ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ ಇಳಿಕೆ ಮಾಡಿದ ಬೆನ್ನಲ್ಲೇ ರಾಜ್ಯ ಸರಕಾರ 7 ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರವು ಇಂದು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ ರೂ.10 ಹಾಗೂ ರೂ. 5 ಕ್ಕೆ ಇಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿರುತ್ತದೆ. ಇದರಿಂದ ದಿ. 3-11-21ರಂದು ಇದ್ದ ಪೆಟ್ರೋಲ್ನ ಚಿಲ್ಲರೆ ಮಾರಾಟ ದರವು 113.93 ರೂ. ರಿಂದ 100.63 ರೂ.ಗೆ ಬರಲಿದ್ದು, ಒಟ್ಟಾರೆ ದರ ಕಡಿತ 13.30 ರೂ. ಆಗಲಿದೆ.
ಇನ್ನು ಡೀಸೆಲ್ ನ ಚಿಲ್ಲರೆ ಮಾರಾಟ ದರ ರೂ.104.50 ರಿಂದ ರೂ.85.03ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ರೂ.19.14 ಆಗಲಿದೆ.
Post a Comment