[3/11 4:40 aparahna] Pandit Venkatesh. Astrologer. Kannada: ಸ್ನೇಹಿತರೇ ,
ಇಂದಿನಿಂದ ರಾಷ್ಟ್ರದೆಲ್ಲೆಡೆಯೂ ಸಂಭ್ರಮದಿಂದ ಜಾತಿಭೇದವಿಲ್ಲದೇ ಒಟ್ಟಾಗಿ ಆಚರಿಸುವ ಹಬ್ಬ ದೀಪಾವಳೀಹಬ್ಬ ! ಇಂದು ದೀಪಾವಳಿ ಹಬ್ಬದ ಪ್ರಯುಕ್ತ ನೀರು ತುಂಬುವ ಹಬ್ಬ ! ನಾವು ಭಾರತೀಯರು ಆಚರಿಸುವ ಪ್ರತೀಹಬ್ಬವೂ ಪೌರಾಣಿಕ ಹಿನ್ನಲೆ ಹೊಂದಿದ ವಿಶೇಷತೆಯನ್ನು ಹೊಂದಿದೆ ! ಅದರಲ್ಲೂ ದೀಪಾವಳಿಹಬ್ಬ ತುಂಬಾ ವಿಶೇಷತೆಯಿಂದ ಕೂಡಿದೆ !!! ಈ ಹಬ್ಬ ಒಂದುದಿವಸದ ಹಬ್ಬವಲ್ಲ !! ಒಂದುವಾರ ಆಚರಿಸುವ ಹಬ್ಬವಾಗಿದೆ !! ಇಂದು ಧನ ತ್ರಯೋದಶಿ ,ಧನ್ವಂತರಿ ಪೂಜೆ + ಸಂಜೆ ನೀರು ತುಂಬುವ ಹಬ್ಬ , ಗುರುವಾರ ನರಕಚತುರ್ದಶಿ ದೀಪಾವಳಿಹಬ್ಬ , ಶುಕ್ರವಾರ ಬಲಿಪಾಡ್ಯಮಿ ಬಲೀಂದ್ರಪೂಜೆ , ಶನಿವಾರ ಸೋದರ ಬಿದಿಗೆ , ಭಾನುವಾರ ಅಕ್ಕತಂಗಿಯರ ಸಹೋದರಿತದಿಗೆ !.
ಮಹಾನಗರಿಗರು ಬಾಯ್ಲರ್ ಬಕೆಟ್ ಗಳನ್ನೆಲ್ಲಾ ಶುದ್ಧವಾಗಿ ತೊಳೆದು , ನೀರು ಕಾಯಿಸುವ ಹಿತ್ತಾಳೆ ಸ್ಟೀಲ್ ಡ್ರಮ್ ಗಳನ್ನು ಹೊಳೆಯುವಂತೆ ತೊಳೆಯಬೇಕು , ಹಳ್ಳಿಯಲ್ಲಿ ತಾಮ್ರದ ಹಂಡೆಗಳನ್ನು ಹೊಳೆಯುವಂತೆ ತೊಳೆದು ಸುಣ್ಣ ಕೆಮ್ಮಣ್ಣು ಪಟ್ಟಿಯನ್ನು ಹಚ್ಚಿ ಹೊಲದ ಬೇಲಿಯಲ್ಲಿ ಹರಡಿದ ಮಾಲಿಂಗಬಳ್ಳಿ ತಂದು ಸುತ್ತಿ ನೀರುತುಂಬಿಸಿ ಪೂಜಿಸುತ್ತಾರೆ , ನಾವೂ ಹಳ್ಳಿಯಲ್ಲಿ ಅದೇರೀತಿ ಹಂಡೆಗೆ ಮಾಲಿಂಗಬಳ್ಳಿ ಸುತ್ತುತ್ತಿದ್ದೆವು ! ನಾವು ಈಗ ಪಟ್ಟಣದವರು - ಎಲೆಕ್ಟ್ರಿಕ್ ಗೀಸರ್ ಗೇ ಪೂಜೆ ಮಾಡಬೇಕು , ಹಿತ್ತಾಳೆ , ಸ್ಟೀಲ್ ನೀರುಕಾಯಿಸುವ ಬಾಯ್ಲರ್ ಗಳನ್ನೇ ತೊಳೆದು ನೀರು ತುಂಬಿಸಿಟ್ಟು - ಅದಕ್ಕೇ ಸುಣ್ಣ ಕೆಮ್ಮಣ್ಣು ಪಟ್ಟಿಹಚ್ಚಿ -
