*ಸಧೃಢ ಕರ್ನಾಟಕ ಕಟ್ಟಲು 24/7 ಕೆಲಸ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಜನವರಿ 28:ಸಧೃಢ ಕರ್ನಾಟಕ ಕಟ್ಟಲು 24 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು *ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು* ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
*ಪ್ರಾದೇಶಿಕ ಅಸಮತೋಲನ ನಿವಾರಣೆ :*
ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗಾಗಿ 1500 ಕೋಟಿ ರೂ. ಖರ್ಚು ಮಾಡಿದರೆ ಮುಂದಿನ ವರ್ಷದಲ್ಲಿ 3000 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 14000 ಹುದ್ದೆಗಳಿಗೆ ಆರ್ಥಿಕ ಮಂಜೂರಾತಿ ನೀಡಲಾಗಿದೆ ಎಂದರು.
*ಸ್ಪಂದನಾಶೀಲ, ಸರ್ವಸ್ಪರ್ಶಿ ಸರ್ಕಾರ :*
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಸತಿ ಯೋಜನೆಗಳ ಬಾಕಿ ಇದ್ದ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಆರು ತಿಂಗಳಲ್ಲಿ ಹಲವಾರು ನಿರ್ಣಯಗಳಾಗಿವೆ.
ವಸ್ತುಸ್ಥಿತಿಯನ್ನು ಜನರ ಮುಂದಿಡುವ ಸಂದರ್ಭವಿದು. ಜನರ ಪರವಾಗಿ ಕೆಲಸಮಾಡುವ ಸರ್ಕಾರ ಬಂದಿದೆ ಎಂದು ಜನರು ಹರಸುತ್ತಾರೆ. ಸ್ಪಂದನಾಶೀಲ, ಸರ್ವಸ್ಪರ್ಶಿ ಸರ್ಕಾರವಾಗಿದ್ದು, ಕಟ್ಟಕಡೆಯ ವ್ಯಕ್ತಿಯ ಸ್ಥಾನದಲ್ಲಿ ಕುಳಿತು ಯೋಚಿಸುತ್ತಿದ್ದೇವೆ. ಅಭಿವೃದ್ದಿಯಾಗಲು ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿರಬೇಕು. ಪೋಲಿಸ್ ಇಲಾಖೆ ಇದನ್ನು ಅತ್ಯುತ್ತಮವಾಗಿ ಮಾಡಿದ್ದಾರೆ ಎಂದರು.
*ಯೋಜನೆಗಳ ಪರಿಣಾಮಗಳ ಅಧ್ಯಯನ*:
ಸರ್ಕಾರದ ಯೋಜನೆಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಿ ಅದರ ಪರಿಣಾಮಗಳ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಪುಸ್ತಕವನ್ನು ಹೊರತಂದಿದೆ. ಈ ಅಧ್ಯಯನವನ್ನು ಮುಂದುವರೆಸಿ, ಪ್ರತಿ ವಲಯದಲ್ಲಿ ಅದರ ಪರಿಣಾಮ, ಉತ್ತಮ ಅಂಶಗಳು ಹಾಗೂ ಕೊರತೆಗಳನ್ನು ಕಾಲಕಾಲಕ್ಕೆ ತಿಳಿಸುವಂತೆ ಮುಖ್ಯಮಂತ್ರಿಗಳು ಸಂಸ್ಥೆಯ ನಿರ್ದೇಶಕರಿಗೆ ತಿಳಿಸಿದರು.
ನಮ್ಮ ಗುರಿ ದೊಡ್ಡದು. ಇದರೊಂದಿಗೆ ಸವಾಲುಗಳೂ ಇವೆ. ಆದರೆ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವೂ ನಮಗಿದೆ. ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಲಾಗಿದೆ. ಪ್ರತಿ ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದ ಇಟ್ಟು ಜನರ ವಿಶ್ವಾಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ತಿಳಿಸಿದರು.
*ಆಕ್ರಮಣಕಾರಿ ಆಡವಾಡಲು ಸಿದ್ಧ:*
ಆಡಳಿತ ಫುಟ್ ಬಾಲ್ ಆಟವಿದ್ದಂತೆ. ಯಾರೂ ತಮ್ಮ ಹತ್ತಿರ ಹೆಚ್ಚು ಹೊತ್ತು ಚೆಂಡನ್ನು ಇಟ್ಟುಕೊಂಡಿರುವುದಿಲ್ಲ. ಸರಿಯಾದ ಸಮಯಕ್ಕೆ ಬೇರೆ ವ್ಯಕ್ತಿಗೆ ಚೆಂಡನ್ನು ಪಾಸ್ ಮಾಡುತ್ತಾರೆ. ಚೆಂಡು ಗೋಲ್ ತಲುಪಿಸುತ್ತಾರೆ. ಅದೇ ರೀತಿ ಆಡಳಿತವೂ ಕೂಡ ಎಂದು ಅವರು ಹೇಳಿದರು.
