ರೋಮ್‌ನಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಸ್ಪೇನ್ ಪ್ರಧಾನಿ ಅವರೊಂದಿಗೆ ಪ್ರಧಾನಮಂತ್ರಿ ಮೋದಿಯವರ ಸಭೆ

ರೋಮ್‌ನಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಸ್ಪೇನ್ ಪ್ರಧಾನಿ ಅವರೊಂದಿಗೆ ಪ್ರಧಾನಮಂತ್ರಿ ಮೋದಿಯವರ ಸಭೆ

Posted On: 31 OCT 2021 9:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೋಮ್‌ನಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ 2021ರ ಅಕ್ಟೋಬರ್ 31ರಂದು ಸ್ಪೇನ್ ಪ್ರಧಾನಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರನ್ನು ಭೇಟಿ ಮಾಡಿದರು.

2. ಸ್ಪೇನ್‌ನ `ಏರ್‌ಬಸ್ʼನಿಂದ 56 ʻಸಿ295ʼ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕುವುದು ಸೇರಿದಂತೆ ಭಾರತ ಮತ್ತು ಸ್ಪೇನ್‌ ನಡುವೆ ಹೆಚ್ಚುತ್ತಿರುವ ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆ ಸಂಪರ್ಕಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಈ 56ರ ಪೈಕಿ 40 ವಿಮಾನಗಳನ್ನು ʻಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ʼ ಸಹಯೋಗದೊಂದಿಗೆ ಭಾರತದಲ್ಲೇ ತಯಾರಿಸಲಾಗುವುದು. ಇ-ಸಾರಿಗೆ, ಕ್ಲೀನ್ ಟೆಕ್, ಸುಧಾರಿತ ಪದಾರ್ಥಗಳು ಮತ್ತು ಆಳ ಸಮುದ್ರ ಅನ್ವೇಷಣೆಯಂತಹ ಹೊಸ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಉಭಯ ನಾಯಕರು ಸಮ್ಮತಿಸಿದರು. ಹಸುರು ಹೈಡ್ರೋಜನ್, ಮೂಲಸೌಕರ್ಯ ಮತ್ತು ರಕ್ಷಣಾ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಮತ್ತು ಭಾರತದ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್, ಆಸ್ತಿ ನಗದೀಕರಣ ಯೋಜನೆ ಮತ್ತು ʻಗತಿ ಶಕ್ತಿʼ ಯೋಜನೆಯ ಲಾಭವನ್ನು ಮತ್ತಷ್ಟು ಪಡೆದುಕೊಳ್ಳುವಂತೆ ಪ್ರಧಾನಿ ಮೋದಿ ಅವರು ಸ್ಪೇನ್‌ಗೆ ಆಹ್ವಾನ ನೀಡಿದರು.

3. ಭಾರತ-ಐರೋಪ್ಯ ಒಕ್ಕೂಟದ ಸಂಬಂಧಗಳು ಮತ್ತು ಮುಂಬರುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (ʻಸಿಒಪಿ26ʼ) ಹವಾಮಾನ ಸಂಬಂಧಿತ ಉಪಕ್ರಮ ಮತ್ತು ಆದ್ಯತೆಗಳ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಅಫ್ಘಾನಿಸ್ತಾನ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅವರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.

4. ಮುಂದಿನ ವರ್ಷ ಸ್ಪೇನ್ ಪ್ರಧಾನಿ ಸ್ಯಾಂಚೆಜ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ಪ್ರಧಾನಿ ಮೋದಿ ಎದುರು ನೋಡುತ್ತಿದ್ದಾರೆ

Post a Comment

Previous Post Next Post