ಜಿಎಸ್ಟಿ ಅನುಷ್ಠಾನದ ನಂತರ ಅಕ್ಟೋಬರ್ 2021ರಲ್ಲಿ 2ನೇ ಬಾರಿಗೆ ಅತಿ ಹೆಚ್ಚು ಜಿಎಸ್ಟಿ ಸಂಗ್ರಹಣೆ ದಾಖಲು
ಅಕ್ಟೋಬರ್ ನಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯ 1,30,127 ಕೋಟಿ ರೂ.
ಅಕ್ಟೋಬರ್ 2021ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ ಶೇ..24 ಹೆಚ್ಚಾಗಿದೆ ಮತ್ತು 2019-20 ಕ್ಕಿಂತ ಶೇ..36 ಹೆಚ್ಚಾಗಿದೆ
ಅಕ್ಟೋಬರ್ 2021ರ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯವು 1,30,127 ಕೋಟಿ ರೂಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ 23,861 ಕೋಟಿ ರೂ, ಎಸ್.ಜಿಎಸ್ಟಿ 30,421 ಕೋಟಿ ರೂ., ಐಜಿಎಸ್ಟಿ 67,361 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಲಾದ 32,998 ಕೋಟಿ ರೂ. ಸೇರಿದಂತೆ), ಉಪಕರ 8,484 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಲಾದ 699 ಕೋಟಿ ರೂ. ಸೇರಿದಂತೆ) ಆಗಿದೆ.
ಸರ್ಕಾರವು ಸಿಜಿಎಸ್ಟಿಗೆ 27,310 ಕೋಟಿ ರೂ. ಮತ್ತು ಎಸ್.ಜಿಎಸ್ಟಿಗೆ 22,394 ಕೋಟಿ ರೂ.ಗಳನ್ನು ಐ.ಜಿ.ಎಸ್.ಟಿ.ಯಿಂದ ನಿಯಮಿತ ಇತ್ಯರ್ಥಪಡಿಸಿದೆ. ಅಕ್ಟೋಬರ್ 2021ರ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿಗೆ 51171 ಕೋಟಿ ರೂ. ಮತ್ತು ಎಸ್.ಜಿಎಸ್ಟಿಗೆ 52,815 ಕೋಟಿ ರೂ. ಆಗಿದೆ.
ಅಕ್ಟೋಬರ್ 2021ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್ಟಿ ಆದಾಯಕ್ಕಿಂತ ಶೇ.24ಹೆಚ್ಚಾಗಿದೆ ಮತ್ತು 2019-20 ಕ್ಕಿಂತ ಶೇ.36ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇ.39ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬರುವ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯಕ್ಕಿಂತ ಶೇ.19 ಹೆಚ್ಚಾಗಿದೆ.
ಅಕ್ಟೋಬರ್ ನಲ್ಲಿ ಜಿಎಸ್ಟಿ ಆದಾಯವು ಜಿಎಸ್ಟಿಯನ್ನು ಪರಿಚಯಿಸಿದ ನಂತರ ಎರಡನೇ ಬಾರಿಗೆ ಅತ್ಯಧಿಕವಾಗಿದೆ, ಇದು ಏಪ್ರಿಲ್ 2021ರಲ್ಲಿ ವರ್ಷಾಂತ್ಯದ ಆದಾಯಕ್ಕೆ ಸಂಬಂಧಿಸಿದಂತೆ ಎರಡನೇ ಸ್ಥಾನದಲ್ಲಿದೆ. ಇದು ಆರ್ಥಿಕ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿದೆ. ಎರಡನೇ ಅಲೆಯ ನಂತರ ಪ್ರತಿ ತಿಂಗಳು ಸೃಜನೆಯಾಗುತ್ತಿರುವ ಇ-ವೇ ಬಿಲ್ ಗಳಲ್ಲಿನ ಪ್ರವೃತ್ತಿಯಿಂದ ಇದು ಸ್ಪಷ್ಟವಾಗಿದೆ. ಸೆಮಿ ಕಂಡಕ್ಟರ್ ಗಳ ಪೂರೈಕೆಯಲ್ಲಿ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಾಗಿರುತ್ತಿತ್ತು. ಚಾರ್ಟ್- 1 ತಿಂಗಳಲ್ಲಿ ಉತ್ಪತ್ತಿಯಾದ ಇ-ವೇ ಬಿಲ್ ಗಳ ಸಂಖ್ಯೆಯ ಮೇಲ್ಮುಖ ಪ್ರವೃತ್ತಿಯನ್ನು ಮತ್ತು ಆರ್ಥಿಕ ಚಟುವಟಿಕೆಯಲ್ಲಿನ ಚೇತರಿಕೆಯನ್ನು ಸ್ಪಷ್ಟವಾಗಿ ಸೂಚಿಸುವ ತೆರಿಗೆಗೆ ಒಳಪಡುವ ಮೌಲ್ಯದ ಪ್ರಮಾಣವನ್ನು ತೋರಿಸುತ್ತದೆ.
