ನಿರೀಕ್ಷೆ ಉಲ್ಟಾ, ಪಲ್ಟಾ... ಹಾನಗಲ್ ನಲ್ಲಿ ಕಾಂಗ್ರೆಸ್ ,ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ... ಘೋಷಣೆ ಬಾಕಿ...

ನಿರೀಕ್ಷೆ ಉಲ್ಟಾ ಪಲ್ಟಾ ಆಗಿದೆ, ಬಿಜೆಪಿ ಗೆ ಮಾತ್ರವಲ್ಲ ಮುಖ್ಯಮಂತ್ರಿಗು ಪ್ರತಿಷ್ಠೆ ಕಣವಾಗಿದ್ದ ಹಾನಗಲ್ನಲ್ಲಿ ಕಾಂಗ್ರೆಸ್ ಗೆದ್ದಿದೆ ಬಿಜೆಪಿ ಎರಡನೇ ಸ್ಥಾನದಲ್ಲಿದೆ, ಇನ್ನು ಜೆಡಿಎಸ್ ಹೀನಾಯವಾಗಿ ಸೋತು ಠೇವಣಿ ಕಳೆದುಕೊಂಡಿದೆ. ಬಿಜೆಪಿ ಈ  ಹಿಂದೆ ಸಿ ಎಂ ಉದಾಸೀಯವರ ಖಾಸಗಿ  ಕ್ಷೇತ್ರವೇನಿಸಿದ ಇಲ್ಲಿ ಬಿಜೆಪಿ ಸೋತಿದ್ದು ನುಂಗಲಾರದ ತುತ್ತಾಗಿದೆ. ಅದರಲ್ಲೂ ಸಿಎಂ ಜಿಲ್ಲೆಯಾಗಿರುವುದರಿಂದ ಬಸವರಾಜ್ ಬೊಮ್ಮಾಯಿಯವರಿಗೆ ಮುಖ ಭಂಗವಾಗಿದೆ. ಈ ಸೋಲಿಗೆ ಅಭ್ಯರ್ಥಿ ಶಿವರಾಜ ಸಜ್ಜನರ್ ಅವರ ಕೆಲುವು ವಿಚಾರಗಳು, ನಿರ್ಧಾರಗಳು ಕಾರಣವೆಂದು ಅಭಿಪ್ರಾಯ ಪಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಹೊಸಬ ಎನ್ನುವುದು ಪರಿಣಾಮ ಬೀರಿದೆ,.......]
ಆದರೆ ಇಲ್ಲಿ ಗೆಲುವು ಪಡೆದ ಕಾಂಗ್ರೆಸ್ನಾ ಶ್ರೀನಿವಾಸ್ ಮಾನೆ ಇಲ್ಲಿಗೆ 5 ವರ್ಷಗಳಿಂದ ನೆಲೆಯೂರಿದ್ದಾರೆ. ಜೊತೆಗೆ ಇಲ್ಲ ಸಲ್ಲಗಳು ಇವರ ವಿರುದ್ಧ ಕಡಿಮೆ ಎನ್ನಬಹುದು,ಜೆಡಿಎಸ್ ನ ನಿಯಾಜ್ ಶೇಯಿಕ್ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ, ಠೇವಣಿ ನಷ್ಟವಾಗಿದೆ, ಇತ್ತ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಪ್ರಚಂಡ ಜಯ ಸಾಧಿಸಿದ್ದಾರೆ, ಹಿಂದೆ ಜೆಡಿಎಸ್ ಕ್ಷೇತ್ರವಾಗಿತ್ತು ಆದರೆ ಉಪಚುನಾವಣೆಯಲ್ಲಿ ಜೆಡಿಎಸ್ನ ನಾಜೀಯ ಅಂಗಡಿ ಮೂರನೇ ಸ್ಥಾನಕ್ಕೆ ಹೋಗಿ ಠೇವಣಿ ನಷ್ಟವಾಗಿದೆ. ಅದೇ ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರಿದ ಅಶೋಕ್ ಮನಗೂಳಿ ಅವರ ತಂದೆಯಂತೆ ವಿಜಯ ಸಾಧಿಸಲು ವಿಫಲವಾಗಿದ್ದಾರೆ. ಇಲ್ಲಿಯೂ ಸ್ಥಾನೀಯಬಲ ಮತ್ತು ಸಾರ್ವಜನಿಕ ಸೇವೆ ಪ್ರಮುಖ ಪಾತ್ರವನಿಸಿದೆ.





ಅಂದುಕೊಂಡಿದ್ದೇ ಬೇರೆ ಹಾನಗಲ್ ನಲ್ಲಿ ಆಗಿದ್ದು ಬೇರೆ... 
ಆರಂಭ ದಿಂದಲೂ ಸ್ವಲ್ಪ ಮಟ್ಟಿಗೆ ಮುನ್ನಡೆ ಕಾಯ್ದು ಕೊಂಡ ಕಾಂಗ್ರೆಸ್ ನ ಶ್ರೀನಿವಾಸ್ ಮಾನೆ, 6 ನೇ ಸುತ್ತಿನಲ್ಲಿ 3900 ಮತ ಪಡೆದರೆ, BJP  ಯ ಶಿವರಾಜ್ ಸಜ್ಜನ್ ರ 3722 ಮತ ಪಡೆದು ಸನಿಹದಲ್ಲೇ ಇದ್ದರು. 
ಆದರೆ 14 ನೇ ಸುತ್ತಿನಲ್ಲಿ 6807 ಮತಗಳ ಮುನ್ನಡೆ ಪಡೆದು ಗೆಲುವು ಖಚಿತ ಪಡಿಸಿ ಕೊಂಡರು....... 
ಇತ್ತ ಸಿಂದಗಿ ಯಲ್ಲಿ ಮುನ್ನಡೆ ಯೊಂದಿಗೆ ಮುನ್ನಡೆದ ಬಿಜೆಪಿ ಯ ರಮೇಶ್  ಭೂಷನೂರು 11 ನೇ ಸುತ್ತಿನಲ್ಲಿ 50050 , ಕಾಂಗ್ರೆಸ್ಸಿನ ಅಶೋಕ್ ಮನಗೂಳಿ 31,473,      ಜೆಡಿಎಸ್ ನ ನಾಜೀಯ ಅಂಗಡಿ 2067  ಮತ ಪಡೆದರು. 
ನಂತರ 25000 ಅಂತರದ  ಮುನ್ನಡೆ ಬೆಜೆಪಿಗೆ ಗೆಲುವು ಖಾತ್ರಿ ಯಯಿತು. ಘೋಷಣೆ ಬಾಕಿ ಇದೇ

Post a Comment

Previous Post Next Post