ನಮಗೆ ರಕ್ಷಣೆ ಹಾಗೂ ಆಕ್ರಮಣಕಾರಿ ಆಟವಾಡಲು ಗೊತ್ತಿದೆ. ನಮಗೆ ದೊರೆತಿರುವ ಅವಕಾಶವನ್ನು ಜನರ ಪರವಾಗಿ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
[ಸರ್ಕಾರದ 6 ತಿಂಗಳ ಅವಧಿಯ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ :*
*ಅರಿವಿನ ಜೊತೆ ಅಂತ:ಕರಣವುಳ್ಳ ಸರ್ಕಾರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಜನವರಿ 28 :
ನಮ್ಮದು ಅರಿವಿನ ಜೊತೆಗೆ ಅಂತ:ಕರಣವುಳ್ಳ ಮಾನವೀಯತೆಯ ಗುಣಧರ್ಮದ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.
ಅವರು ತಮ್ಮ ನೇತೃತ್ವದ ಸರ್ಕಾರ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಗತಿಯ ಮಾಹಿತಿ ನೀಡುವ ' ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ' ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅರಿವೇ ಗುರು ಎಂದು ನಂಬಿರುವ ನಮಗೆ ಜನರಿಂದ, ಜನರಿಗೋಸ್ಕರ, ಜನಕಲ್ಯಾಣಕ್ಕಾಗಿ ದುಡಿಯುಬೇಕೆಂಬ ಅರಿವಿದೆ. ನಾವು ತೆಗೆದುಕೊಳ್ಳುವ ಪ್ರತಿ ನಿರ್ಣಯದಲ್ಲಿ ಸಾರ್ವಜನಿಕ ಹಿತವೇ ಕೇಂದ್ರಬಿಂದುವಾಗಿದೆ. ಜನಹಿತದ ನಿರ್ಣಯಗಳಲ್ಲಿ ಸಚಿವ ಸಂಪುಟದ ಸಂಪೂರ್ಣ ಸಹಕಾರವಿದೆ ಎಂದರು.
*ಕೋವಿಡ್ ಸಂದರ್ಭದಲ್ಲಿ 24,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮ*
ಕೋವಿಡ್ ಸಂದರ್ಭದಲ್ಲಿಯೂ 24,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕವನ್ನು ಮುನ್ನೆಡೆಸುವ ಕೆಲಸವನ್ನು ಮಾಡಲಾಗಿದೆ. ಪ್ರವಾಹದಿಂದಾದ ಬೆಳೆಹಾನಿಗೆ ಪರಿಹಾರವನ್ನು ದುಪ್ಪಟ್ಟು ಹೆಚ್ಚಿಸಲಾಗಿದ್ದು, 14 ಲಕ್ಷ ರೈತರಿಗೆ ಪರಿಹಾರವನ್ನು ನೀಡಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ವೇತನವನ್ನು ಹೆಚ್ಚಿಸಲಾಗಿದ್ದು, 58 ಲಕ್ಷ ಹಿರಿಯರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಸಹಾಯ ಮಾಡುವ ಸರ್ಕಾರದ ಅಂತ:ಕರಣದ ಮತ್ತೊಂದು ಮುಖವಾಗಿದೆ ಎಂದು ತಿಳಿಸಿದರು.
ರೈತಾಪಿ ಯುವಕರಿಗೆ ವಿದ್ಯೆ ಹಾಗೂ ಉದ್ಯೋಗ ನೀಡಲು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಸುಮಾರು 4.50 ಲಕ್ಷ ಮಕ್ಕಳು ರೈತ ವಿದ್ಯಾ ನಿಧಿಯ ಲಾಭವನ್ನು ಪಡೆದಿದ್ದಾರೆ. ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದರು.
