ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್ಲೈನ್ ಸೇವೆ ;
60 ಲಕ್ಷ ಜನರು ಸಾರಿಗೆ ಕಚೇರಿಗೆ ಎಡತಾಕುವುದನ್ನು ತಪ್ಪಿಸಲು ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್ಲೈನ್ ಸೇವೆಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರಮುಖ 10 ಕಾರು, ಸ್ಕೂಟರ್ ಮಾರುವ ಸಂಸ್ಥೆಗಳಿಗೆ ವಾಹನ ನೋಂದಣಿ ಮಾಡಿಕೊಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಆಹಾರವಿತರಣೆ, ಬಿಬಿಎಂಪಿ ಯಾವುದೆ ಪ್ರಮಾಣಪತ್ರ. ಮಾಸಾಶನ, ಆಧಾರ ಕಾರ್ಡ್ 56 ಸೇವೆ, ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ತೆ, 1902 ಸಹಾಯವಾಣಿ , ಮೊಬೈಲ್ ಆಪ್ ಪ್ರಾರಂಭಿಸಲಾಗಿದೆ. ಸುಮಾರು 4,11,000 ಹೊಸ ಪಡಿತರ ಕಾರ್ಡಿಗೆ ಅನುಮೋದನೆ ನೀಡಿರುವುದಾಗಿಮುಖ್ಯಮಂತ್ರಿಗಳು ತಿಳಿಸಿದರು .
ನಿಗದಿತ ಗುರಿ, ಸ್ಪಷ್ಟ ದಿಕ್ಸೂಚಿ, ಸಂಕಲ್ಪ, ಬದ್ಧತೆ ಯಿಂದ ಆಡಳಿತ ಸುಧಾರಣೆ ಆಗಲಿದೆ. ಜನಸೇವಕರು ಜನರ ಮನೆ ಬಾಗಿಲಿಗೆ ಬಂದಾಗ ನಾಗರಿಕರು ಸೌಜನ್ಯದಿಂದ ಸಹಕರಿಸಬೇಕೆಂದು ನೀಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ || ಅಶ್ವಥ್ ನಾರಾಯಣ ಸಿ.ಎನ್., ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್, ಶಿವಾಜಿನಗರ ವಿಧಾನಸಭಾ ಕ್ಷೇತ್ರ ಶಾಸಕ ರಿಜ್ವಾನ್ ಅರ್ಷದ್, ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment