ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ತನ್ನ ಅಧಿಕಾರಾವಧಿಯ ಪಂಚಮ ದೀಪೋತ್ಸ ; 12 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿವೆ

, ಅಯೋಧ್ಯೆ:


ರಾಮನಗರಿ ಅಯೋಧ್ಯೆ ದೀಪೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ತನ್ನ ಅಧಿಕಾರಾವಧಿಯ ಪಂಚಮ ದೀಪೋತ್ಸವವನ್ನು ಐತಿಹಾಸಿಕ ರೀತಿಯಲ್ಲಿ ಆಚರಿಸಲು ಹೊರಟಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅಯೋಧ್ಯೆಯ ದೀಪೋತ್ಸವ ಸ್ಮರಣೀಯವಾಗಲಿದೆ.



ಈ ಬಾರಿಯ ದೀಪೋತ್ಸವದಲ್ಲಿ 12 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿವೆ. ಸರಯೂ ನದಿ ದಂಡೆಯ ಮೇಲಿನ ರಾಮ್ ಕಿ ಪೈಡಿಯಲ್ಲಿ 10.02 ಲಕ್ಷ ದೀಪಗಳು ಮತ್ತು ಜನ್ಮಭೂಮಿ ಸಂಕೀರ್ಣ ಸಹಿತ ಪುರಾತನ ಮಠ, ಮಂದಿರ ಮತ್ತು ಕುಂಡ್‌ಗಳಲ್ಲಿ 2 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಲಾಗುತ್ತಿದೆ. ಸೋಮವಾರ ರಾಮ್ ಕಿ ಪೈಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸ್ವಯಂಸೇವಕರು ದೀಪಗಳನ್ನು ಜೋಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಮುರಿಯುತ್ತದೆ ಹಳೆಯ ದಾಖಲೆ
ರಾಮ್ ಕಿ ಪೈಡಿಯಲ್ಲಿ ನಾಲ್ಕು ಯಶಸ್ವಿ ದೀಪೋತ್ಸವಗಳನ್ನು ಆಯೋಜಿಸುವ ಮೂಲಕ ಯೋಗಿ ಸರಕಾರವು ಅಯೋಧ್ಯೆಯನ್ನು ವಿಶ್ವದ ಭೂಪಟದಲ್ಲಿ ವಿಶೇಷವಾಗಿ ಸ್ಥಾಪಿಸಿದೆ. ಪ್ರತಿ ವರ್ಷ ಅವಧ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ತಮ್ಮದೇ ದಾಖಲೆ ಮುರಿದು, ಹೊಸ ದಾಖಲೆ ಸೃಷ್ಟಿಸುತ್ತಾರೆ. ಈ ಬಾರಿ ಆರಂಭದಲ್ಲಿ 7.51 ಲಕ್ಷ ದೀಪಗಳನ್ನು ಬೆಳಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಈ ವರ್ಷ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯ ದೀಪೋತ್ಸವದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸುವುದಾಗಿ ಘೋಷಿಸಿದ್ದಾರೆ. 2019ರಲ್ಲಿ 51ಸಾವಿರ ಹಾಗೂ 2020ರಲ್ಲಿ 6,06,569 ಮಣ್ಣಿನ ಹಣತೆಗಳು ಬೆಳಗಿ ಗಿನ್ನಿಸ್ ಪುಸ್ತಕದಲ್ಲಿ ವಿಶ್ವ ದಾಖಲೆ ನಿರ್ಮಾಣವಾಗಿದೆ.



12ಸಾವಿರ ಸ್ವಯಂಸೇವಕರ ನಿಯೋಜನೆ
ಅಯೋಧ್ಯೆಯ ದೀಪೋತ್ಸವವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಿಸಲು, ತೀರ್ಪುಗಾರರ ತಂಡ ಅಯೋಧ್ಯೆಗೆ ಬರಲಿದೆ. ವಿಶ್ವದಾಖಲೆ ನಿರ್ಮಿಸಲು ಮಣ್ಣಿನ ದೀಪ ಕನಿಷ್ಠ 5ನಿಮಿಷಗಳ ಬೆಳಗಬೇಕು. ಇದಕ್ಕಾಗಿ ಎರಡು ಕಾಲುವೆಗಳ 32 ಘಾಟ್‌ಗಳಲ್ಲಿ ದೀಪಗಳನ್ನು ಅಲಂಕರಿಸಲಾಗುತ್ತದೆ. ನ. 3ರಂದು ದೀಪಾವಳಿಯ ಮುನ್ನಾದಿನ ದೀಪೋತ್ಸವ ಆಚರಣೆಯಲ್ಲಿ ಉತ್ತರ ಪ್ರದೇಶದ ಪ್ರತಿ ಹಳ್ಳಿಯಿಂದ ತಲಾ 5ಮಣ್ಣಿನ ದೀಪಗಳು ಅಯೋಧ್ಯೆಯನ್ನು ಬೆಳಗಿಸಲು ಸಹಾಯ ಮಾಡುತ್ತವೆ. ದೀಪಗಳನ್ನು ಬೆಳಗಿಸಲು 12,000 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಈ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.



ಟ್ಯಾಬ್ಲೋಗಳ ಆಕರ್ಷಕ ಮೆರವಣಿಗೆ
ಪಂಚಮ ದೀಪೋತ್ಸವದಲ್ಲಿ ಟ್ಯಾಬ್ಲೋಗಳು (ಸ್ತಬ್ಧಚಿತ್ರಗಳು) ಆಕರ್ಷಣೆಯ ಕೇಂದ್ರವಾಗಿರಲಿವೆ. ಒಟ್ಟು 11 ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ. ದೀಪೋತ್ಸವದ ಸಾಂಪ್ರದಾಯಿಕ ಮೆರವಣಿಗೆಯು ನ. 3ರಂದು ಸಾಕೇತ್ ಮಹಾವಿದ್ಯಾಲಯದಿಂದ ರಾಮ್ ಕಥಾ ಪಾರ್ಕ್‌ವರೆಗೆ ಸಾಗಲಿದೆ. ಭಗವಾನ್ ರಾಮನ ಜೀವನದ ಘಟನೆಗಳ ಕುರಿತು 11 ವಾಹನಗಳಲ್ಲಿ ಟ್ಯಾಬ್ಲೋಗಳು ನಗರ ಪ್ರದಕ್ಷಿಣೆ ಮಾಡಲಿವೆ. ರಾಮೇಶ್ವರದ ರಾಮ ಸೇತು, ಪುಷ್ಪಕ ವಿಮಾನ, ರಾಮ ದರ್ಬಾರ್, ಶಬರಿ ಮತ್ತು ರಾಮನ ಭೇಟಿ, ಲಂಕಾ ದಹನ್ ಇತ್ಯಾದಿ ಟ್ಯಾಬ್ಲೋಗಳಿರಲಿವೆ.

Post a Comment

Previous Post Next Post