ಸಂಜೆ ದೇವರ ದೀಪಬೆಳಗಿಸಿ ತುಳಸಿ ಕಟ್ಟೆ ಮುಂಬಾಗಿಲ ಬಳಿ ದೀಪವಿರಿಸಿ - ನೀರುತುಂಬಿದ ಬಕೆಟ್ ಬಾಯ್ಲರ್ , ಗೀಸರ್ ಗಳಿಗೆ ಅರಿಶಿನಕುಂಕುಮ ಇರಿಸಿ ಪೂಜಿಸಬೇಕು ! ದೇವರ ಮನೆಯಲ್ಲಿ ಬೆಳ್ಳಿ ಅಥವಾ ಹಿತ್ತಾಳೆ ತಾಮ್ರದ ತಂಬಿಗೆಯಲ್ಲಿ ಶುದ್ಧವಾದ ನೀರು ತುಂಬಿಸಿಟ್ಟು ಅರಿಶಿನಕುಂಕುಮ ಗಂಧ ಹೂವು ಗೆಜ್ಜೆವಸ್ತ್ರಗಳಿಂದ ಪಿಳ್ಳಾರಿ ಗಣಪತಿ ಸಮೇತ ಗಂಗೆಯನ್ನು ಪೂಜಿಸಿ ಮಂಗಳಾರತಿ ಮಾಡಿ ದೀಪಾವಳಿ ಹಬ್ಬವನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ಬೇಡಿಕೊಂಡು ನಮಸ್ಕರಿಸಬೇಕು . ಈಬಾರಿ ವೈರಸ್ ಹಾವಳಿಯಿಂದ ಹಬ್ಬಗಳ ಆಚರಣೆಗೆ ಜನನೆಂಟರಿಷ್ಟರು ಸೇರುವುದನ್ನು ಹೊರತುಪಡಿಸಿದರೆ ಆಚರಣೆ ಪದ್ಧತಿ ಯಲ್ಲಿ ಯಾವುದಕ್ಕೂ ಕಡಿಮೆಯಾಗಲಾರದು , ಪಟಾಕಿಯ ಸದ್ದಿಗೆ ವಿರಾಮ ಹಾಕುವುದನ್ನು ಮರೆಯದಿರೋಣ !!
ಮೊದಲನೇ ದೀಪಾವಳಿಗೆ ಮಗಳುಅಳಿಯನನ್ನು ಕರೆಯುವ ಪದ್ಧತಿ ಇದೆ, ಪ್ರತೀಬಾರಿಯೂ ಕರೆಯಬಹುದು !! ಅಂತಹವರು -- ಇಂದಿನ ನೀರುತುಂಬುವ ಹಬ್ಬದಿಂದಲೇ ದೀಪಾವಳಿ ಹಬ್ಬಕ್ಕೆ ಶುಚಿ ರುಚಿಯಾದ ವಿಶೇಷ ಅಡಿಗೆ ಮಾಡಿ ಅಳಿಯನಿಗೆ ಬೀಗರಿಗೆ ಉಪಚಾರ ಮಾಡಲು ಶುರುವಾಗುತ್ತಾರೆ !!!
ಸ್ನೇಹಿತರೇ ಗುರುವಾರ ದೀಪಾವಳಿಹಬ್ಬ "ನರಕ ಚತುರ್ದಶಿ " ಹಬ್ಬದ ಬಗ್ಗೆ ಮತ್ತೆ ನಾಳೆ ವಿವರವಾಗಿ ತಿಳಿಸುತ್ತೇನೆ --
[3/11 2:01 ಅಪರಾಹ್ನ] Pandit Venkatesh. Astrologer. Kannada:
#ಯಮದೀಪಾರಾಧನೆ
ದಕ್ಷಿಣ ದಿಕ್ಕಿನಲ್ಲಿ ದಕ್ಷಿಣದ ಕಡೆ ಮುಖ ಮಾಡಿ ದೀಪವನ್ನು ಹಚ್ಚಬೇಕು . ಇದಕ್ಕೆ ಯಮ ದೀಪಾರಾಧನೆ ಅನ್ನುವರು ಯಾಕೆ ಹೀಗೆ ಏನಿದರ ಕಾರಣ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ .
ಒಂದು ದಿನ ಯಮಧರ್ಮರಾಜನು ತಂಗಿಯನ್ನು ನೋಡಲು ತಂಗಿಯ ಮನೆಗೆ ಹೋದನು ತಂಗಿ ಯಮಿ ಅಣ್ಣನನ್ನು ನೋಡಿ ಸಂತೋಷ ಕೊಂಡು ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಿ ಅಣ್ಣನ ಅರೈಕೆ ಮಾಡಿದಳು ತಂಗಿ ಇಟ್ಟಿರುವ ಅಣ್ಣನ
ಮೇಲೆ ಪ್ರೀತಿಯನ್ನೂ ನೋಡಿ ಅಣ್ಣ ತುಂಬಾ ಸಂತೋಷಪಟ್ಟನು.