ಸಮರ್ಥ ಆಡಳಿತ ನೀಡಿದ ಪರಂಪರೆಯನ್ನು ರಾಜ್ಯದಲ್ಲಿದೆ. ಕರ್ನಾಟಕದ ಎಲ್ಲ ಸರ್ಕಾರಗಳು ನಾಡು ಕಟ್ಟುವ ಕೆಲಸದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಾಡು ನುಡಿ, ಜಲ ವಿಷಯಗಳು ಬಂದಾಗ ರಾಜಕಾರಣ ಮರೆತು ಎಲ್ಲ ಪಕ್ಷದವರೂ ಒಂದಾಗಿ ಹೋರಾಡುವುದು ನಮಗೆ ಬಳುವಳಿಯಾಗಿ ಬಂದಿದೆ ಎಂದರು.
ಭಾರತದಲ್ಲಿ ಅತ್ಯಂತ ಮೂಲಭೂತ ಕೈಗಾರಿಕಾ ಕೇಂದ್ರಗಳು ಕರ್ನಾಟಕದಲ್ಲಿವೆ. 180 ವಿಶ್ವದರ್ಜೆಯ ಸಂಶೋಧನಾ ಕೇಂದ್ರಗಳು ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿದು , ಇದರ ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ನೈಸರ್ಗಿಕವಾದ, ವೈಜ್ಞಾನಿಕ ಸಂಪನ್ಮೂಲ, ಮಾನವ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ರಾಜ್ಯ ಕಟ್ಟಲು ಬಳಸುವುದರ ಮೇಲೆ ರಾಜ್ಯದ ಭವಿಷ್ಯ ತೀರ್ಮಾನವಾಗುತ್ತದೆ. ಐದು ಮುಖ್ಯಮಂತ್ರಿಗಳ ಜೊತೆಯಲ್ಲಿ ಕೆಲಸ ಮಾಡಿ ಆಡಳಿತ ವ್ಯವಸ್ಥೆಯನ್ನು ಸಮೀಪದಿಂದ ನೋಡಿದ್ದೇನೆ. ಆದರೆ ರಾಜ್ಯದಲ್ಲಿ ಪ್ರವಾಹ , ಆರೋಗ್ಯ ತುರ್ತು ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಜನರ ಜೀವನದ ಜೊತೆಗೆ ಅವರ ಬದುಕನ್ನೂ ಉಳಿಸಬೇಕಿತ್ತು. ಪ್ರಕೃತಿ ವಿಕೋಪದಿಂದ ಜನರನ್ನು ಉಳಿಸಿ ಅವರ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಲ್ಲುವ ಜವಾಬ್ದಾರಿಯ ಜೊತೆಗೆ ಜನರಿಗೆ,ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಎಸ್ ಸಿ ಎಸ್‍ಟಿ ಜನರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ ಎಂದರು.
*ರಾಜ್ಯದ ಸಮಗ್ರ ಅಭಿವೃದ್ಧಿ :*
ಜನರನ್ನು ಫಲಾನುಭವಿಗಳನ್ನಾಗಿ ಮಾಡುವುದಲ್ಲ, ಪಾಲುದಾರರನ್ನಾಗಿ ಮಾಡಬೇಕೆನ್ನುವುದು ಸರ್ಕಾರದ ಗುರಿ. ತಲಾವಾರು ಆದಾಯದಲ್ಲಿ ಕರ್ನಾಟಕ 4 ನೇ ಸ್ಥಾನದಲ್ಲಿದ್ದು, ಕೇವಲ ಶೇ.30 ರಷ್ಟು ಜನ ಮಾತ್ರ ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. 70% ಜನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಆರ್ಥಿಕ ಬಲವನ್ನು ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ.7500 ಸ್ತ್ರೀಶಕ್ತಿ ಸಂಘಗಳಿಗೆ ಧನಸಹಾಯ, ಉದ್ಯೋಗ ನೀತಿಯ ಮೂಲಕ ಯುವಕರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
*ಕೃಷಿ ಕ್ಷೇತ್ರದ ಅಭಿವೃದ್ಧಿ:*
ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಗಳ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೆಕಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಹೈನುಗಾರಿಕೆ, ರೇಶ್ಮೆ, ತೋಟಗಾರಿಕೆ ಹಲವಾರು ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
*ದುಡಿಮೆಯೇ ದೊಡ್ಡಪ್ಪ :*
ದುಡಿಯುವ ವರ್ಗದಿಂದಲೇ ಆರ್ಥಿಕತೆಯ ಬೆಳವಣಿಗೆ ಸಾಧ್ಯ. ದುಡಿಮೆಯೇ ದೊಡ್ಡಪ್ಪ ಎಂಬುದು ಸರ್ಕಾರದ ಧ್ಯೇಯ.ಕೈಗಾರಿಕೆಗಳಿಗೆ ಆಧುನಿಕತೆ ಸ್ಪರ್ಶ, ಕೈಗಾರಿಕಾ ಸ್ನೇಹಿ ನೀತಿಗಳು, ಸಂಶೋಧನೆಗಳು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ. ದೇಶದ ವಿದೇಶಿ ಬಂಡವಾಳದ ಶೇ.45 ಕರ್ನಾಟಕದಲ್ಲಿ ಆಗಲಿರುವುದ ಹೆಮ್ಮೆಯ ಸಂಗತಿ. ಈಸ್ ಆಫ್ ಡೂಯಿಂಗ್ ಬಿಸನೆಸ್, ಸ್ಟಾರ್ಟಪ್‍ಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ತನ್ಮೂಲಕ ಕರ್ನಾಟಕದ ಜಿಡಿಪಿ ಅಭಿವೃದ್ಧಿಯಾಗುತ್ತದೆ. ದೂರದೃಷ್ಟಿ ಹಾಗೂ ಯೋಜನಾಬದ್ಧವಾದ ಕಾರ್ಯಕ್ರಮಗಳನ್ನು ಎಲ್ಲ ವಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
*ಗ್ರಾಮೀಣಾಭಿವೃದ್ಧಿ :*
ಅಮೃತ ಯೋಜನೆಗಳ ಮೂಲಕ 750 ಗ್ರಾಮ ಪಂಚಾಯತಿಗಳ ಅಭಿವೃದ್ಧಿ, ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮಸ್ಥರ ಜೀವನ ಗುಣಮಟ್ಟ ಸುಧಾರಣೆ, ಹಿಂದುಳಿದ ವರ್ಗ, ಎಸ್ ಸಿ ಎಸ್ ಟಿ ಗಳ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸ್ವಾಭಿಮಾನದ ಸ್ವಾವಲಂಬನೆಯ ಬದುಕು ನೀಡುವುದು ಸರ್ಕಾರದ ಚಿಂತನೆ ಎಂದು ತಿಳಿಸಿದರು.
*ಆರೋಗ್ಯ ಮತ್ತು ಶಿಕ್ಷಣ:*
ಕೋವಿಡ್‍ನ ಎರಡನೇ ಹಾಗೂ ಮೂರನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ವೃದ್ಧಿಸಲಾಗಿದೆ. ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಅಭಿವೃದ್ಧಿ ತರಲಾಗಿದೆ. ಹಿಂದುಳಿದವರ್ಗ, ಎಸ್‍ಸಿ ಎಸ್‍ಟಿ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣವನ್ನು ನೀಡುವುದೇ ಸರ್ಕಾರದ ಗುರಿಯಾಗಿದೆ ಎಂದರು
......mmm
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡು ಆರು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ಬೊಮ್ಮಾಯಿ ಅವರ ಹುಟ್ಟುಹಬ್ಬ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಪಕ್ಷದ ವತಿಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು. ಸಚಿವರಾದ ಆನಂದ್ ಸಿಂಗ್ , ಸಂಸದ ಪಿಸಿ ಮೋಹನ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
[ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ದೂರವಾಣಿ ಮೂಲಕ ಶುಭಹಾರೈಸಿದ ಗಣ್ಯರ ಹೆಸರುಗಳು
ರಾಷ್ಟ್ರಪತಿ ರಾಮನಾಥ್ ಕೋವಿಂದ್
ನರೇಂದ್ರ ಮೋದಿ, ಪ್ರಧಾನಮಂತ್ರಿ
ಅಮಿತ್ ಶಾ, ಕೇಂದ್ರ ಗೃಹ ಸಚಿವರು
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಜೆ ಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್
ಕೇಂದ್ರ ಲೋಕಸಭೆ ಸ್ಪೀಕರ್ ಓಂ
ಕೇಂದ್ರ ಸಚಿವ ಭಗವಂತ ಖೂಬಾ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ
ದೇವೇಂದ್ರ ಫಡ್ನವಿಸ್
ತಿರುಪತಿ ತಿರುಮಲ ಟ್ರಸ್ಟ ಅಧ್ಯಕ್ಷರು
ವೆಂಕಯ್ಯ ನಾಯ್ಡು
ಸಿದ್ದರಾಮಯ್ಯ
ಎಚ್ ಡಿ ಕುಮಾರಸ್ವಾಮಿ
ಎಚ್ ಕೆ ಪಾಟೀಲ್
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು
ತುಮಕೂರಿನ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು
ಮೈಸೂರಿನ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿಡಿಯೋ,
ಸಿದ್ದೇಶ್ವರ ಸ್ವಾಮಿಜಿ
Post a Comment