಲೆಂದರಲ್ಲಿ ಊಟ ಮಾಡಿದರೆ ಹೇಗೆ, ಅರೋಗ್ಯ ಅರಿವು ಮೂಡುಸುವ ಇವರಿಗೆ ಆರೋಗ್ಯ ಅರಿವು ಮೂಡಿಸುವವರು ಯಾರು?
ಕೊರೊನಾ ವಾರಿಯರ್ಸ್‌ ಗಳಿಗೆ ಅತಿಹೆಚ್ಚಿನ ಗೌರವ ನೀಡುತ್ತಿದ್ದಾರೆ,ದೇವನಹಳ್ಳಿ ಆರೋಗ್ಯ ಇಲಾಖೆಯ ಇವರನ್ನು ನಡೆಸಿಕೊಳ್ಳುವ ರೀತಿ ಖಂಡನೀಯ, ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಖಂಡಿಸಿದೆ,
ಇದಕ್ಕೆಲ್ಲ ಕಾರಣ ತಾಲೂಕು ಆರೋಗ್ಯ ಅಧಿಕಾರಿ, ಅವರ ವಿರುದ್ದಕ್ರಮಕೈಗೊಳ್ಳಬೇಕು ಮಹೇಂದ್ರಕುಮಾರ್ ಒತ್ತಾಯಿಸಿದರು.

Post a Comment

Previous Post Next Post