|ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| day#8 part#1 |ವೆಂಕಟೇಶನೆ ನಮೊ ವೆಂಕಟೇಶನೆ ನಮೊ| |ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ|| ✍ಸ್ವಾಮಿ ಪುಷ್ಕರಣಿ ಯ ಹುಟ್ಟು.

 |ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| 

day#8 part#1




|ವೆಂಕಟೇಶನೆ ನಮೊ ವೆಂಕಟೇಶನೆ ನಮೊ|

|ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||

 ✍ಸ್ವಾಮಿ ಪುಷ್ಕರಣಿ ಯ ಹುಟ್ಟು.


ಹಿಂದೆ ಶ್ರೀಸರಸ್ವತಿ ದೇವಿಯರು ತಾವು ಗಂಗಾದಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ಳಾಗಬೇಕೆಂದು ಬ್ರಹ್ಮಾವರ್ತದಲ್ಲಿ ತಪಸ್ಸು ಆಚರಣೆ ಮಾಡುತ್ತಾ ಇದ್ದರು.

ಆಗ ಪುಲಸ್ತ್ಯ ಅಲ್ಲಿ ಗೆ ಬಂದನು.ಪುಲಸ್ತ್ಯನು ತನ್ನ ಮಗನೆಂದು ಶ್ರೀಸರಸ್ವತಿದೇವಿಯು ಉದಾಸೀನ ಭಾವದಿಂದ ಇದ್ದುದ್ದನ್ನು ಕಂಡು ಪುಲಸ್ತ್ಯನು 

"ನೀನು ಯಾವ ಉದ್ದೇಶದಿಂದ ತಪಸ್ಸು ಮಾಡುತ್ತಾ ಇರುವೆ ಅದು ಸಫಲವಾಗದೇ ಹೋಗಲಿ" ಅಂತ ಶಾಪ ಕೊಟ್ಟನು.

ಅವಾಗ ಸರಸ್ವತಿ ದೇವಿಯರು ಸಹ "ನಿನ್ನ ವಂಶದಲ್ಲಿ ರಾಕ್ಷಸರೇ ಹುಟ್ಟಲಿ ಅಂತ ಶಾಪ ಕೊಟ್ಟರು.

ಭಗವಂತ ಹೇಗೆ ನಟನೆ ಮಾಡುವನೋ ಅದರಂತೆ ಶ್ರೀರಮಾದೇವಿ ಮೊದಲು ಗೊಂಡು  ಸಕಲ ದೇವತಾ ಪರಿವಾರದವರು ಸಹ ನಟನೆ ಮಾಡುವರು.

ಶ್ರೀಬ್ರಹ್ಮ ದೇವರ ಪತ್ನಿಯಾದ ಶ್ರೀಸರಸ್ವತಿ ದೇವಿಯರು ಹೆಸರು ಗೋಸ್ಕರ ತಪಸ್ಸು ಮಾಡುವದೇ??

ಮತ್ತು 

ಮಗ ಶಾಪ ಕೊಡುವದು.ನಂತರ ಅವರು ತಿರುಗಿ ಶಾಪ ಕೊಡುವದು..

ಇವೆಲ್ಲವೂ ಗಂಗಾ ನದಿಯ ಮಹತ್ವ ಬಗ್ಗೆ ತಿಳಿಸಲೋಸುಗ ಅಷ್ಟೇ.

ಆ ನಂತರ  ಸರಸ್ವತಿ ದೇವಿಯರು ಪುನಃ ತಪಸ್ಸು ಆಚರಿಸಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡು ಅವನಲ್ಲಿ ತನ್ನ ನಿರಂತರ ಸಾನಿಧ್ಯ ಬೇಡುವರು.

"ಗಂಗಾ ನದಿಗಿಂತ ಶ್ರೇಷ್ಠ ವಾದ ಸ್ಥಾನ ವನ್ನು ಫಲಿಸದೇ ಹೋಗಲಿ ಅಂತ ಶಾಪ ಬಂದ" ಬಗೆ ಹೇಳಿದಾಗ

ಅದಕ್ಕೆ ಭಗವಂತನು 

"ನದಿಗಳಲ್ಲಿ ಶ್ರೇಷ್ಠ ತೆ ಬೇಡ ಅಂತ ಶಾಪ ಇದೆ ಹೊರತು ಪುಷ್ಕರಣಿ ಯಲ್ಲಿ ಅಲ್ಲ.ನೀನು ಶೇಷಗಿರಿ ಪರ್ವತಕ್ಕೆ ಹೋಗು.ಆ ಗಿರಿಯ ದಕ್ಷಿಣ ಭಾಗ ದಲ್ಲಿ ಸುಖವಾಗಿ ನೆಲೆಸು."

"ನಾನು ಸಹ ನಿನ್ನ ಪಕ್ಕದಲ್ಲಿ ವಾಸ ಮಾಡುವೆ ಅಂತ ಹೇಳುವನು."

ಇದು ಸ್ವಾಮಿ ಪುಷ್ಕರಣಿ ತೀರ್ಥ ದ ಹಿನ್ನೆಲೆ.

🙏ಶ್ರೀ ಕೃಷ್ಣಾರ್ಪಣಮಸ್ತು🙏

ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ|

ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು|

ನಿಷ್ಕಾಮ ವರವೆ ಉಂಟು| ನಿತ್ಯಾ ಮುಕ್ತಿಗೆ ಗಂಟು|

.

ಪುಷ್ಕರಾಕ್ಷ ತಿಮ್ಮ ವಿಜಯವಿಠ್ಠಲ ಒಡೆಯ|

ಪುಷ್ಕರಣಿಯ ಮತಿ ಪುಷ್ಕಳವಾಗಿ ಕೊಡುವ|

🙏ಶ್ರೀನಿವಾಸ  ದಯಾನಿಧೆ🙏

Post a Comment

Previous Post Next Post