ಸಾಮರ್ಥ್ಯ ನಿರ್ಮಾಣ ಯೋಜನೆಯ ಮುನ್ನೊಟ ದಾಖಲೆ ಪತ್ರಗಳ ಬಿಡುಗಡೆ ಮತ್ತು 'ಮಿಷನ್ ಕರ್ಮಯೋಗಿ' ಅಡಿ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ತರಬೇತಿ ಮಾಡ್ಯೂಲ್‌ಗಳ ಬಿಡುಗಡೆ
ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್ ಅವರು ಇಂದು ಮಿಷನ್ ಕರ್ಮಯೋಗಿ ಅಡಿ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ಸಾಮರ್ಥ್ಯ ನಿರ್ಮಾಣ ಯೋಜನೆಯ ಮುನ್ನೊಟ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದರು. ಸಾಮರ್ಥ್ಯ ನಿರ್ಮಾಣ ಆಯೋಗದ(ಸಿಬಿಸಿ) ಅಧ್ಯಕ್ಷ ಶ್ರೀ ಅದಿಲ್ ಜೈನುಲ್ ಭಾಯ್, ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯಂ ವಿಶೇಷ ಕಾರ್ಯದರ್ಶಿ ಶ್ರೀಮತಿ ಅನಿತಾ ಪ್ರವೀಣ್ ಸಮ್ಮುಖದಲ್ಲಿ ಸಚಿವರು ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿದರು.
ಸದಸ್ಯ - ಎಚ್ ಆರ್ , ಸಿಬಿಸಿ ಡಾ. ಬಾಲಸುಬ್ರಮಣ್ಯಂ, ಶ್ರೀ ಪ್ರವೀಣ್ ಪರದೇಶಿ (ಸದಸ್ಯ-ಆಡಳಿತ ಸಿಬಿಸಿ), ಶ್ರೀ ಮಿನ್ಹಾಜ್ ಆಲಂ (ಜಂಟಿ ಕಾರ್ಯದರ್ಶಿ), ಡಾ. ಚಿಂದಿ ವಾಸುದೇವಪ್ಪ (ನಿರ್ದೇಶಕರು, ಎನ್ ಐಎಫ್ ಟಿಇಎಂ, ಸೋನೆಪತ್), ಡಾ. ಸಿ. ಆನಂದರಾಮಕೃಷ್ಣನ್ (ನಿರ್ದೇಶಕರು ತಂಜಾವೂರು), ಶ್ರೀ ಹೇಮಂಗ್ ಜಾನಿ (ಕಾರ್ಯದರ್ಶಿ, ಸಿಬಿಸಿ) ಮತ್ತು ಡಾ. ಅತ್ಯಾ ನಂದ್ (ಸಚಿವಾಲಯ ನಿರ್ದೇಶಕರು) ಉಪಸ್ಥಿತರಿದ್ದರು.
ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ಸಾಮರ್ಥ್ಯ ನಿರ್ಮಾಣ ಯೋಜನೆಯ ಮುನ್ನೊಟ ದಾಖಲೆ ಪುಸ್ತಿಕೆಗಳನ್ನು ಸಾಮರ್ಥ್ಯ ನಿರ್ಮಾಣ ಆಯೋಗದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಮಿಷನ್ ಕರ್ಮಯೋಗಿ ಅಡಿ ಸಾಮರ್ಥ್ಯ ವರ್ಧನೆಯ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸುತ್ತಿರುವ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮೊದಲನೆಯದಾಗಿದೆ.
ಆಹಾರ ಸಂಸ್ಕರಣಾ ವಲಯಕ್ಕೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಮೂಲಕ ಉದ್ಯೊಗಿಗಳಿಗೆ ಹೆಚ್ಚು ಸೃಜನಾತ್ಮಕ, ಪೂರ್ವಭಾವಿ, ವೃತ್ತಿಪರ, ತಂತ್ರಜ್ಞಾನ-ಶಕ್ತ, ದಕ್ಷ, ಹೊಣೆಗಾರಿಕೆ ಮತ್ತು ನಾಗರಿಕ ಕೇಂದ್ರಿತವಾಗಲು ಅನುವು ಮಾಡಿಕೊಡುವುದು ಸಚಿವಾಲಯದ ಸಾಮರ್ಥ್ಯ ನಿರ್ಮಾಣ ಯೋಜನೆಯ ಉದ್ದೇಶವಾಗಿದೆ. ಸಚಿವಾಲಯದ ಸುಮಾರು 150 ಉದ್ಯೊಗಿಗಳಿಗೆ ನಡವಳಿಕೆ, ಕ್ರಿಯಾತ್ಮಕ ಮತ್ತು ಪ್ರಮುಖ ಸಾಮರ್ಥ್ಯಗಳನ್ನು ನಿರ್ಮಿಸಲು ಮತ್ತು ಬಲಪಡಿಸಲು ತರಬೇತಿ ನೀಡಲಾಗುತ್ತದೆ.
ಎನ್ಐಎಫ್ ಟಿಇಎಂ ಸೋನೆಪತ್ ಮತ್ತು ಎನ್ಐಎಫ್ ಟಿಇಎಂ ತಂಜಾವೂರಿನ ಮೂಲಕ ಅಭಿವೃದ್ಧಿಪಡಿಸಿದ ಸಾಮರ್ಥ್ಯ ನಿರ್ಮಾಣದ ವಿವಿಧ ತರಬೇತಿ ಮಾಡ್ಯೂಲ್‌ಗಳನ್ನು ಸಹ ಕಾರ್ಯಕ್ರದಲ್ಲಿ ಬಿಡುಗಡೆ ಮಾಡಲಾಯಿತು.
***
(Release ID: 1793327) Visitor Counter : 8
Post a Comment