ರಾಜ್ಯ ಮತ್ತು ಕೇಂದ್ರ ತೆರಿಗೆ ಆಡಳಿತದ ಪ್ರಯತ್ನಗಳು ಆದಾಯ ಹೆಚ್ಚಳಕ್ಕೆ ಸಹಾಯ ಮಾಡಿದ್ದು, ಇದರ ಪರಿಣಾಮವಾಗಿ ಹಿಂದಿನ ತಿಂಗಳುಗಳಿಗಿಂತ ಹೆಚ್ಚಿನ ಅನುಸರಣೆಯಾಗಿದೆ. ವೈಯಕ್ತಿಕ ತೆರಿಗೆ ವಂಚಕರ ವಿರುದ್ಧ ಕೈಗೊಂಡ ಕ್ರಮದ ಜೊತೆಗೆ, ಇದು ಜಿಎಸ್ಟಿ ಕೌನ್ಸಿಲ್ ಅನುಸರಿಸಿದ ಬಹುಹಂತದ ವಿಧಾನದ ಫಲಿತಾಂಶವಾಗಿದೆ. ಒಂದು ಕಡೆ, ಎಸ್.ಎಂಎಸ್ ಮೂಲಕ ನಿಲ್ ಫೈಲಿಂಗ್ ನಂತಹ ಅನುಸರಣೆಯನ್ನು ಸುಲಭಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇದು ತ್ರೈಮಾಸಿಕ ರಿಟರ್ನ್ ಗಳ ಮಾಸಿಕ ಪಾವತಿ (ಕ್ಯೂಆರ್.ಎಂಪಿ) ವ್ಯವಸ್ಥೆ ಮತ್ತು ಆಟೋ- ಪಾಪ್ಯುಲೇಷನ್ ರಿಟರ್ನ್ ಗೆ ಅವಕಾಶ ಕಲ್ಪಿಸಿದೆ. ಕಳೆದ ಒಂದು ವರ್ಷದಲ್ಲಿ, ಜಿಎಸ್ಟಿಎನ್ ಬಳಕೆದಾರರ ಅನುಭವವನ್ನು ಸುಧಾರಿಸಲು ಸಿಸ್ಟಂ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಅನುಸರಣೆ ಮಾಡದ ಪ್ರವೃತ್ತಿಯನ್ನು ನಿರುತ್ತೇಜನಗೊಳಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ, ಉದಾಹರಣೆಗೆ ರಿಟರ್ನ್ಸ್ ಸಲ್ಲಿಸದ ಇ-ವೇ ಬಿಲ್ ಗಳನ್ನು ನಿರ್ಬಂಧಿಸುವುದು, ಸತತವಾಗಿ ಆರು ರಿಟರ್ನ್ಸ್ ಸಲ್ಲಿಸಲು ವಿಫಲವಾದ ತೆರಿಗೆದಾರರ ನೋಂದಣಿಯನ್ನು ಸಿಸ್ಟಮ್ ಆಧಾರಿತವಾಗಿ ಅಮಾನತುಗೊಳಿಸುವುದು ಮತ್ತು ರಿಟರ್ನ್ ಸಲ್ಲಿಸದರವರುಗಳಿಗೆ ಸಾಲವನ್ನು ನಿರ್ಬಂಧಿಸುವುದು. ಮುಂದಿನ ತಿಂಗಳ ಅಂತ್ಯದ ವೇಳೆಗೆ ಪ್ರತಿ ತಿಂಗಳು/ತ್ರೈಮಾಸಿಕದ ರಿಟರ್ನ್ಸ್ (ಜಿಎಸ್ಟಿಆರ್-3ಬಿ) ಸಂಖ್ಯೆಯು ಉತ್ತಮ ನಿಯತಾಂಕವಾಗಿದ್ದು, ಇದು ರಿಟರ್ನ್ಸ್ ಸಕಾಲದಲ್ಲಿ ಪಾವತಿ ಮತ್ತು ರಿಟರ್ನ್ಸ್ ಫೈಲ್ ಮಾಡುವುದನ್ನು ಸೂಚಿಸುತ್ತದೆ. ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕದ ನಂತರ, ತಿಂಗಳ ಅಂತ್ಯದ ವೇಳೆಗೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೇಂದ್ರ ಮತ್ತು ರಾಜ್ಯ ತೆರಿಗೆ ಆಡಳಿತದ ನಿಕಟ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಜಿಎಸ್ಟಿಎನ್ ನಿಂದ ಸಂದೇಶ ರೂಪದಲ್ಲಿ ಕಳುಹಿಸುವ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತದೆ. ಚಾರ್ಟ್ -2, ಮುಂದಿನ ತಿಂಗಳ ಅಂತ್ಯದವರೆಗೆ ಸಲ್ಲಿಸಲಾಗುವ ಶೇಕಡಾವಾರು ರಿಟರ್ನ್ಸ್ ನಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುತ್ತದೆ, ನೀತಿ ಕ್ರಮಗಳು ಮತ್ತು ಆಡಳಿತಾತ್ಮಕ ಪ್ರಯತ್ನಗಳಿಂದಾಗಿ ಸಮಯೋಚಿತ ತೆರಿಗೆಪಾವತಿಯು ಕಾಲಾವಧಿಯಲ್ಲಿ ಹೆಚ್ಚುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.
ಅನೇಕ ಸಂದರ್ಭಗಳಲ್ಲಿ, ಜನರಿಗೆ ಹಳೆಯ ರಿಟರ್ನ್ಸ್ ಸಲ್ಲಿಸಲು ಮತ್ತು ರಿಟರ್ನ್ಸ್ ಸಲ್ಲಿಸುವಲ್ಲಿ ನವೀಕೃತವಾಗಲು ಅವಕಾಶ ನೀಡಲು ವಿಳಂಬ ಶುಲ್ಕವನ್ನು ಮನ್ನಾ ಮಾಡಲು ಮಂಡಳಿ ನಿರ್ಧರಿಸಿದೆ. ಪ್ರತಿ ತಿಂಗಳು ಹೆಚ್ಚು ಹೆಚ್ಚು ತೆರಿಗೆದಾರರು ರಿಟರ್ನ್ಸ್ ಸಲ್ಲಿಸುವುದರಿಂದ, ಯಾವುದೇ ತಿಂಗಳಲ್ಲಿ ಸಲ್ಲಿಸಿದ ಹಳೆಯ ಅವಧಿಯ ರಿಟರ್ನ್ಸ್ ನ ಶೇಕಡಾವಾರು ನಿರಂತರವಾಗಿ ಹೆಚ್ಚಾಗುತ್ತಿದೆ. ಚಾರ್ಟ್ 3 ಸಲ್ಲಿಸಿದ ಒಟ್ಟು ರಿಟರ್ನ್ಸ್ ನಲ್ಲಿ ಪ್ರತಿ ತಿಂಗಳಲ್ಲಿ ಸಲ್ಲಿಸಿದ ಪ್ರಸ್ತುತ ಅವಧಿಯ ರಿಟರ್ನ್ಸ್ ನ ಪಾಲನ್ನು ತೋರಿಸುತ್ತದೆ, ಇದು ಪ್ರಸ್ತುತ ತಿಂಗಳ ರಿಟರ್ನ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕೋವಿಡ್ ನಿಂದಾಗಿ ನೀಡಲಾದ ಸಡಿಲಿಕೆಯ ಲಾಭವನ್ನು ಪಡೆದು ತೆರಿಗೆದಾರರು ಕಳೆದ ತಿಂಗಳುಗಳ ರಿಟರ್ನ್ಸ್ ಸಲ್ಲಿಸಿದ್ದರಿಂದ ಜುಲೈ 2021ರ ತಿಂಗಳಲ್ಲಿ 1.5 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ.
