ರಾಜ್‍ಕುಟುಂಬಕ್ಕೆ ಮುಳುವಾದ ವ್ಯಾಯಾಮ ಶಾಲೆ..!Jim work out ಆಗಲ್ಲಾ, ಆಗಲ್ಲಾ.,.. ಯೋಗ ಮಾಡಿ, ನಿರೋಗಿ ಯಾಗಿ...

ಬೆಂಗಳೂರು, ಅ.29- ಡಾ.ರಾಜ್‍ಕುಮಾರ್ ಕುಟುಂಬಕ್ಕೆ ವ್ಯಾಯಾಮ ಶಾಲೆಯೇ ಅಪಾಯಕಾರಿ ಸ್ಥಳ ಎಂಬಂತಾಗಿದೆ.ಈ ಮೊದಲು ರಾಘವೇಂದ್ರ ರಾಜ್‍ಕುಮಾರ್ ಅವರು ಜಿಮ್‍ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಆರೋಗ್ಯ ಹದಗೆಟ್ಟು ಪಾಶ್ರ್ವವಾಯು ಪೀಡಿತರಾದರು.

ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಸುಧಾರಣೆಗೊಂಡು ಒಂದೆರಡು ಚಿತ್ರಗಳಲ್ಲಿ ನಟಿಸಿದ್ದು, ನಿತ್ಯ ಜೀವನಕ್ಕೆ ಹೊಂದಿಕೊಂಡಿದ್ದಾರೆ.ಇನ್ನು ಪುನೀತ್ ಹಿರಿಯಣ್ಣ ಶಿವರಾಜ್‍ಕುಮಾರ್ ಅವರೂ ಕೂಡ ಜಿಮ್‍ನಲ್ಲಿ ಕಸರತ್ತು ನಡೆಸುವಾಗಲೇ ಅಸ್ವಸ್ಥಗೊಂಡಿದ್ದರು.

ಆದರೆ, ಹೆಚ್ಚಿನ ಸಮಸ್ಯೆಯಾಗದೆ ಚೇತರಿಸಿಕೊಂಡು ಫಿಟ್ ಅಂಡ್ ಫೈನ್ ಆಗಿ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುನೀತ್‍ರಾಜ್‍ಕುಮಾರ್ ಕೂಡ ಜಿಮ್‍ನಲ್ಲಿ ಇದ್ದಾಗಲೇ ಅಸ್ವಸ್ಥಗೊಂಡಿದ್ದು, ಚೇತರಿಸಿಕೊಳ್ಳಲೇ ಇಲ್ಲ.

Post a Comment

Previous Post Next Post