ಮೈಸೂರು ಅರಮನೆಯಲ್ಲಿರುವ ಸಿಂಹಾಸನವು ಭಾರತ ದೇಶದ ಧರ್ಮ ಸಂಸ್ಥಾಪನೆಯ ಸಿಂಹಾಸನ - "The History Of Golden Throne Of Mysore Palace".

 "The History Of Golden Throne Of Mysore Palace".

ಈಗ ಮೈಸೂರು ಅರಮನೆಯಲ್ಲಿರುವ ಸಿಂಹಾಸನವು ಭಾರತ ದೇಶದ ಧರ್ಮ ಸಂಸ್ಥಾಪನೆಯ ಸಿಂಹಾಸನ ಎಂಬುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಈ ಸಿಂಹಾಸನವನ್ನು ದ್ವಾಪರಯುಗದಲ್ಲಿ ಶ್ರೀಕೃಷ್ಣನು ಪಾಂಡವರಿಗೆ ಬಳುವಳಿಯಾಗಿ ನೀಡಿದ್ದರಂತೆ. ಈ ಸಿಂಹಾಸನದ ಮೇಲೆ ಪಾಂಡವಾಗ್ರಜ ಧರ್ಮರಾಯನು ಸುಭಿಕ್ಷವಾಗಿ ರಾಜ್ಯಭಾರ ಮಾಡಿದ್ದರು. ಪಾಂಡವರ ನಂತರ ಈ ಸಿಂಹಾಸನವು ರಣ ಭಯಂಕರ, ಅರಿಕೇಸರಿ, ಅಪ್ರತಿಮವೀರ ಶೌರ್ಯ ಪರಾಕ್ರಮಗಳಿಗೆ ಹೆಸರುವಾಸಿಯಾಗಿದ್ದ ವಿಕ್ರಮಾದಿತ್ಯರು ಈ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ಮಾಡಿದ್ದರು. ಭೋಜರಾಜನು ಸಹ ಈ ರತ್ನ ಸಿಂಹಾಸನದ ಮೇಲೆ ಕುಳಿತು ಸುಭಿಕ್ಷವಾಗಿ ರಾಜ್ಯಭಾರ ಮಾಡಿದ್ದರು. ಇಷ್ಟೆಲ್ಲಾ ಐತಿಹ್ಯಗಳನ್ನೊಳಗೊಂಡ ಸಿಂಹಾಸನವನ್ನು ಕೊನೆಗೆ ಆಂಧ್ರಪ್ರದೇಶದ ಪೆನುಗೊಂಡ ಬಳಿ ಭೂಮಿಯಲ್ಲಿ ಹೂತು ಇಟ್ಟಿದ್ದರು. ಶೃಂಗೇರಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರ ದಿವ್ಯದೃಷ್ಟಿ ಗೆ ಗೋಚರವಾದ ಈ ಸಿಂಹಾಸನವನ್ನು ಹಿಂದೂ ರಾಜ್ಯ ಪರಿಪಾಲಕರಾದ ಹರಿಹರ ಮತ್ತು ಬುಕ್ಕರಿಗೆ ವಿದ್ಯಾರಣ್ಯರು ಈ ಬಂಗಾರದ ಸಿಂಹಾಸನಾರೋಹಣ ಮಾಡಿಸಿ, ಸತ್ಯಧರ್ಮ ಸಂಸ್ಕೃತಿಯನ್ನು ಉಳಿಸಲು ಸಿಂಹಾಸನಕ್ಕೆ ತಮ್ಮ ತಪೋಶಕ್ತಿಯಿಂದ ವಿಶೇಷ ತೇಜಸ್ಸನ್ನು ನೀಡಿದರು. ಈ ಸಿಂಹಾಸನವನ್ನೇರಿ ವಿಜಯನಗರದ ಅರಸರು ಭಾರತದ ಸುವರ್ಣಯುಗಕ್ಕೆ ನಾಂದಿ ಹಾಡಿದರು ಅಲ್ಲದೆ ವೈಭವದಿಂದ ರಾಜ್ಯಭಾರ ಮಾಡಿದ್ದರು. ವಿಜಯನಗರ ಸಾಮ್ರಾಜ್ಯ ಪತನಾನಂತರ ಈ ಸಿಂಹಾಸನವು ಶ್ರೀರಂಗಪಟ್ಟಣದ ಅವರ ರಾಯಭಾರಿಯಾಗಿದ್ದ ತಿರುಮಲರಾಯರ ಬಳಿ ಇದ್ದಿತು  ಮೈಸೂರಿನ ಅರಸರಾದ ರಾಜ ಒಡೆಯರು ತಿರುಮಲರಾಯನನ್ನು ಸೋಲಿಸಿದ ನಂತರ ಈ ಸಿಂಹಾಸನವನ್ನು ತಿರುಮಲರಾಯರು ರಾಜ ಒಡೆಯರಿಗೆ ನೀಡುತ್ತಾರೆ. ನಂತರ ಕ್ರಿ.ಶ 1610 ರಿಂದ ರಾಜ ಒಡೆಯರು ಮಹಾರಾಜರಾಗಿ ಕರ್ನಾಟಕ ರತ್ನ ದಿವ್ಯ ಸಿಂಹಾಸನವನ್ನು ಅಲಂಕರಿಸಿ ಸುಭಿಕ್ಷವಾಗಿ ರಾಜ್ಯಭಾರ ಮಾಡಿ ತಮ್ಮ ಸಾಮ್ರಾಜ್ಯದಲ್ಲಿ ನವರಾತ್ರಿ ಆಚರಣೆಯನ್ನು, ವಿಜಯದಶಮಿ ಆಚರಣೆಯನ್ನು ಜಾರಿಗೆ ತರುತ್ತಾರೆ. ಇಂದಿಗೂ ಸಹ ಈ ಬಂಗಾರದ ಸಿಂಹಾಸನ ಮೈಸೂರು ರಾಜವಂಶಸ್ಥರ ಸುಪರ್ದಿಯಲ್ಲಿದ್ದು ಪಟ್ಟಕ್ಕೇರುವ ಮೈಸೂರು ಒಡೆಯರು ಕರ್ನಾಟಕ ರತ್ನ ಸಿಂಹಾಸನಾ

ರೂಡರಾಗುತ್ತಾರೆ. ಹಾಗೂ ನಮ್ಮ ಕರ್ನಾಟಕದ ಚಕ್ರವರ್ತಿಗಳಾಗಿ ನಾಡನ್ನು ಸುಬೀಕ್ಷವಾಗಿಡಲು ಈ ಸಿಂಹಾಸನವೇ ಪ್ರಮುಖ ಕಾರಣ. ಪ್ರಸ್ತುತ ಮೈಸೂರಿನ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಈ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ನವರಾತ್ರಿ ಉತ್ಸವ ಮುಗಿದ ನಂತರ ಸಿಂಹಾಸನವನ್ನು ಕಳಚಿ ಭದ್ರವಾಗಿ ಇಡಲಾಗುತ್ತದೆ. ಇಂದಿಗೂ ಸಹ ಕರ್ನಾಟಕದ ಜನತೆ ಈ ಸಿಂಹಾಸನ ಹಾಗೂ ಸಿಂಹಾಸನವನ್ನೇರುವ ಮಹಾರಾಜರೇ ಪ್ರತ್ಯಕ್ಷ ದೇವರೆಂದು ಪೂಜಿಸುತ್ತಾರೆ.

(ಹೆಚ್ಚಿನ ಮಾಹಿತಿ ಗೊತ್ತಿದ್ದರೆ ತಿಳಿಸಿ)

Post a Comment

Previous Post Next Post