ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಬಸವರಾಜ್ ಬೊಮ್ಮಾಯಿ
ಗೋ ಗಳ ಸಂರಕ್ಷಣೆಗೆ ತಾವೇ ಮೇಲ್ಪಂಕ್ತಿ ಹಾಕಿಕೊಟ್ಟ ಸಿಎಂ
ಬೆಂಗಳೂರು:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ತಮ್ಮ 62ನೇ ಹುಟ್ಟುಹಬ್ಬದ ಅಂಗವಾಗಿ ಒಟ್ಟು 11 ಹಸುಗಳನ್ನು ಆಜೀವ ದತ್ತು ಪಡೆದರು.
ರಾಷ್ಟ್ರೋತ್ಥಾನ ಗೋ ಶಾಲೆಯ 11 ಹಸುಗಳನ್ನು ಅವರು ಇಂದು ದತ್ತು ಪಡೆದರು.
ಹುಟ್ಟುಹಬ್ಬದ ಅಂಗವಾಗಿ ಹಸು ಮತ್ತು ಕರುವನ್ನು ಇಂದು ಮುಂಜಾನೆ ಬೊಮ್ಮಾಯಿ ಪತ್ನಿ ಚನ್ನಮ್ಮ ಅವರ ಜತೆ ಪೂಜೆ ನೆರವೇರಿಸಿದರು.
ನಂತರ ಹಸುವನ್ನು ಮನೆಯಲ್ಲಿ ಕರೆದುಕೊಂಡು ಗೋ ಗ್ರಾಸ ನೀಡಿದರು. ಆ ಮೂಲಕ ಗೋ ಸಂತತಿ ರಕ್ಷಣೆಗೆ ಮೇಲ್ಪಂಕ್ತಿ ಹಾಕೊಕೊಟ್ಟರು. ಗೋ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಸಾರಿದರು.
ಈ ಸಂದರ್ಭದಲ್ಲಿ ಕುಟುಂಬದ ಇತರೆ ಸದಸ್ಯರು ಇದ್ದರು.
Post a Comment