ರಿಟರ್ನ್ ಸಲ್ಲಿಕೆಯಲ್ಲಿ ಸುಧಾರಣೆಯಾಗಿರುವುದರೊಂದಿಗೆ, ಸಕಾಲದಲ್ಲಿ ಜಿಎಸ್ಟಿಆರ್-1 ಸಲ್ಲಿಕೆಯತ್ತ ಜಿಎಸ್ಟಿ ಮಂಡಳಿ ಗಮನ ಹರಿಸಿದೆ, ಇದು ಇನ್ ವಾಯ್ಸ್ ಗಳ ವಿವರಗಳನ್ನು ಒಳಗೊಂಡ ಹೇಳಿಕೆಯಾಗಿದೆ. ಇನ್ ಪುಟ್ ತೆರಿಗೆ ಕ್ರೆಡಿಟ್ ತೆಗೆದುಕೊಳ್ಳುವಲ್ಲಿ ಶಿಸ್ತನ್ನು ಖಚಿತಪಡಿಸಿಕೊಳ್ಳಲು ಈ ಹೇಳಿಕೆ ನಿರ್ಣಾಯಕವಾಗಿದೆ. ಜಿಎಸ್ಟಿಆರ್-1 ಅನ್ನು ಸಕಾಲದಲ್ಲಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಿಂಗಳ ಅಂತ್ಯದ ವೇಳೆಗೆ ಜಿಎಸ್ಟಿಆರ್-1 ಸಲ್ಲಿಕೆಯನ್ನು ಪ್ರದರ್ಶಿಸುವ ಚಾರ್ಟ್ 4, ತಿಂಗಳ ಅಂತ್ಯದ ವೇಳೆಗೆ ಸಲ್ಲಿಸಲಾದ ಜಿಎಸ್ಟಿಆರ್-1 ರ ಶೇಕಡಾವಾರು ಸ್ಪಷ್ಟವಾಗಿ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುತ್ತಿರುವುದರಿಂದ ಈ ಕ್ರಮಗಳು ಅಪೇಕ್ಷಿತ ಫಲಿತಾಂಶವನ್ನು ತಂದಿವೆ ಎಂಬುದು ವೇದ್ಯವಾಗುತ್ತದೆ.
ಒಟ್ಟಾರೆಯಾಗಿ, ಈ ಪ್ರಯತ್ನಗಳ ಪರಿಣಾಮವು ಹೆಚ್ಚಿನ ಅನುಸರಣೆ ಮತ್ತು ಹೆಚ್ಚಿನ ಆದಾಯವನ್ನು ಖಾತ್ರಿಪಡಿಸಿದೆ. ವಂಚನೆಯನ್ನು ತಡೆಯುವ ಒಟ್ಟಾರೆ ಪ್ರಯತ್ನಗಳ ಭಾಗವಾಗಿ, ನಕಲಿ ಐಟಿಸಿಯನ್ನು ನಿರ್ಬಂಧಿಸಲು ಹೆಚ್ಚಿನ ಕ್ರಮಗಳು ಜಿಎಸ್ಟಿ ಮಂಡಳಿಯ ಪರಿಶೀಲಿಸುತ್ತಿವೆ. ಕೆಳಗಿನ ಚಾರ್ಟ್ 5 ವರ್ಷದ ಮಾಸಿಕ ಜಿಎಸ್ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಕೋಷ್ಟಕವು ಜಿಎಸ್ಟಿ ಆದಾಯದ ರಾಜ್ಯವಾರು ವಿಘಟನೆಯನ್ನು ತೋರಿಸುತ್ತದೆ (ಸರಕುಗಳ ಆಮದಿನ ಮೇಲಿನ ಜಿಎಸ್ಟಿ ಹೊರತುಪಡಿಸಿ). ಮೇ ಮತ್ತು ಜೂನ್ ತಿಂಗಳುಗಳಲ್ಲಿ ಕೆಳಗಿನ ಚಾರ್ಟ್ ನಲ್ಲಿ ತೋರಿಸಲಾದ ಮಾಸಿಕ ಅಂಕಿಅಂಶಗಳು ಮತ್ತು ಆಗ ಪ್ರಕಟವಾದ ಅಂಕಿಅಂಶಗಳು ಮುಂದಿನ ತಿಂಗಳ 5 ರವರೆಗೆ ಇದ್ದಕಾರಣ ಆಯಾ ಪತ್ರಿಕಾ ಟಿಪ್ಪಣಿಗಳಲ್ಲಿ ಸೇರಿಸಲಾದ ಅಂಕಿಅಂಶಗಳ ನಡುವೆ ಸಣ್ಣ ವ್ಯತ್ಯಾಸವಿದೆ, ಏಕೆಂದರೆ ಸಾಂಕ್ರಾಮಿಕ ರೋಗದಿಂದಾಗಿ ಮುಂದಿನ ತಿಂಗಳ 5ರವರೆಗೆ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಪರಿಹಾರ ನೀಡಲಾಗಿದೆ.
