*ಸರ್ಕಾರ ಜನರ ಬಳಿಗೆ ತೆರಳಿ ಸೇವೆ ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಗಟ್ಟಿಗೊಳ್ಳುತ್ತದೆ*ಸಿ.ಎಂ*

*ಸರ್ಕಾರ ಜನರ ಬಳಿಗೆ ತೆರಳಿ ಸೇವೆ ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ   ವಿಶ್ವಾಸ ಗಟ್ಟಿಗೊಳ್ಳುತ್ತದೆ*ಸಿ.ಎಂ*

ಬೆಂಗಳೂರು, ನವೆಂಬರ್ 01: ಸರ್ಕಾರವೇ ಜನರ ಬಳಿಗೆ ತೆರಳಿ ಸೇವೆಗಳನ್ನು ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ  ವಿಶ್ವಾಸ ಗಟ್ಟಿಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.  

ಅವರು ಇಂದು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕ ಯೋಜನೆಯಡಿಯಲ್ಲಿ ನಾಗರಿಕರಿಂದ ಸೇವೆಗಳನ್ನು ಕೋರಿ ನೀಡಲಾಗುವ ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ವಿತರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
 

ಜನಸೇವಕ ಕಾರ್ಯಕ್ರಮ ಪ್ರಾರಂಭದಡಿ  ಸುಮಾರು 56 ಸೇವೆಗಳನ್ನು ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ  197 ವಾರ್ಡ್ ಗಳಲ್ಲಿ ಪ್ರಾರಂಭಿಸಲಾಗಿದೆ.  
ಡಾ:ಅಶ್ವತ್ಥ್ ನಾರಾಯಣ್ ಅವರ ಕ್ಷೇತ್ರದಲ್ಲಿ  10 ಮನೆಗಳನ್ನು ಆಯ್ಕೆ ಮಾಡಿ, ಜಾತಿ, ವಾಸಸ್ಥಳ ಪ್ರಮಾಣ ಪತ್ರ,  ವೃದ್ದಾಪ್ಯ ಹಾಗೂ ವಿಧವಾ ವೇತನ, ಖಾತಾ ನೀಡಲಾಗಿದೆ ಎಂದರು. 

ಇದೇ ರೀತಿ ಜನಸೇವಕರು ಮನೆ ಮನೆಗೆ ಬಂದು ಎಲ್ಲ ಸೇವೆಗಳನ್ನು ನೀಡುತ್ತಾರೆ. ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಈ ಯೋಜನೆ ಪ್ರಾರಂಭವಾಗಲಿದ್ದು, ಜನರು ಈ ಸೇವೆಗಳ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು. 

ಸರ್ಕಾರ ಜನರ ಮನೆ ಬಾಗಿಲಿಗೆ ಸೇವೆ ನೀಡುವ ಜನಸೇವಕ ಪ್ರಾರಂಭ ಮತ್ತು  ಜನವರಿ 26 ರಿಂದ ಪಡಿತರವನ್ನು ವಿತರಿಸುವ ಕಾರ್ಯವೂ ರಾಜ್ಯದಲ್ಲಿ  ಪ್ರಾರಂಭವಾಗಲಿದೆ. ಇದಲ್ಲದೆ, 155 ಇಲಾಖೆಗಳ ದೂರುಗಳ ಸ್ವೀಕಾರಕ್ಕಾಗಿ ಸಹಾಯವಾಣಿ ಪ್ರಾರಂಭವಾಗಿದೆ‌ಎಂದು ಹೇಳಿದ ಅವರು ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್ ಅವರ ಜನಪರ ಕಾರ್ಯವನ್ನು  ಮೆಚ್ಚಿಕೊಂಡರು. 

ಚುನಾವಣಾ ದೃಷ್ಟಿಯಿಂದ ಕಾರ್ಯಕ್ರಮ ಅನುಷ್ಠಾನವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು,  ಆಡಳಿತ ಸುಧಾರಣಾ ಕ್ರಮಗಳಲ್ಲಿ ಜನಸೇವಕ   ಕಾರ್ಯಕ್ರಮವೂ ಒಂದು ಎಂದು ಸ್ಪಷ್ಟಪಡಿಸಿದರು.

ಡಾ. ಸಿ ಎನ್ ಅಶ್ವತ್ಥ ನಾರಾಯಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post