ಇವರಿಬ್ಬರೂ ಸೂರ್ಯ ದೇವನ ಮಕ್ಕಳು ಯಮಧರ್ಮರಾಜನು ನ್ಯಾಯಕ್ಕೆ ಆದರೆ ತಂಗಿ ಯಮಿನಿ ಕಾಲಕ್ಕೆ ಅಧಿಪತಿಯಾದವಳು ಈಕೆಗೆ ಮುಂದೆ ಹೋಗುವುದು ಗೊತ್ತು ಆದರೆ ಹಿಂದೆ ಬರುವುದು ಗೊತ್ತಿಲ್ಲ ಆದೆ ಕಾಲ ಈ ಮಾಸದಲ್ಲಿ ಈ ದಿನ ಬಿಟ್ಟರೆ ಈ ಕಾರ್ತಿಕ ಮಾಸ ಮುಗಿಯುವದರೊಳಗೆ ಬೆಳಿಗ್ಗೆ ಅಥವಾ ಸಂಜೆ ಈ ದೀಪದ ಪೂಜೆ ಮಾಡಬಹುದು .
ತಂಗಿಯ ಈ ಪ್ರೀತಿಯನ್ನು ಕಂಡು ಅಣ್ಣ ಹೋಗುವಾಗ ಏನಾದರೂ ಕೇಳುತಂಗಿ ಕೊಡುವೆ ಎಂದು ಕೇಳಿದ ಅದಕ್ಕೆ ಯಮಿ ಅಣ್ಣ ಯಾರು ಈ ಮಾಸದಲ್ಲಿ ಈ ತಿಥಿಯಂದು ತಂಗಿಯ ಕೈ ಊಟ ಮಾಡುವರೊ ಅವರಿಗೆ ಅಕಾಲಮೃತ್ಯು ನಿವಾರಣೆ ಮಾಡು ಪ್ರತಿಯೊಂದು ಹೆಣ್ಣು ಮಕ್ಕಳು ಪ್ರತಿವರ್ಷವೂ ಅಣ್ಣ ಈ ಮಾಸದಲ್ಲಿ ಬರುವನು ಎಂದು ಎದುರು ನೋಡಲಿ ಎಂದು ವರವನ್ನು ಬೇಡಿಕೊಂಡಳು ಆಗ ಯಮಧರ್ಮರಾಜನು ತಂಗಿಗೆ ಸುಪ್ರಸನ್ನನಾಗಿ ವರವನ್ನು ಕೊಟ್ಟನು.
ಅಂದರಿಂದ ಈ ಮಾಸದಲ್ಲಿ ತಂಗಿ ಮನೆಗೆ ಹೋಗಿ ಊಟ ಮಾಡಿ ಬರುವುದು ಸಾಧ್ಯವಿಲ್ಲದೆ ಇರುವವರು ಪ್ರತಿಯೊಬ್ಬರು ಈ ಯಮ ದೀಪಾರಾಧನೆ ಮಾಡಿದರೆ ಅಕಾಲಮೃತ್ಯು ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.
ಆದ್ದರಿಂದ ಇವತ್ತು ಸಂಜೆ ಮನೆಯ ದಕ್ಷಿಣ ದಿಕ್ಕು ನೋಡುವಂತೆ ದೀಪವಿಟ್ಟು ದೀಪ ಬೆಳಗಬೇಕು ಆಗ ಈ ಕೆಳಗಿನ ಮಂತ್ರ ಹೇಳಬೇಕು ದೀಪ ಹಚ್ಚುವಾಗ .ನಂತರ ಶ್ಲೋಕ ಹೇಳಬೇಕು .
ದೀಪವನ್ನು ಇಡುವ ಮೊದಲು ನೆಲ ಒರಸಿ ರಂಗವಲ್ಲಿ ಹಾಕಿ ದೀಪವಿಟ್ಟು ಹೂ ಇಟ್ಟು ಅರಿಶಿನ ಕುಂಕುಮವಚ್ಚಿ ಹಚ್ಚಬೇಕು .
#ಯಮದೀಪ_ ಹಚ್ಚುವಾಗ ಈ ಮಂತ್ರ ಹೇಳಿ
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ || ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ll
ಅಂತ ಹೇಳುತ್ತಾ ದೀಪ ಹಚ್ಚಿ ನಂತರ ಈ ಸ್ತೋತ್ರ ಹೇಳಿ
#ಸ್ತೋತ್ರ
ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯ ಚ | ವೈವಸ್ವತಾಯ ಕಾಲಾಯ ಸರ್ವಭೂತ-ಕ್ಷಯಾಯ ಚ ||
ಔದುಂಬರಾಯ ದಧ್ಯಾಯ ನೀಲಾಯ ಪರಮೇಷ್ಟಿನೇ || ವೃಕೋದರಾಯ ಚಿತ್ತಾಯ ಚಿತ್ರಗುಪ್ತಾಯ ವೈ ನಮಃ ||
ಹೀಗೆ ಮಾಡಿದರೆ ಯಮನ ಅನುಗ್ರಹ ಸಿಗುತ್ತದೆ .
Post a Comment