ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್11 ಗಂಟೆಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ

 ಜನವರಿ 31, 2022

,

8:14PM

ಎಫ್‌ಎಂ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-2023ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದಾದ ಬಳಿಕ ಶೀಘ್ರದಲ್ಲಿಯೇ ರಾಜ್ಯಸಭೆಯ ಮೇಜಿನ ಮೇಲೆ ಬಜೆಟ್ ಪ್ರತಿಯನ್ನು ಇಡಲಾಗುವುದು. 2022-23ರ ಕೇಂದ್ರ ಬಜೆಟ್‌ಗೆ ಅನುಮೋದನೆ ನೀಡಲು ನಾಳೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಪುಟದಿಂದ ಒಪ್ಪಿಗೆ ಪಡೆದ ನಂತರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಕೇಂದ್ರ ಬಜೆಟ್ ಅನ್ನು ನಾಳೆ ಲೋಕಸಭೆಯಲ್ಲಿ ಎರಡನೇ ಬಾರಿಗೆ ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ. ಈ ಹಿಂದೆ, 2021-22ರ ಕೇಂದ್ರ ಬಜೆಟ್ ಅನ್ನು ಕಳೆದ ವರ್ಷ ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ವಿತರಿಸಲಾಯಿತು.

Post a Comment

Previous Post Next Post