ಅಕ್ಟೋಬರ್ 21ರಲ್ಲಿ ಜಿಎಸ್ಟಿ ಆದಾಯದ ರಾಜ್ಯವಾರು ವೃದ್ಧಿ [1]
ರಾಜ್ಯ | ಅಕ್ಟೋಬರ್-20 | ಅಕ್ಟೋಬರ್21 | ವೃದ್ಧಿ |
ಜಮ್ಮು ಮತ್ತು ಕಾಶ್ಮೀರ | 377 | 648 | 72% |
ಹಿಮಾಚಲ ಪ್ರದೇಶ | 691 | 689 | 0% |
ಪಂಜಾಬ್ | 1,376 | 1,595 | 16% |
ಚಂಡೀಗಢ | 152 | 158 | 4% |
ಉತ್ತರಾಖಂಡ | 1,272 | 1,259 | -1% |
ಹರಿಯಾಣ | 5,433 | 5,606 | 3% |
ದೆಹಲಿ | 3,211 | 4,045 | 26% |
ರಾಜಾಸ್ಥಾನ | 2,966 | 3,423 | 15% |
ಉತ್ತರ ಪ್ರದೇಶ | 5,471 | 6,775 | 24% |
ಬಿಹಾರ | 1,010 | 1,351 | 34% |
ಸಿಕ್ಕಿಂ | 177 | 257 | 45% |
ಅರುಣಾಚಲ ಪ್ರದೇಶ | 98 | 47 | -52% |
ನಾಗಾಲ್ಯಾಂಡ್ | 30 | 38 | 30% |
ಮಣಿಪುರ | 43 | 64 | 49% |
ಮಿಜೋರಾಂ | 32 | 32 | 1% |
ತ್ರಿಪುರಾ | 57 | 67 | 17% |
ಮೇಘಾಲಯ | 117 | 140 | 19% |
ಅಸ್ಸಾಂ | 1,017 | 1,425 | 40% |
ಪಶ್ಚಿಮ ಬಂಗಾಳ | 3,738 | 4,259 | 14% |
ಜಾರ್ಖಂಡ್ | 1,771 | 2,370 | 34% |
ಒಡಿಶಾ | 2,419 | 3,593 | 49% |
ಛತ್ತೀಸಗಢ | 1,974 | 2,392 | 21% |
ಮಧ್ಯಪ್ರದೇಶ | 2,403 | 2,666 | 11% |
ಗುಜರಾತ್ | 6,787 | 8,497 | 25% |
ಡಮನ್ ಮತ್ತು ಡಿಯು | 7 | 0 | -99% |
ದಾದ್ರಾ ಮತ್ತು ನಗರ್ ಹವೇಲಿ | 283 | 269 | -5% |
ಮಹಾರಾಷ್ಟ್ರ | 15,799 | 19,355 | 23% |
ಕರ್ನಾಟಕ | 6,998 | 8,259 | 18% |
ಗೋವಾ | 310 | 317 | 3% |
ಲಕ್ಷದ್ವೀಪ | 1 | 2 | 86% |
ಕೇರಳ | 1,665 | 1,932 | 16% |
ತಮಿಳುನಾಡು | 6,901 | 7,642 | 11% |
ಪುದುಚೇರಿ | 161 | 152 | -6% |
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 19 | 26 | 40% |
ತೆಲಂಗಾಣ | 3,383 | 3,854 | 14% |
ಆಂಧ್ರಪ್ರದೇಶ | 2,480 | 2,879 | 16% |
ಲಡಾಖ್ | 15 | 19 | 32% |
ಇತರ ಪ್ರದೇಶಗಳು | 91 | 137 | 51% |
ಕೇಂದ್ರ ವ್ಯಾಪ್ತಿ | 114 | 189 | 66% |
ಒಟ್ಟು | 80,848 | 96,430 | 19% |
********
RM/KMN
[1] ಸರಕುಗಳ ಆಮದಿನ ಮೇಲಿನ ಜಿಎಸ್ಟಿ ಒಳಗೊಂಡಿಲ್ಲ.
(Release ID: 1768534) Visitor Counter : 16
Post a Comment