ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಿದ ಬೆನ್ನಿಗೇ ಬಿಜೆಪಿ ಆಳ್ವಿಕೆಯ ರಾಜ್ಯಗಳು ತೈಲ ಬೆಲೆ ಇಳಿಸಿವೆ.ಕರ್ನಾಟಕ ಬಿಜೆಪಿ ಸರಕಾರವು ಮೊದಲ ಹೆಜ್ಜೆ ಇಟ್ಟಿದ್ದು , 7 ರೂ.ಗಳಷ್ಟು ಇಳಿಕೆ ಮಾಡಿ ಗಮನ ಸೆಳೆದಿದೆ.
ಅಸ್ಸಾಮ್, ತ್ರಿಪುರ, ಮಣಿಪುರ, ಗೋವಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ 7 ರೂ.ಗಳಷ್ಟು ತಗ್ಗಿಸಿದ್ದು, ಉತ್ತರಪ್ರದೇಶ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ ಸರಕಾರಗಳೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಣ ಅಬಕಾರಿ ಸುಂಕವನ್ನು ಕ್ರಮವಾಗಿ 5ರೂ. ಮತ್ತು 10ರೂ.ಗಳಷ್ಟು ಇಳಿಸಿವೆ.
ಹರ್ಯಾಣ ರಾಜ್ಯದಲ್ಲಿ ತೈಲ ಬೆಲೆ ಮತ್ತೆ 12ರೂ.ಗಳಷ್ಟು ಇಳಿಕೆ ಕಂಡಿದೆ.
ಒಡಿಶಾದ ಬಿಜು ಜನತಾದಳ ಸರಕಾರ 3ರೂ.ಗಳಷ್ಟು ವ್ಯಾಟನ್ನು ಕಡಿತಗೊಳಿಸಿದೆ. ಇದರಿಂದ ಅಲ್ಲಿ ಡೀಸೆಲ್ ಬೆಲೆ 100ರೂ.ಗೆ , ಪೆಟ್ರೋಲ್ ಬೆಲೆ ಕೂಡಾ 100ರೂ.ಗೆ ಇಳಿಕೆಯಾಗಿದೆ.
ಬಿಹಾರದಲ್ಲಿ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ 3ರೂ.ಗಳಷ್ಟು ವ್ಯಾಟ್ ತಗ್ಗಿಸಿದೆ. ಇದರಿಂದ ಪೆಟ್ರೋಲ್ ಬೆಲೆ ಲೀಟರಿಗೆ 3.20ರೂ. ಮತ್ತು ಡೀಸೆಲ್ ಬೆಲೆ ಲೀಟರಿಗೆ 3.90ರೂ. ಇಳಿಕೆಯಾಗಿದೆ.
ಆದರೆ ಮೋದಿ ಸರಕಾರ ಉದಾರತೆ ಯಿಂದ ಈ ತೈಲ ಬೆಲೆ ಇಳಿಕೆ ಮಾಡಿದ್ದಲ್ಲ, ಭಯದಿಂದ ಇಳಿಕೆ ಮಾಡಿದೆ ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವ್ಯಂಗ್ಯ ದ ಹೊರತಾಗಿಯೂ ಕಾಂಗ್ರೆಸ್ ಆಡಳಿತ ರಾಜ್ಯಗಳು ಇನ್ನೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿಲ್ಲ.
Post a Comment