ಬಿಬಿಎಂಪಿ ಚುನಾವಣೆಯಲ್ಲಿ ಭಾಜಪ ಗೆಲ್ಲುವ ಆತ್ಮವಿಶ್ವಾಸವಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ,ಬಿಬಿಎಂಪಿ ಚುನಾವಣೆಯಲ್ಲಿ ಭಾಜಪ ಪಕ್ಷದ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸರ್ಕಾರ ಮಾಡಿರುವ ಜನೋಪಯೋಗಿ ಕೆಲಸಗಳ ಬಗ್ಗೆ ಜನರಿಗೆ ತಿಳಿಹೇಳಬೇಕು. ಬೆಂಗಳೂರಿನ ಜನ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಆತ್ಮವಿಶ್ವಾಸದಿಂದ ಬೆಂಗಳೂರಿನಲ್ಲಿ ಪ್ರಚಾರವನ್ನು ಕೈಗೊಳ್ಳುವಂತೆ ಪಕ್ಷದ ಕಾರ್ಯಕರ್ತರಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದರು.
*ರಾಜ್ಯದ ಪ್ರತಿ ವಲಯದಲ್ಲಿ ಸ್ಪಂದನಾಶೀಲತೆ:*
ಪ್ರವಾಹದಿಂದಾದ ಬೆಳೆಹಾನಿಗೆ ದುಪ್ಪಟ್ಟು ಪರಿಹಾರ, ಸಂಧ್ಯಾಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ವೇತನ ಸೇರಿದಂತೆ 58 ಲಕ್ಷ ಫಲಾನುಭವಿಗಳು ಲಾಭ, ಕೋವಿಡ್ ನಿಂದ ಮೃತಪಟ್ಟವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 1.50 ಲಕ್ಷ ಪರಿಹಾರ, ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುವ ಅಕ್ಕಿ, ಗೋಧಿ ಹಾಗೂ ರಾಗಿ ಹೆಚ್ಚಳ, ರಾಜ್ಯ ಸರ್ಕಾರದಿಂದ 5 ಲಕ್ಷ ಮನೆಗಳು ಹಾಗೂ ಕೇಂದ್ರ ಸರ್ಕಾರದಿಂದ 6.50 ಲಕ್ಷ ಮನೆಗಳ ಮಂಜೂರು, 7500 ಸ್ತ್ರೀ ಶಕ್ತಿ ಸಂಘಗಳಿಗೆ 1 ಲಕ್ಷ ಧನಸಹಾಯ ,750 ಅಂಗನವಾಡಿಗೆ ತಲಾ ಒಂದು ಲಕ್ಷ , ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ 20 ಲಕ್ಷ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ 20 ಲಕ್ಷ, 75000 ಓಬಿಸಿ , ಎಸ್ ಸಿ ಎಸ್ ಟಿ ಮಕ್ಕಳಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ನೀಡುವ ಕೆಲಸ. ಹೀಗೆ ಪ್ರತಿ ವಲಯದಲ್ಲಿಯೂ ಸ್ಪಂದನೆಯಿಂದ ಕಾರ್ಯನಿರ್ವಹಿಸಲಾಗಿದೆ ಎಂದರು.
*ಸರ್ವಸ್ಪರ್ಶಿ ಹಾಗೂ ಸರ್ವವ್ಯಾಪಿ ಸರ್ಕಾರ :*
ನಮ್ಮ ಸರ್ಕಾರ ಸರ್ವಸ್ಪರ್ಶಿ ಹಾಗೂ ಸರ್ವವ್ಯಾಪಿ ಅಕ್ಷರಶ: ಪಾಲನೆ ಮಾಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 6000 ಕೋಟಿ ಅಲ್ಲದೇ 1500 ಕೋಟಿ ರೂ. ರಾಜಕಾಲುವೆ ಪುನರ್ ನಿರ್ಮಾಣಕ್ಕೆ , 2300 ಕೋಟಿ 12 ಕಾರಿಡಾರ್ ಗಳ ಅಭಿವೃದ್ಧಿ, 75 ಸ್ಲಂಗಳ ಅಭಿವೃದ್ಧಿ, 75 ಕೆರೆ ಪಾರ್ಕ್ ಅಭಿವೃದ್ಧಿಯನ್ನು ಅಮೃತ ಯೋಜನೆಗಳಡಿ ಪ್ರಾರಂಭಿಸಲಾಗಿದೆ. ಹಂತಹಂತವಾಗಿ ಅಭಿವೃದ್ಧಿಯನ್ನು ಮೇರುಪಂಕ್ತಿಗೆ ಒಯ್ಯುವ ಕೆಲಸ ಮಾಡಲಾಗುತ್ತಿದೆ ಎಂದರು.
6 ತಿಂಗಳ ಆಡಳಿತದಲ್ಲಿ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಲಾಗಿದೆ. ಕಠಿಣ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಮತ್ತು ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದರು ತಿಳಿಸಿದರು.
*ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿಸುವ ಸಂಕಲ್ಪ :*
ಸಕಲ ಸೌಲಭ್ಯಗಳನ್ನು ಪೂರೈಸಿ ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿಸುವ ಸಂಕಲ್ಪವನ್ನು ಸರ್ಕಾರ ಮಾಡಿದೆ. ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಂಗಳೂರಿನ ಮೂರು ಸಂಸದರು, ಬೆಂಗಳೂರಿನ ಎಲ್ಲ ಸಚಿವರು, ಶಾಸಕರು ನೀಡಿರುವ ಸಹಕಾರಕ್ಕಾಗಿ ಧನ್ಯವಾದಗಳನ್ನರ್ಪಿಸಿದರು.
ಬೆಂಗಳೂರಿನಲ್ಲಿ ಭಾಜಪ ಪಕ್ಷ ಕಟ್ಟಲು ಕೊಡುಗೆ ನೀಡಿರುವ ಹಲವರು ನಾಯಕರಿಗೆ ಅಭಿನಂದಿಸಿದರು. ರಾಜ್ಯದಲ್ಲಿ ತಳಹಂತದಿಂದ ಭಾಜಪ ಪಕ್ಷ ವನ್ನು ಕಟ್ಟಲು ಹಿರಿಯ ನಾಯಕರಾದ ಯಡಿಯೂರಪ್ಪನವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
Post a Comment